ETV Bharat / state

ಲಾಲ್‌ಬಾಗ್ ಫ್ಲವರ್‌ ಶೋಗೆ ಸಿಎಂ ಬೊಮ್ಮಾಯಿ ಚಾಲನೆ; ಈ ಬಾರಿ ಬೆಂಗಳೂರು ಇತಿಹಾಸದ ಥೀಮ್‌ - 213ನೇ ಫಲಪುಷ್ಪ ಪ್ರದರ್ಶನ

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದಿನಿಂದ 11 ದಿನಗಳ ಕಾಲ ಬೆಂಗಳೂರಿನ ಲಾಲ್​ಬಾಗ್​ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.

flower show in Bengaluru
ಲಾಲ್‌ಬಾಗ್ ಫ್ಲವರ್‌ ಶೋಗೆ ಸಿಎಂ ಬೊಮ್ಮಾಯಿ ಚಾಲನೆ
author img

By

Published : Jan 20, 2023, 1:16 PM IST

Updated : Jan 20, 2023, 3:03 PM IST

ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ

ಬೆಂಗಳೂರು: ಸಸ್ಯಕಾಶಿ ಲಾಲ್​​ಬಾಗ್​ನಲ್ಲಿ 213ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಗಣರಾಜ್ಯೋತ್ಸವ ಪ್ರಯುಕ್ತ ಪ್ರತಿ ವರ್ಷ ಫ್ಲವರ್ ಶೋ ಆಯೋಜಿಸಲಾಗುತ್ತದೆ. ಕೆಂಪೇಗೌಡ ಗಡಿಗೋಪುರ ಹಾಗೂ ನಂದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹಾಗೂ ನಗಾರಿ ಬಾರಿಸುವ ಮೂಲಕ ಸಿಎಂ ಕಾರ್ಯಕ್ರಮ ಉದ್ಘಾಟಿಸಿದರು. 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಬೆಂಗಳೂರಿನ ಇತಿಹಾಸ ಬಿಂಬಿಸುವ ಫ್ಲವರ್ ಶೋ ಇದಾಗಿದೆ. ಗಾಜಿನ ಮನೆಯ ಒಳಭಾಗದಲ್ಲಿ ಬೆಂಗಳೂರು ಇತಿಹಾಸವೇ ಹೂವುಗಳಿಂದ ಸುಂದರವಾಗಿ ಅನಾವರಣಗೊಂಡಿದೆ.

flower show in Bengaluru
ಲಾಲ್‌ಬಾಗ್ ಫ್ಲವರ್‌ ಶೋಗೆ ಸಿಎಂ ಬೊಮ್ಮಾಯಿ ಚಾಲನೆ..

ಕಾರ್ಯಕ್ರಮದ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಸಸ್ಯ ಸಂಪತ್ತನ್ನು ಹೆಚ್ಚಿಸಬೇಕು. ಬೆಂಗಳೂರಿಗೆ ಗಾರ್ಡನ್ ಸಿಟಿ ಎಂಬ ಹೆಸರಿದೆ. ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ. ಕಬ್ಬನ್ ಪಾರ್ಕ್, ಲಾಲ್​​ಬಾಗ್ ಹೂವಿನಲ್ಲಿ ನಿರ್ಮಾಣಗೊಂಡಿದೆ. ಬಿಬಿಎಂಪಿ ನಿರ್ಮಿಸಿರುವ ಪಾರ್ಕ್​ಗಳ ನಿರ್ವಹಣೆ ಹಾಗೂ ಹೊರವಲಯದಲ್ಲಿ ಮತ್ತಷ್ಟು ಉದ್ಯಾನಗಳ ನಿರ್ಮಾಣ ಮಾಡಲಾಗುವುದು ಎಂದರು.

flower show in Bengaluru
ಲಾಲ್​ಬಾಗ್​ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ

