ETV Bharat / state

ಚೊಚ್ಚಲ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ತಯಾರಿ: ಏನೆಲ್ಲಾ ಸವಾಲು?

author img

By

Published : Feb 14, 2022, 7:39 AM IST

ಮಾರ್ಚ್ ಮೊದಲ ವಾರದಲ್ಲಿ ಸಿಎಂ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಅವರು ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಬಾರಿಯ ಬಜೆಟ್ 2023ರ ವಿಧಾನಸಭೆ ಚುನಾವಣೆಗೂ ಮುನ್ನ ಮಂಡಿಸಲಿರುವ ಪೂರ್ಣ ಪ್ರಮಾಣದ ಆಯವ್ಯಯವಾಗಿದೆ. ಹೀಗಾಗಿ ಜನಪ್ರಿಯ, ಜನರಿಗೆ ಯಾವುದೇ ಹೊರೆ ಇಲ್ಲದ ಬಜೆಟ್ ಮಂಡಿಸುವ ಅನಿವಾರ್ಯತೆ ಸಿಎಂ ಬೊಮ್ಮಾಯಿ ಅವರದ್ದು.

cm-basavaraj-bommai-to-present-maiden-budget
ಚೊಚ್ಚಲ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ತಯಾರಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ. ಸೊರಗಿರುವ ಆದಾಯದ ಮಧ್ಯೆ ನಾಡಿನ ಜನರಿಗೆ ಪ್ರಿಯವಾಗುವಂತಹ ಬಜೆಟ್ ಮಂಡಿಸುವ ಅನಿವಾರ್ಯತೆಯಲ್ಲಿ ಸಿಎಂ ಇದ್ದಾರೆ. ಆರ್ಥಿಕ ಸಂಕಷ್ಟದ ಮಧ್ಯೆ ಅಳೆದು ತೂಗಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿರುವ ಸಿಎಂಗೆ ಮಿತಿ ಮೀರಿದ ಬದ್ಧ ವೆಚ್ಚದ್ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಾರ್ಚ್ ಮೊದಲ ವಾರದಲ್ಲಿ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಬಾರಿಯ ಬಜೆಟ್ 2023ರ ವಿಧಾನಸಭೆ ಚುನಾವಣೆ ಮುನ್ನ ಮಂಡಿಸಲಿರುವ ಪೂರ್ಣ ಪ್ರಮಾಣದ ಆಯವ್ಯಯವಾಗಿದೆ. ಹೀಗಾಗಿ ಜನಪ್ರಿಯ, ಜನರಿಗೆ ಯಾವುದೇ ಹೊರೆ ಇಲ್ಲದ ಬಜೆಟ್ ಮಂಡಿಸುವ ಅನಿವಾರ್ಯತೆ ಸಿಎಂ ಬೊಮ್ಮಾಯಿ ಅವರದ್ದಾಗಿದೆ. ಅದಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ.

ಆದರೆ, ಆರ್ಥಿಕ ಸಂಕಷ್ಟ ಸಿಎಂಗೆ ಎದುರಾಗಿರುವ ದೊಡ್ಡ ಸವಾಲು. ಆದಾಯ ಮೂಲಗಳು ಬರಿದಾಗಿದ್ದು, ಜನಪ್ರಿಯ ಬಜೆಟ್ ಮಂಡಿಸುವ ಜರೂರತ್ತು ಬಿಜೆಪಿ ಸರ್ಕಾರದ್ದು. ಕೊರೊನಾ ಲಾಕ್‌ಡೌನ್​​ನಿಂದ ರಾಜ್ಯದ ಬೊಕ್ಕಸ ಬರಿದಾಗಿದೆ. ಕೇಂದ್ರದ ಸಹಾಯಾನುದಾನಕ್ಕೂ ಕತ್ತರಿ ಬಿದ್ದಿದೆ. ಸಂಪನ್ಮೂಲ ಕ್ರೋಢೀಕರಣ ಮಾರ್ಗಗಳೆಲ್ಲವೂ ನಿರೀಕ್ಷಿತ ಗುರಿ ಮುಟ್ಟದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಮಧ್ಯೆ ಸಿಎಂ ಬೊಮ್ಮಾಯಿಗೆ ಬದ್ಧ ವೆಚ್ಚವೇ ಕಗ್ಗಂಟಾಗಿ ಪರಿಣಮಿಸಿದೆ.

ಸಿಎಂಗೆ ಬದ್ಧ ವೆಚ್ಚದ ತಲೆನೋವು: ಸೀಮಿತ ಸಂಪನ್ಮೂಲದ ಮಧ್ಯೆ ಅಳೆದು ತೂಗಿ ಸಿಎಂ ಬಜೆಟ್ ಮಂಡಿಸುವ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಈ ಮಧ್ಯೆ ಮಿತಿ ಮೀರಿದ ಬದ್ಧ ವೆಚ್ಚವನ್ನು ನಿಭಾಯಿಸುವುದೇ ಸಿಎಂ ಬೊಮ್ಮಾಯಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸರ್ಕಾರಿ ನೌಕರರ ವೇತನ, ಪಿಂಚಣಿ, ಬಡ್ಡಿ ಪಾವತಿ, ಆಡಳಿತ ವೆಚ್ಚ, ಸಹಾಯಧನವನ್ನು ಬದ್ಧ ವೆಚ್ಚವೆಂದು ಕರೆಯುತ್ತಾರೆ. ಈ ಮಿತಿ ಮೀರಿದ ಬದ್ಧ ವೆಚ್ಚ ಬಜೆಟ್ ಲೆಕ್ಕಾಚಾರವನ್ನು ಬುಡಮೇಲಾಗಿಸಿದೆ. ಬಜೆಟ್ ಬಹುಪಾಲು ಬದ್ಧ ವೆಚ್ಚಕ್ಕೇ ತಗುಲುತ್ತಿದ್ದು, ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸುವುದೇ ದುಸ್ತರವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಇಸ್ರೋದಿಂದ ವರ್ಷದ ಮೊದಲ ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ 3 ಉಪಗ್ರಹಗಳು

