ಬೆಂಗಳೂರು: ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರಿಗೆ ಇಂದು 60ನೇ ಹುಟ್ಟುಹಬ್ಬದ ಸಂಭ್ರಮ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ವಿಶ್ವನಾಥ್ ಅವರಿಗೆ ಶುಭ ಕೋರಿದ್ದಾರೆ.
ದೆಹಲಿ ಪ್ರವಾಸಕ್ಕೂ ಮುನ್ನ ಯಲಹಂಕ ಹೋಬಳಿಯ ಸಿಂಗನಾಯಕನ ಹಳ್ಳಿಯ ಶಾಸಕ ವಿಶ್ವನಾಥ್ ನಿವಾಸಕ್ಕೆ ಭೇಟಿ ನೀಡಿದರು. ನಂತರ ಮಾತನಾಡುತ್ತಾ, ವಿಶ್ವನಾಥ್ ಜನಪರ ಕೆಲಸ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ. ಅತ್ಯುತ್ತಮ ಶಾಸಕರಲ್ಲಿ ಅವರು ಕೂಡ ಒಬ್ಬರು. ಅವರ ಸೇವೆ ನಿರಂತರವಾಗಿ ಕ್ಷೇತ್ರದ ಜನತೆಗೆ ಸಿಗಲಿ. ಬಹಳ ದೊಡ್ಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿಶ್ವನಾಥ್ ಬಹಳ ದೂರದೃಷ್ಟಿ ಇರಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ: ಮತ್ತೆ ಚಿಗುರೊಡೆದ ಸಚಿವ ಸ್ಥಾನ ಆಕಾಂಕ್ಷಿಗಳ ಆಸೆ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ವಿಶ್ವನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.