ETV Bharat / state

ಘೋಷಿತ ಕಾರ್ಯಕ್ರಮಗಳಿಗೆ ಅನುದಾನ ಕೊಟ್ಟು ಅನುಷ್ಠಾನಕ್ಕೆ ತರಲು ಬದ್ಧ: ಸಿಎಂ ಬೊಮ್ಮಾಯಿ - ಬಜೆಟ್​ ಮೇಲೆ ಸಿಎಂ ಬೊಮ್ಮಾಯಿ ಭಾಷಣ

ಜಮೀನು ಬಿಟ್ಟು ಬೇರೆ ಬೇರೆ ಕೆಲಸದಲ್ಲಿದ್ದವರು ಸ್ವಲ್ಪ ಅಭಿವೃದ್ಧಿ ಆಗಿದ್ದಾರೆ. ಕೇವಲ ಕೃಷಿ ಮಾಡಿದವರ ಮನೆಯಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ವಿಷಯ ಗೊತ್ತಾಯ್ತು. ಹೀಗಾಗಿ, ರೈತ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಕಾರ್ಯಕ್ರಮ ಮಾಡಿದೆ. ಇಲ್ಲಿಯವರೆಗೂ 6 ಲಕ್ಷ ವಿದ್ಯಾರ್ಥಿಗಳಿಗೆ ಕೊಟ್ಟಿದ್ದೇವೆ ಎಂದರು. ಆರ್ಥಿಕ ಶಿಸ್ತು ರಾಜ್ಯದಲ್ಲಿ ಬೇಗ ತರಲಾಗುತ್ತದೆ. ಪ್ರಗತಿಶೀಲ ರಾಜ್ಯವನ್ನಾಗಿ ಆದಷ್ಟು ಬೇಗ ಮಾಡಲಾಗುತ್ತದೆ..

CM Basavaraj bommai speech on budget in council
ವಿಧಾನಪರಿಷತ್​ನಲ್ಲಿ ಬಜೆಟ್​​ ಕುರಿತು ಸಿಎಂ ಭಾಷಣ
author img

By

Published : Mar 18, 2022, 2:28 PM IST

Updated : Mar 18, 2022, 3:31 PM IST

ಬೆಂಗಳೂರು : ಆರ್ಥಿಕ ಬೆಳವಣಿಗೆ, ಜನರ, ದುಡಿಯುವ ವರ್ಗದ ಪರವಾದ ಸರ್ವವ್ಯಾಪಿ ಬಜೆಟ್ ಮಂಡಿಸಿದ್ದು, ಆರ್ಥಿಕತೆಯನ್ನು ಮತ್ತೆ ಟ್ರ್ಯಾಕ್​ಗೆ ತರುವ ವಿಶ್ವಾಸ ಇದೆ. ಹೆಚ್ಚಿನ ಆದಾಯ ತರುವ ಕೆಲಸ ಮಾಡಲಾಗುತ್ತದೆ. ಘೋಷಿತ ಎಲ್ಲಾ ಕಾರ್ಯಕ್ರಮಗಳಿಗೂ ಅನುದಾನ ಕೊಟ್ಟು ಅನುಷ್ಠಾನಕ್ಕೆ ತರುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಭರವಸೆ ನೀಡಿದರು.

ಬಜೆಟ್ ಮೇಲಿನ ಭಾಷಣಕ್ಕೆ ಉತ್ತರ ನೀಡಿದ ಸಿಎಂ, ‌ಒಟ್ಟು 36 ಸದಸ್ಯರು ಬಜೆಟ್ ಮೇಲೆ ಮಾತಾಡಿದ್ದಾರೆ. 26 ಗಂಟೆಗಳ‌ ಕಾಲ ಆಯವ್ಯಯದ ಮೇಲೆ ಚರ್ಚೆಯಾಗಿದೆ. ಬಜೆಟ್ ಮಂಡನೆ ಮಾಡುವಾಗ ಆತಂಕ ಇತ್ತು. ಈ ಬಜೆಟ್ ನನಗೆ ಪರೀಕ್ಷೆಯ ರೂಪವಾಗಿ ಬಂದಿದೆ. ಕಳೆದ 2 ವರ್ಷದಲ್ಲಿ ಹಣಕಾಸಿನ ಪರಿಸ್ಥಿತಿ ಯಾವ ರೀತಿ ಕುಗ್ಗಿದೆ ಎಂಬುದು ಎಲ್ಲರಿಗೂ ಗೊತ್ತು.