ಸದ್ಯ ಬದ್ಧ ವೆಚ್ಚದ ಹೊರೆ 102%ಗೆ ತಲುಪಿದೆ. ರಾಜಸ್ವ ಸ್ವೀಕಾರದ ಪ್ರತಿ ಬದ್ಧ ವೆಚ್ಚವೇ ಹೆಚ್ಚಾಗಿದೆ. ಅಭಿವೃದ್ಧಿ ಕೆಲಸಗಳಿಗೆ ವ್ಯಯಿಸಬೇಕಾದ ಬಜೆಟ್ ಹಣದಲ್ಲಿ ಬಹುಪಾಲು ಬದ್ಧ ವೆಚ್ಚಕ್ಕೆ ತಗುಲುತ್ತಿದೆ. ಇದರ ನಿರ್ವಹಣೆ ಸಿಎಂಗೆ ನಿದ್ದೆಗೆಡಿಸಿದೆ. ಬದ್ಧ ವೆಚ್ಚದ ಜೊತೆಗೆ ಅಭಿವೃದ್ಧಿ ಕೆಲಸಗಳಿಗೆ ಬಜೆಟ್​​ನಲ್ಲಿ ಹಣ ಹೊಂದಿಸುವುದರಲ್ಲಿ ಸಿಎಂ ಬೊಮ್ಮಾಯಿ ಕಸರತ್ತು ನಡೆಸುತ್ತಿದ್ದಾರೆ. ಬದ್ಧ ವೆಚ್ಚವನ್ನು ಕಡಿತಗೊಳಿಸುವ ನಾನಾ ಮಾರ್ಗೋಪಾಯಗಳ ಹುಡುಕಾಟದಲ್ಲೇ ತಲೆ ಕೆಡಿಸಿಕೊಂಡಿದ್ದಾರೆ.

ಬೊಕ್ಕಸದ ಮೇಲೆ ಬದ್ಧ ವೆಚ್ಚದ ಹೊರೆ ಹೇಗಿದೆ?: ಮಧ್ಯಮಾವಧಿ ವಿತ್ತೀಯ ಯೋಜನೆ 2021-2025ರ ಪ್ರಕಾರ ರಾಜ್ಯದಲ್ಲಿನ ಬದ್ಧ ವೆಚ್ಚ ಹೊರೆ ವರ್ಷಂಪ್ರತಿ ಹೆಚ್ಚುತ್ತಲೇ ಇದೆ. ಇದರಿಂದ ಬಜೆಟ್ ಅನುಷ್ಠಾನವೇ ಬುಡಮೇಲಾಗುತ್ತಿದೆ. ಬದ್ದ ವೆಚ್ಚ ವರ್ಷವಾರು ಮಿತಿ ಮೀರುತ್ತಿದೆ. ಅದರಲ್ಲೂ ಈ ಬಾರಿ ಬದ್ಧ ವೆಚ್ಚದ ಹೊರೆ ಸಿಎಂ ಬೊಮ್ಮಾಯಿಗೆ ನಡುಕ ಹುಟ್ಟಿಸುವಂತೆ ಮಾಡಿದೆ.

2022-23ರ ಸಾಲಿನಲ್ಲಿ ಬದ್ಧ ವೆಚ್ಚ 2,08,004 ಕೋಟಿ ರೂ.ಗೆ ತಲುಪುವ ಅಂದಾಜು ಮಾಡಲಾಗಿದೆ. ಒಟ್ಟು ರಾಜಸ್ವ ಸಂಗ್ರಹ 1,79,916 ಕೋಟಿ ರೂ. ಅಂದಾಜಿಸಲಾಗಿದೆ. ಅಂದರೆ, ರಾಜಸ್ವ ಸ್ವೀಕೃತಿ ಮುಂದೆ ಬದ್ಧ ವೆಚ್ಚವೇ ಹೆಚ್ಚಿಗಿದ್ದು, ಬರುವ ಆದಾಯಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಬದ್ಧ ವೆಚ್ಚಕ್ಕೇ ವಿನಿಯೋಗಿಸುವ ದುಸ್ಥಿತಿ ಎದುರಾಗಿದೆ.

2019-20ರಲ್ಲಿ ರಾಜ್ಯದ ಬದ್ಧ ವೆಚ್ಚ 1,74,257 ಕೋಟಿ ರೂ. ಇತ್ತು. 2020-21ಸಾಲಿನಲ್ಲಿ ಬದ್ಧ ವೆಚ್ಚ 1,79,195 ಕೋಟಿ ರೂ.ಗೆ ಏರಿಕೆ ಆಯಿತು. ಅದೇ 2021-22ನೇ ಸಾಲಿನಲ್ಲಿ ಬದ್ಧ ವೆಚ್ಚ 1,87,405 ಕೋಟಿ ರೂ.ಗೆ ಏರಿಕೆಯಾಗಿದೆ. ಅದೇ 2022-23 ಸಾಲಿನಲ್ಲಿ ಬದ್ಧ ವೆಚ್ಚ 2,08,004 ಕೋಟಿ ರೂ.ಗೆ ಗಣನೀಯ ಏರಿಕೆಯಾಗಿದೆ. ಮಿತಿ‌ ಮೀರಿದ ಬದ್ಧ ವೆಚ್ಚ ಇದೀಗ ಸಿಎಂ ಬೊಮ್ಮಾಯಿಗೆ ಅಡ್ಡಗಾಲಾಗಿ ಪರಿಣಮಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.