ಹಸಿರೀಕರಣ ವಿಸ್ತರಣೆ: ಈ ಫ್ಲವರ್ ಶೋನಿಂದ ಸಸ್ಯ ಸಂಪತ್ತು ಪ್ರದರ್ಶನವಾಗುತ್ತಿದೆ. ರಾಜ್ಯಾದ್ಯಂತ ಹಸಿರು ವಿಸ್ತರಣೆ ಆಗಬೇಕು. ರಾಜ್ಯದಲ್ಲಿ ಹಸಿರೀಕರಣ ವಿಸ್ತರಣೆಗೆ ಬಜೆಟ್​​ನಲ್ಲಿ 100 ಕೋಟಿ ರೂ. ಮೀಸಲಿಡುತ್ತೇವೆ. ಗುಡ್ಡಗಾಡು ಪ್ರದೇಶದಲ್ಲಿ ಹಸಿರು ಸಮೃದ್ದಿಯಾಗಬೇಕು. ತೋಟಗಾರಿಕೆ ಫಾರ್ಮ್ ಅಭಿವೃದ್ಧಿಗೆ ಬಜೆಟ್​​ನಲ್ಲಿ ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

flower show in Bengaluru
ಲಾಲ್‌ಬಾಗ್ ಫ್ಲವರ್‌ ಶೋಗೆ ಸಿಎಂ ಬೊಮ್ಮಾಯಿ ಚಾಲನೆ

ಗತ ವೈಭವವನ್ನು ಮರುಕಳಿಸಲು ಕ್ರಮ: ಬೆಂಗಳೂರು ಉದ್ಯಾನ ನಗರ ಎಂದು ಈಗಾಗಲೇ ಪ್ರಸಿದ್ಧಿಯಾಗಿದೆ. ಅಭಿವೃದ್ಧಿಯಲ್ಲಿ ಈ ಹೆಸರು ಹಿಂದೆ ಸರಿದಿದ್ದು, ಮತ್ತೊಮ್ಮೆ ಉದ್ಯಾನ ನಗರದ ಗತ ವೈಭವವನ್ನು ಮರುಕಳಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ಬೆಂಗಳೂರು ನಗರದ ಇತಿಹಾಸ ವಿಷಯಾಧಾರಿತದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ-2023 ಉದ್ಘಾಟಿಸಿದ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ಉದ್ಯಾನ ನಗರ ಹೆಸರು ಖಾಯಂ: ಬೆಂಗಳೂರಿನ ಲಾಲ್​​ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ಪ್ರಮುಖ ಉದ್ಯಾನಗಳನ್ನು ಉತ್ತಮವಾಗಿಟ್ಟುಕೊಂಡು ಬಿಬಿಎಂಪಿ ನಿರ್ವಹಿಸುವ ಹೊಸ ಉದ್ಯಾನವನಗಳಲ್ಲಿ ಹೆಚ್ಚಿನ ಸಸ್ಯ ಸಂಪತ್ತನ್ನು ಬೆಳೆಸುವುದು ಹಾಗೂ ಹೊರವಲಯದಲ್ಲಿ ಹೊಸ ಉದ್ಯಾನ ವನಗಳನ್ನು ನಿರ್ಮಿಸುವ ಮೂಲಕ ಉದ್ಯಾನ ನಗರ ಹೆಸರನ್ನು ಖಾಯಂಗೊಳಿಸಲು ಕ್ರಮಕೈಗೊಳ್ಳಲಾಗುವುದು. ಜನ ಫಲಪುಷ್ಪ ಪ್ರದರ್ಶನದ ಲಾಭ ಪಡೆಯಲಿ ಹಾಗೂ ಫಲಪುಷ್ಪಗಳನ್ನು ಬೆಳೆಸಲು ತಮ್ಮ ಪ್ರಯತ್ನ ಮಾಡಬೇಕು ಎಂದರು.