ಬಜೆಟ್ ಮೇಲಿನ ಭಾಷಣಕ್ಕೆ ಉತ್ತರ ನೀಡಿದ ಸಿಎಂ ಬೊಮ್ಮಯಿ

ಕೋವಿಡ್ ಕಾರಣದಿಂದ ಅಧಿಕ ಖರ್ಚಾಗಿದೆ. ರೆವಿನ್ಯೂ ಡೆಫಿಸಿಟ್ ಇರುವ ಬಳುವಳಿ ನಾನು ಪಡೆದೆ. ಬಜೆಟ್ ಗಾತ್ರ ಹೆಚ್ಚು ಮಾಡುವುದರ ಜೊತೆಗೆ ಹಣಕಾಸಿನ ಸಂಗ್ರಹದ ಕಡೆ ಗಮನ ಹರಿಸಿದೆ. ರಾಜ್ಯದ ಕಮರ್ಷಿಯಲ್ ಟ್ಯಾಕ್ಸ್, ಎಕ್ಸೈಸ್ ಡ್ಯೂಟಿ ಟಾರ್ಗೆಟ್​ಗಿಂತ ಹೆಚ್ಚು ಸಂಗ್ರಹವಾಗಿದೆ.

ಹೀಗಾಗಿ, ಮೊದಲ 6 ತಿಂಗಳ ರೇಟ್​​​ನಲ್ಲಿ ಹೋಗಿದ್ದರೆ ಕೊರತೆ ಆಗುತ್ತಿದೆ. ಮುಂದಿನ ವಾರ ಸಪ್ಲಿಮೆಂಟ್ರಿ ಬಜೆಟ್ ಕೊಡುತ್ತೇನೆ. ಆಗ ವಿವರವಾಗಿ ಹೇಳುತ್ತೇನೆ. ಜಿಎಸ್ಟಿ ಕಾಂಪೆನ್ಸೇಷನ್ ಬಂದಿದ್ದರಿಂದ 9.5 ಅಭಿವೃದ್ಧಿಗಾಗಿ ಬಜೆಟ್ ಮಂಡಿಸಿದ್ದೇನೆ ಎಂದರು.

ಅಗ್ರಿಕಲ್ಚರ್ ಗ್ರೋಥ್, ಮ್ಯಾನುಫಾಕ್ಚರ್ ಗ್ರೋಥ್ ಆದರೆ ಸರ್ವಿಸ್ ಸೆಕ್ಟರ್​ಗೆ ಅನುಕೂಲ ಆಗುತ್ತದೆ. ರೈತರು, ಉತ್ಪಾದಕರ,ಗ್ರಾಹಕರು ಅವರು ಸಂಪಾದಿಸಿದ ಹಣ ಮತ್ತೆ ದಿನಬಳಕೆ ವಸ್ತು, ಟ್ರ್ಯಾಕ್ಟರ್, ಡೀಸೆಲ್ ಮೇಲೆ ಖರ್ಚು ಮಾಡುತ್ತಾರೆ. ಒಂದಕ್ಕೊಂದು ಸಂಬಂಧ ಇರುವುದರಿಂದ ಹೆಚ್ಚಿನ ಗಮನ ಕೊಟ್ಟಿದ್ದೇವೆ.

ಫೈನಾನ್ಸ್ ಅಂಡ್ ಪೀಪಲ್ ಆ್ಯಕ್ಟಿವಿಟಿ ಎರಡನ್ನು ಸರಿದೂಗಿಸಿಕೊಂಡು ಹೋದಾಗ ಎಲ್ಲಾ ಸರಿಯಾಗುತ್ತದೆ. ಕೆಳ ಹಂತದಲ್ಲಿರುವ ರೈತರು, ಕೂಲಿ ಕಾರ್ಮಿಕರು ಆರ್ಥಿಕ ಬೆಳವಣಿಗೆಯ ಕೆಲಸ ಮಾಡ್ತಾರೆ. ಅವರ ಬಗ್ಗೆ ಚಿಂತನೆ ಮಾಡಿದಾಗ ಇನ್ನಷ್ಟು ಬೆಳವಣಿಗೆ ಆಗುತ್ತದೆ ಎಂದರು.

