ETV Bharat / state

'ಐಕಿಯಾ' ಫರ್ನಿಚರ್ ಮಳಿಗೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ದಾವೋಸ್ ಶೃಂಗಸಭೆಯ ಫಲಶೃತಿಯಾಗಿ ಬೆಂಗಳೂರಿನಲ್ಲಿ ಮೊದಲ ದೊಡ್ಡ ಫರ್ನಿಚರ್ ಸ್ಟೋರ್ 'ಐಕಿಯಾ' ಉದ್ಘಾಟನೆಯಾಗಿದೆ. ದಾವೋಸ್​ ಸಭೆಯಲ್ಲಿ ಸ್ಟೋರ್ ತೆರೆಯುವ ಬಗ್ಗೆ ಸಿಎಂ ಜೊತೆ ಸಂಸ್ಥೆಯ ಮುಖ್ಯಸ್ಥರು ಮಾತುಕತೆ ನಡೆಸಿದ್ದು, ಅದರಂತೆ ಸ್ವೀಡನ್ ಮೂಲದ ಇಂಗ್ಕಾ ಗ್ರೂಪ್​ನ ಐಕಿಯಾ ಫರ್ನಿಚರ್ ಸ್ಟೋರ್ ಆರಂಭಿಸಲಾಗಿದೆ.

CM Basavaraja Bommai inaugurated 'Ikea' Furniture Shop
'ಐಕಿಯಾ' ಫರ್ನಿಚರ್ ಮಳಿಗೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
author img

By

Published : Jun 22, 2022, 2:12 PM IST

ಬೆಂಗಳೂರು: ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಆರಂಭಗೊಂಡಿರುವ ಮೊದಲ ಐಕಿಯಾ ಸ್ಟೋರ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉದ್ಘಾಟಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಐಕಿಯಾ ಅವರಿಂದ ಎರಡು ಕೆಲಸವನ್ನು ಅಪೇಕ್ಷೆ ಪಡುತ್ತೇನೆ. ಮೊದಲನೆಯದಾಗಿ ಸ್ಥಳೀಯರಿಗೆ ಅತಿ ಹೆಚ್ಚು ಕೆಲಸ ಕೊಡಬೇಕು, ಅದರಲ್ಲೂ ಮಹಿಳೆಯರಿಗೆ ಆದ್ಯತೆ ನೀಡಬೇಕು ಎನ್ನುವುದನ್ನು ತಿಳಿಸಿದ್ದೇನೆ, ಅವರು ಕೂಡ ಶೇ.75ರಷ್ಟು ಉದ್ಯೋಗ ಸ್ಥಳೀಯರಿಗೆ ಕೊಡುವುದಾಗಿ ಭರವಸೆ ನೀಡಿದ್ದಾರೆ. ಎರಡನೇಯದಾಗಿ ಪೀಠೋಪಕರಣ ತಯಾರಿಕೆ ಅವಕಾಶವನ್ನು ಸ್ಥಳೀಯರಿಗೆ ಕೊಡಬೇಕು ಎಂದು ತಿಳಿಸಿದ್ದೇನೆ, ಶೇ.29ರಷ್ಟು ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ. ಅದನ್ನು ಇನ್ನಷ್ಟು ಹೆಚ್ಚು ಮಾಡಬೇಕೆಂದು ಹೇಳಿದ್ದೇನೆ. ಅದಕ್ಕೂ ಅವರು ಒಪ್ಪಿಕೊಂಡಿದ್ದಾರೆ ಎಂದರು.

CM Basavaraja Bommai inaugurated 'Ikea' Furniture Shop
'ಐಕಿಯಾ' ಫರ್ನಿಚರ್ ಮಳಿಗೆಯಲ್ಲಿ ಸಿಎಂ ಬೊಮ್ಮಾಯಿ

ಅಲ್ಲದೇ ಮತ್ತಷ್ಟು ಸ್ಟೋರ್​ಗಳನ್ನು ತೆರೆಯಲು ತಿಳಿಸಿದ್ದೇನೆ. ಒಂದು ಸ್ಟೋರ್​ನಲ್ಲಿ 1,000 ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದರು. ಇಲ್ಲಿನ ಪೀಠೋಪಕರಣಗಳು ಬಹಳ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಕೈಗೆಟುಕುವ ದರವೂ ಇದೆ ಎನ್ನುವುದನ್ನು ಗಮನಿಸಿದ್ದೇನೆ. ಕಡಿಮೆ ಖರ್ಚಿನಲ್ಲಿ ಮನೆಯನ್ನು ವಿನ್ಯಾಸ ಮಾಡಬಹುದೆಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಮಹಿಳೆಯರಿಬ್ಬರ ದೇಹ ಪತ್ತೆ ಪ್ರಕರಣ: ಮೃತರ ವಿಳಾಸ, ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಇನ್ನು ಪಠ್ಯ ವಿವಾದ ಕುರಿತು ಜೆಡಿಎಸ್​ ವರಿಷ್ಠ ದೇವೇಗೌಡರ ಪತ್ರದ ಕುರಿತು ಇಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಇದೇ ವೇಳೆ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.