ಬೆಂಗಳೂರು: 2023ರ ಮಾರ್ಚ್ ಅಂತ್ಯದೊಳಗಾಗಿ ವಾಣಿಜ್ಯ ಮತ್ತು ಕೈಗಾರಿಕೆಗೆ ಸಂಬಂಧಿಸಿದ ವೆಚ್ಚಗಳ ಸಂದಾಯಕ್ಕಾಗಿ ರಾಜಸ್ವ ಲೆಕ್ಕದಲ್ಲಿ 5346 ಕೋಟಿ ರೂ ಮತ್ತು ಬಂಡವಾಳ ಲೆಕ್ಕದಲ್ಲಿ 3759 ಕೋಟಿ ರೂ.ಗಳನ್ನು ಮಂಜೂರು ಮಾಡುವುದು ಸೇರಿದಂತೆ 2022-23ನೇ ಸಾಲಿನ ಪೂರಕ ಅಂದಾಜುಗಳ ಮೊದಲ ಕಂತಿನ ಬೇಡಿಕೆಗಳ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಇಂದು ಮಂಡಿಸಿದರು.
ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವೆಚ್ಚಗಳ ಸಂದಾಯಕ್ಕೆ ರಾಜಸ್ವ ಲೆಕ್ಕದಲ್ಲಿ 39,208.87 ಕೋಟಿ ರೂ. ಮಂಜೂರು ಮಾಡುವ ಪ್ರಸ್ತಾಪ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 20000.00 ಲಕ್ಷ ರೂ. ಮಂಜೂರು ಮಾಡುವ ಪ್ರಸ್ತಾಪ ಮಾಡಿದ್ದು, ವಸತಿ ಇಲಾಖೆಗೆ 35000.00 ಲಕ್ಷ ರೂ ಮಂಜೂರು ಮಾಡುವ ಪ್ರಸ್ತಾಪ ಮಾಡಿದ್ದಾರೆ.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇದಕ್ಕೆ ಸಂಬಂಧಿಸಿದ ವೆಚ್ಚಗಳ ಬಗ್ಗೆ ಸಂದಾಯ ಮಾಡಬೇಕಾಗಿ ಬರುವುದರಿಂದ ರಾಜಸ್ವ ಲೆಕ್ಕದಲ್ಲಿ 5,850 ಕೋಟಿ ರೂ. ಮತ್ತು ಬಂಡವಾಳ ಲೆಕ್ಕದಲ್ಲಿ 100.00 ಲಕ್ಷ ರೂ. ಗಳಿಗೆ ಮೀರದ ಇನ್ನೂ ಹೆಚ್ಚಿನ ಮೊತ್ತವನ್ನು ಸರ್ಕಾರಕ್ಕೆ ಮಂಜೂರು ಮಾಡಲು ಪ್ರಸ್ತಾಪಿಸಲಾಗಿದೆ.
ಶಿಕ್ಷಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 1,26,145.16 ರೂ. ಬಂಡವಾಳ ಲೆಕ್ಕದಲ್ಲಿ 11,113 ಲಕ್ಷ ರೂ ಹಾಗೂ ಕಂದಾಯ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 83,633. 17 ಲಕ್ಷ ರೂ ಹಾಗೂ ಬಂಡವಾಳ ಲೆಕ್ಕದಲ್ಲಿ 2800. 00 ಲಕ್ಷ ರೂ ಮಂಜೂರು ಮಾಡುವುದು ಸೇರಿದಂತೆ ವಿವಿಧ ಇಲಾಖೆಗಳ ಪೂರಕ ಅಂದಾಜನ್ನು ಮುಖ್ಯಮಂತ್ರಿ ಅವರು ಮಂಡಿಸಿದರು.
ಓದಿ: ಸರ್ಕಾರದ ಕಾನೂನು ಬಾಹಿರ ತೀರ್ಮಾನದ ಬಗ್ಗೆ ಕಲಾಪದಲ್ಲಿ ಚರ್ಚಿಸುತ್ತೇವೆ: ಮಾಜಿ ಸಿಎಂ ಕುಮಾರಸ್ವಾಮಿ