ETV Bharat / state

ನನೆಗುದಿಗೆ ಬಿದ್ದಿದ್ದ ಪಶು ವೈದ್ಯರ ನೇಮಕಾತಿಗೆ ಸಿಎಂ ಅನುಮತಿ : ಸಚಿವ ಪ್ರಭು ಚೌಹಾಣ್ - ಶೀಘ್ರದಲ್ಲೆ ಪಶು ವೈದ್ಯರ ನೇಮಕಾತಿ

ನಮ್ಮ ಇಲಾಖೆಯಲ್ಲಿ ಸುಮಾರು 1,083 ಹುದ್ದೆಗಳು ಖಾಲಿ ಇವೆ. ನಾನು 900 ಹುದ್ದೆಗಳ ಭರ್ತಿಗೆ ಕೇಳಿದ್ದೆ. ಈಗ ಸಿಎಂ 400 ಹುದ್ದೆ ಭರ್ತಿಗೆ ಸಮ್ಮತಿಸಿದ್ದಾರೆ. ಇದರ ಜೊತೆ 58 ಬ್ಯಾಕ್​​ಲಾಗ್ ಹುದ್ದೆಯನ್ನು ನೇಮಕ ಮಾಡಲಾಗುವುದು‌. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ಅನುಮತಿ ಸಿಗಲಿದೆ..

Appointment of veterinary doctors soon
ಶೀಘ್ರದಲ್ಲೆ ಪಶು ವೈದ್ಯರ ನೇಮಕಾತಿ
author img

By

Published : Dec 31, 2021, 5:46 PM IST

ಬೆಂಗಳೂರು : ನನೆಗುದಿಗೆ ಬಿದ್ದಿದ್ದ ಪಶು ವೈದ್ಯರ ನೇಮಕಾತಿಗೆ ಸಿಎಂ ಬಸವರಾಜ ಬೊಮ್ಮಾಯಿ ಅನುಮತಿ ನೀಡಿದ್ದಾರೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದರು.

ಶೀಘ್ರದಲ್ಲೇ ಪಶು ವೈದ್ಯರ ನೇಮಕಾತಿ ಮಾಡುವ ಕುರಿತಂತೆ ಸಚಿವ ಪ್ರಭು ಚೌಹಾಣ್​ ಮಾಹಿತಿ ನೀಡಿರುವುದು..

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಬಂದು ಎರಡೂವರೆ ವರ್ಷ ಆಯ್ತು. ನಾನು ಎಲ್ಲಿ ಹೋದ್ರೂ ಪಶು ವೈದ್ಯರ ಕೊರತೆ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇದೀಗ ಆ ಸಮಸ್ಯೆ ನಿವಾರಣೆಯಾಗಿದೆ. 458 ಪಶು ವೈದ್ಯರ ನೇಮಕಾತಿಗೆ ಸಿಎಂ ಅನುಮತಿ ನೀಡಿದ್ದಾರೆ ಎಂದರು.

ನಮ್ಮ ಇಲಾಖೆಯಲ್ಲಿ ಸುಮಾರು 1,083 ಹುದ್ದೆಗಳು ಖಾಲಿ ಇವೆ. ನಾನು 900 ಹುದ್ದೆಗಳ ಭರ್ತಿಗೆ ಕೇಳಿದ್ದೆ. ಈಗ ಸಿಎಂ 400 ಹುದ್ದೆ ಭರ್ತಿಗೆ ಸಮ್ಮತಿಸಿದ್ದಾರೆ. ಇದರ ಜೊತೆ 58 ಬ್ಯಾಕ್​​ಲಾಗ್ ಹುದ್ದೆಯನ್ನು ನೇಮಕ ಮಾಡಲಾಗುವುದು‌. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ಅನುಮತಿ ಸಿಗಲಿದೆ ಎಂದು ತಿಳಿಸಿದರು.

ಜಿಲ್ಲೆಗಳಲ್ಲಿ ಗೋ ಶಾಲೆಗಳ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಪ್ರಸ್ತುತ 19 ಜಿಲ್ಲೆಗಳಲ್ಲಿ ಗೋ ಶಾಲೆ ನಿರ್ಮಾಣಕ್ಕೆ ಪೂರ್ವ ಸಿದ್ಧತೆಗಳು ನಡೆದಿವೆ. ಈ ಸಂಬಂಧ ಬೇರೆ ಬೇರೆ ಕಡೆ ನಾನು ಭೇಟಿ ನೀಡಿದ್ದೇನೆ. 11 ಜಿಲ್ಲೆಗಳಲ್ಲಿ ಗೋ ಶಾಲೆಗೆ ಸ್ಥಳ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಒಂದು ಗೋ ಶಾಲೆಗೆ 2 ಕೋಟಿ ರೂ. ಬೇಕು. ಸರ್ಕಾರ ಒಂದು ಗೋಶಾಲೆಗೆ 50 ಲಕ್ಷ ರೂ. ಹಂಚಿಕೆ ಮಾಡಿದೆ. ಈಗಾಗಲೇ 36 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಕೆಲಸ ನೋಡಿ ಉಳಿದ ಹಣ ಬಿಡುಗಡೆ ಮಾಡ್ತೇವೆ ಎಂದರು.

ಗೋ ‌ಮೂತ್ರದಿಂದ ಸೋಪು, ಶಾಂಪು ತಯಾರಿಕೆ ಮಾಡಲಾಗುತ್ತದೆ. ಸೆಗಣಿಯಿಂದ ಆಯಿಲ್ ಪೇಂಟ್ ಮಾಡ್ತಿದ್ದಾರೆ. ಇದರ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಸ್ವಯಂ ಗೋ ಶಾಲೆ ಮಾಡಬೇಕು ಅಂತಾ ಬೇರೆ ರಾಜ್ಯಗಳಿಗೆ ಹೋಗಿದ್ದೆ. ರಾಜ್ಯದಲ್ಲಿ ಈ ರೀತಿ ನಾವು ಎಲ್ಲಿ ಸ್ಥಾಪಿಸಬಹುದೆಂದು ಯೋಚಿಸುತ್ತೇವೆ. ಆ ರೀತಿಯ ಗೋ ಶಾಲೆ ಮಾಡಿದ್ರೆ ರೈತರಿಗೆ ಅನುಕೂಲ ಆಗಲಿದೆ. ಅಲ್ಲಿರುವ ಗೋ ಶಾಲೆಗಳಿಂದ ರೈತರು ಹಲವಾರು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಗೋ ಸಂರಕ್ಷಣೆ ಕಾಯ್ದೆಯ ನಂತರ ಸುಮಾರು 10 ಸಾವಿರ ಪ್ರಾಣಿಗಳ ರಕ್ಷಣೆಯಾಗಿದೆ. ರಕ್ಷಣೆ ಮಾಡಿದ ಗೋವುಗಳನ್ನು ಗೋ ಶಾಲೆಗೆ ಬಿಟ್ಟಿದ್ದೇವೆ. ಈ ಬಗ್ಗೆ 500ಕ್ಕಿಂತ ಹೆಚ್ಚು ಕೇಸ್ ದಾಖಲಿಸಿದ್ದೇವೆ ಎಂದರು.

ಇದನ್ನೂ ಓದಿ: ಕಲಬುರ್ಗಿ : ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಇಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.