flower show in Bengaluru
ಬೆಂಗಳೂರು ಇತಿಹಾಸ ಸಾರುವ ಫಲಪುಷ್ಪ ಪ್ರದರ್ಶನ

ಪ್ರವೇಶ ಶುಲ್ಕ ಎಷ್ಟು?: ಫ್ಲವರ್ ಶೋನಲ್ಲಿ ಲಾಲ್ ಬಾಗ್, ದೊಡ್ಡಸಾಗನಕೆರೆ ಬೊಟಾನಿಕಲ್ ಗಾರ್ಡನ್, ನಂದಿ ಗಿರಿಧಾಮ, ಕೆಮ್ಮಣ್ಣುಗುಂಡಿ ಹಾಗೂ ಊಟಿಯ ಪ್ರತಿಕೃತಿ ಹೂವಿನಲ್ಲಿ ಸುಂದರವಾಗಿ ಮೂಡಿ ಬಂದಿದೆ. ಸ್ವಚ್ಛತೆ ಕಾಪಾಡಲು ಉದ್ಯಾನದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಕಳೆದ ವರ್ಷದಂತೆ ಮಕ್ಕಳಿಗೆ 30 ರೂ. ಹಾಗೂ ವಯಸ್ಕರಿಗೆ 70 ರೂ., ಟಿಕೆಟ್ ನಿಗದಿ ಮಾಡಲಾಗಿದೆ. ಯೂನಿಫಾರ್ಮ್, ಐಡಿ ಕಾರ್ಡ್ ಹಾಕಿ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ. ವಾಹನ ನಿಲುಗಡೆಗೆ ಶಾಂತಿ ನಗರ ಬಹುಮಹಡಿ ಪಾರ್ಕಿಂಗ್ ಕಟ್ಟಡದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

flower show in Bengaluru
ಬೆಂಗಳೂರು ಇತಿಹಾಸ ಸಾರುವ ಫಲಪುಷ್ಪ ಪ್ರದರ್ಶನ

ಇದನ್ನೂ ಓದಿ: ಲಾಲ್ ಬಾಗ್ ಫ್ಲವರ್ ಶೋಗೆ ಜನಸಾಗರ, ಕಡೆಯ ದಿನ 2 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ

ಫಲಪುಷ್ಪ ಪ್ರದರ್ಶನದ ವಿಶೇಷತೆಯೇನು?: ವರ್ಷದ ಮೊದಲ ರಾಷ್ಟ್ರೀಯ ಹಬ್ಬ ಜ.26ರ ಗಣರಾಜ್ಯೋತ್ಸವಕ್ಕೆ ಪ್ರತಿ ವರ್ಷ ಬೆಂಗಳೂರಿನ ಲಾಲ್​ಬಾಗ್​ ಗಾಜಿನ ಮನೆ ಫಲಪುಷ್ಪಗಳಿಂದ ವಿಭಿನ್ನವಾಗಿ ಅಲಂಕಾರಗೊಳ್ಳುತ್ತದೆ. ಈ ಬಾರಿ ರಾಜಧಾನಿ ಬೆಂಗಳೂರು ನಗರದ ಹುಟ್ಟು, ಬೆಳೆದ ಬಂದ ಹಾದಿಯ ಕುರಿತಂತೆ ನಗರದ ಇತಿಹಾಸ ಬಿಂಬಿಸುವ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಇಲಾಖೆ ಹಮ್ಮಿಕೊಂಡಿದೆ.

flower show in Bengaluru
ಬೆಂಗಳೂರು ಇತಿಹಾಸ ಸಾರುವ ಫಲಪುಷ್ಪ ಪ್ರದರ್ಶನ

ತೋಟಗಾರಿಕಾ ಸಚಿವ ಮುನಿರತ್ನ, ಶಾಸಕ ಉದಯ್ ಬಿ.ಗರುಡಾಚಾರ್, ತೋಟಗಾರಿಕಾ ಇಲಾಖೆ ನಿರ್ದೇಶಕ ನಾಗೇಂದ್ರ ಪ್ರಸಾದ್ ಹಾಗೂ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ​: ಬೆಂಗಳೂರು ಇತಿಹಾಸ ಬಿಂಬಿಸಲು ತೋಟಗಾರಿಕೆ ಇಲಾಖೆ ಯೋಜನೆ

Last Updated : Jan 20, 2023, 3:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.