ರಾಜ್ಯದ ಆರ್ಥಿಕ ಸ್ಥಿತಿ ಹಳಿಗೆ ತರುವ ಕೆಲಸ ಮಾಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ 21 ಸಾವಿರ ಕೋಟಿ ರೇವಿನ್ಯೂ ರಿಸಿಟ್ ಕಡಿಮೆ ಆಯ್ತು. 2022-23 ಬಜೆಟ್ ನಾನು ಮಂಡಿಸಿದ್ದೇನೆ. ನಾನು ಅಧಿಕಾರ ತೆಗೆದುಕೊಂಡಾಗ ಕೋವಿಡ್​​​ ಎರಡನೆ ಹಾಗೂ 3ನೇ ಅಲೆಯ ಮಧ್ಯೆ ಸಮಯ ಇತ್ತು. ಹೀಗಾಗಿ, ಆರ್ಥಿಕ ಬೆಳವಣಿಗೆ ಆಗುತ್ತದೆ ಎಂಬ ಭರವಸೆ ಇತ್ತು.

ಆದರೆ, ಅದಕ್ಕೆ ಕಾಯದೆ ಕಾರ್ಮಿಕರ, ರೈತರಿಗೆ ಅನುಕೂಲ ಮಾಡಿಕೊಡಲು ರೈತರ ಮಕ್ಕಳಿಗೆ ವಿದ್ಯಾನಿಧಿ ಕಾರ್ಯಕ್ರಮ ಮಾಡಿದೆ. ಕೌಶಲ್ಯ ಅಭಿವೃದ್ಧಿಗೆ ತರಬೇತಿ ನೀಡ್ತಿದ್ದೇವೆ. ಸುಮಾರು 750 ಪಂಚಾಯತ್‌ ಅಭಿವೃದ್ಧಿ ಮಾಡಬೇಕು ಎಂಬ ನಿಟ್ಟಿನಲ್ಲಿ ನಗರೋತ್ಥಾನ ಯೋಜನೆಯಡಿ ಆಯ್ಕೆ ಮಾಡಿದ್ದೇವೆ. ಸ್ಟಾರ್ಟ್ ಅಪ್, ಕ್ರೀಡೆ, ನಗರೋತ್ದಾನದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದರು.

ಜಮೀನು ಬಿಟ್ಟು ಬೇರೆ ಬೇರೆ ಕೆಲಸದಲ್ಲಿದ್ದವರು ಸ್ವಲ್ಪ ಅಭಿವೃದ್ಧಿ ಆಗಿದ್ದಾರೆ. ಕೇವಲ ಕೃಷಿ ಮಾಡಿದವರ ಮನೆಯಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ವಿಷಯ ಗೊತ್ತಾಯ್ತು. ಹೀಗಾಗಿ, ರೈತ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಕಾರ್ಯಕ್ರಮ ಮಾಡಿದೆ. ಇಲ್ಲಿಯವರೆಗೂ 6 ಲಕ್ಷ ವಿದ್ಯಾರ್ಥಿಗಳಿಗೆ ಕೊಟ್ಟಿದ್ದೇವೆ ಎಂದರು. ಆರ್ಥಿಕ ಶಿಸ್ತು ರಾಜ್ಯದಲ್ಲಿ ಬೇಗ ತರಲಾಗುತ್ತದೆ. ಪ್ರಗತಿಶೀಲ ರಾಜ್ಯವನ್ನಾಗಿ ಆದಷ್ಟು ಬೇಗ ಮಾಡಲಾಗುತ್ತದೆ. ಜನಸಾಮಾನ್ಯರಿಗೋಸ್ಕರ ಬಜೆಟ್ ಮಂಡಿಸಲಾಗಿದೆ. ಯಾವ ಉದ್ದೇಶ ಉತ್ಸಾಹದಿಂದ ಬಜೆಟ್ ಮಂಡಿಸಿದ್ದೇನೋ ಅದೇ ಉತ್ಸಾಹದಲ್ಲಿ ಅನುಷ್ಠಾನಕ್ಕೆ ತರುತ್ತೇನೆ ಎಂದರು.

