ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಶೂಟಿಂಗ್ ನಿಂತು ಹೋದ ಕಾರಣ ಕನ್ನಡದ ಹೆಚ್ಚಿನ ಧಾರಾವಾಹಿಗಳು ಪ್ರಸಾರವಾಗುತ್ತಿರಲಿಲ್ಲ. ಹಿಂದಿಯ ಜನಪ್ರಿಯ ಧಾರಾವಾಹಿಯಾದ ಮಹಾಭಾರತ ಕನ್ನಡಕ್ಕೆ ಡಬ್ ಆಗಿತ್ತು.
ಮಹಾಭಾರತ ಧಾರಾವಾಹಿಯನ್ನು ಜನ ಮೆಚ್ಚಿಕೊಂಡಿದ್ದು, ಧಾರಾವಾಹಿ ಆರಂಭವಾದ ದಿನಗಳಿಂದಲೂ ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಸೋಮವಾರದಿಂದ ಶನಿವಾರದವರೆಗೆ ಸಂಜೆ 7ರಿಂದ 8.30ರವರೆಗೆ ಅಂದರೆ ಬರೋಬ್ಬರಿ ಒಂದೂವರೆ ಗಂಟೆಗಳ ಕಾಲ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ಸದ್ಯ ಬಿ.ಎಸ್.ಯಡಿಯೂರಪ್ಪ ಇಷ್ಟಪಟ್ಟಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
"ಜನರಿಗೆ ಜೀವನದಲ್ಲಿ ಮೌಲ್ಯಗಳು ತುಂಬಾ ಮುಖ್ಯ. ಆ ಮೌಲ್ಯಗಳನ್ನು ಮಹಾಭಾರತ ಧಾರಾವಾಹಿ ಹೇಳಿಕೊಡುತ್ತಿದೆ. ಮಹಾಭಾರತ ಧಾರಾವಾಹಿ ಆರಂಭವಾದಾಗಿನಿಂದ ತಪ್ಪದೇ ಧಾರಾವಾಹಿ ನೋಡುತ್ತಿರುವ ನಾನು ಇದೀಗ ಮಹಾಭಾರತ ಧಾರವಾಹಿಯ ಅಭಿಮಾನಿ ಎಂದರೆ ತಪ್ಪಾಗಲಾರದು. ಅದರಲ್ಲೂ ನನಗೆ ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರ ಎಂದರೆ ತುಂಬಾ ಇಷ್ಟ. ಧಾರಾವಾಹಿಯಲ್ಲಿ ಶ್ರೀಕೃಷ್ಣ ಮಾತನಾಡುವ, ಬೋಧಿಸುವ ಮಾತುಗಳು ನಮ್ಮ ಜೀವನಕ್ಕೆ ಸಂಬಂಧಿಸಿದ್ದಾಗಿವೆ" ಎಂದು ಮಹಾಭಾರತ ಧಾರಾವಾಹಿಯನ್ನು ಸಿಎಂ ಕೊಂಡಾಡಿದ್ದಾರೆ.