ಆರ್ಥಿಕ ತೆ ಸರಿದಾರಿಗೆ ಬರಲಿದೆ : ವರ್ಷ ವರ್ಷ ಸಾಲ ಹೆಚ್ಚಾಗುತ್ತಾ ಬರುತ್ತಿದೆ. ಪ್ರೀ ಕೋವಿಡ್, ಪೋಸ್ಟ್ ಕೋವಿಡ್ ನೋಡಬೇಕಿದೆ. ಕೋವಿಡ್ ಮೊದಲು ಶೇ.6-12ರಷ್ಟು ಆರ್ಥಿಕ ಬೆಳವಣಿಗೆ ಆಗುತ್ತಾ ಇತ್ತು. ಆದರೆ, ಈಗ ಮೈನಸ್​​ಗೆ ಬಂದಿದ್ದರಿಂದ ನಮ್ಮ ಸಾಲದ ಪ್ರಮಾಣ ಹೆಚ್ಚಾಗಿದೆ. 2020-21ರಲ್ಲಿ ಶೇ.5ರಷ್ಟು ಸಾಲ ಪಡೆಯಬಹುದು ಎಂದು ಕೇಂದ್ರ ಹೇಳಿತ್ತು.

ಆದರೆ, ನಾವು ಶೇ.3.3 ಮಾತ್ರ ಪಡೆದವು. 2021-22ರಲ್ಲಿ ಶೇ.3.5ರಷ್ಟು ಸಾಲ ಪಡೆಯಲು ಅವಕಾಶವಿದ್ದರೂ ನಾವು ಶೇ.3.26 ತೆಗೆದುಕೊಂಡಿದ್ದೇವೆ. ಅನಿವಾರ್ಯತೆಯಿಂದ ಸಾಲ ಹೆಚ್ಚಾಗಿರುವುದು ಸತ್ಯ. ಲಾಕ್​​​ಡೌನ್, ಕರ್ಫ್ಯೂ ಕಾರಣಕ್ಕೆ ವಾಣಿಜ್ಯ ತೆರಿಗೆ ಇಳಿಕೆಯಾಗಿದೆ. ಅಬಕಾರಿಯಲ್ಲಿ ಮಾತ್ರ ಹೆಚ್ಚಾಗಿದೆ. ಮೋಟಾರು ವಾಹನ, ನೋಂದಣಿ ಮುದ್ರಾಂಕ ಇಲಾಖೆಯಲ್ಲೂ ಕಡಿಮೆಯಾಗಿದೆ. ಇತರೆ ತೆರಿಗೆ, ಕೇಂದ್ರ ತೆರಿಗೆ ಪಾಲು ಕೂಡ ಕಡಿಮೆಯಾಗಿದೆ. ಆದರೆ, ಬರುವ ದಿನಗಳಲ್ಲಿ ಆರ್ಥಿಕತೆ ಸರಿದಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಘೋಷಿತ ಕಾರ್ಯಕ್ರಮಗಳಿಗೆ ಹಣ ಒದಗಿಸಲು ಸಿದ್ಧ: ಕೋವಿಡ್ ನಿಯಂತ್ರಣಕ್ಕೆ ಒಟ್ಟಾರೆಯಾಗಿ 15,645 ಕೋಟಿ ವೆಚ್ಚ ಮಾಡಲಾಗಿದೆ. ಬಜೆಟ್​​​ನಲ್ಲಿ ಘೋಷಿತ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸಿಕೊಡಲು ಬದ್ಧನಿದ್ದೇನೆ. ಅಲ್ಪಸಂಖ್ಯಾತರಿಗೆ ಅನುದಾನ ಕಡಿಮೆ ಇದೆ. ಆ ಬಗ್ಗೆ ಗಮನ ಹರಿಸಲಾಗುತ್ತದೆ. ಪ್ರಗತಿದಾಯಕ ಬಜೆಟ್ ಮಂಡಿಸಿದ್ದೇನೆ. ಯಾವ ಕೈಗಾರಿಕೆ ಹೆಚ್ಚು ಉದ್ಯೋಗ ಕೊಡಲಿದೆಯೋ ಆ ಕೈಗಾರಿಕೆಗೆ ಹೆಚ್ಚು ರಿಯಾಯಿತಿ ಕೊಡಲಾಗುತ್ತದೆ. ಇಷ್ಟು ವರ್ಷ ಹೆಚ್ಚು ಹೂಡಿಕೆ ಮಾಡಿದವರಿಗೆ ಹೆಚ್ಚು ರಿಯಾಯತಿ ಕೊಡಲಾಗುತ್ತಿತ್ತು. ಆರ್ ಅಂಡ್ ಡಿಗೆ ಹೆಚ್ಚಿನ ಒತ್ತು ನೀಡಿ ಅಗತ್ಯ ಸಹಾಯ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ: ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಏನನ್ನೂ ಸೇರಿಸೋ ಅವಶ್ಯಕತೆ ಇಲ್ಲ: ಡಿಕೆಶಿ

Last Updated : Mar 18, 2022, 3:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.