ಬೆಂಗಳೂರು : ಬೆಂಗಾವಲು ವಾಹನ ಮತ್ತು ಸಿಬ್ಬಂದಿಯನ್ನು ಬಿಟ್ಟು ಗೌಪ್ಯ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳಿದ್ದು, ಅಜ್ಞಾತ ಸ್ಥಳದಲ್ಲಿ ಸಚಿವ ಆನಂದ್ ಸಿಂಗ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಮತ್ತು ಆನಂದ್ ಸಿಂಗ್ ಭೇಟಿ ನಡೆಯಬೇಕಿತ್ತು. ಆದರೆ, ಸಿಎಂ ಸರಣಿ ಸಭೆ ಇದ್ದ ಕಾರಣಕ್ಕೆ ಆರ್‌ಟಿನಗರದಲ್ಲಿರುವ ಸಿಎಂ ನಿವಾಸದಿಂದ ಸ್ಥಳಾಂತರವಾಯಿತು. ಆದರೆ, ಕೊನೆ ಕ್ಷಣದಲ್ಲಿ ಆರ್‌ಟಿನಗರ ನಿವಾಸ ಬಿಟ್ಟು ಅಜ್ಞಾತ ಸ್ಥಳದಲ್ಲಿ ಸಭೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಸರಣಿ ಸಭೆ ಮುಗಿಸಿ ಗೃಹ ಕಚೇರಿಯಿಂದ ಸಿಎಂ ಹೊರಟ ಕೆಲ ಸಮಯದಲ್ಲೇ ಎಸ್ಕಾರ್ಟ್ ಮತ್ತು ಸಿಬ್ಬಂದಿ ಗೃಹ ಕಚೇರಿಗೆ ಮರಳಿತು. ಆದರೆ, ಸಿಎಂ ಮಾತ್ರ ಗೌಪ್ಯ ಸ್ಥಳಕ್ಕೆ ತೆರಳಿದರು. ಅತ್ತ ಆನಂದ್ ಸಿಂಗ್ ಕೂಡ ವಸಂತನಗರ ನಿವಾಸದಿಂದ ಹೊರಟಿದ್ದು, ಎಲ್ಲಿ ಹೋದರು ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಓದಿ: ಶಿಷ್ಯನ ನೆರವಿಗೆ ಧಾವಿಸಿದ BSY : ಖಾತೆ ಅತೃಪ್ತಿ ಶಮನ ಮಾಡುವಲ್ಲಿ ಬೊಮ್ಮಾಯಿ ಸಫಲ
ಗೌಪ್ಯ ಸ್ಥಳದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಆನಂದ್ ಸಿಂಗ್ ಸಭೆ ನಡೆಸುತ್ತಿದ್ದು, ಈ ವೇಳೆ ಸಚಿವ ಆರ್ ಅಶೋಕ್ ಹಾಗೂ ಶಾಸಕ ರಾಜೂಗೌಡ ಕೂಡ ಉಪಸ್ಥಿತರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಓದಿ: ಆನಂದ್ ಸಿಂಗ್‌ಗೆ ಬಿಎಸ್ವೈ ಬುದ್ಧಿವಾದ : CM ಭೇಟಿಗೆ ಸೂಚನೆ
ಸಭೆಯ ನಂತರ ಆನಂದ್ ಸಿಂಗ್ ಮತ್ತೆ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಮಾತುಕತೆಯ ವಿವರ ನೀಡಲಿದ್ದಾರೆ. ಅಸಮಾಧಾನ ಶಮನ ಆಗಿರದೆ ಇದ್ದಲ್ಲಿ ಮತ್ತೊಮ್ಮೆ ಯಡಿಯೂರಪ್ಪ ಮನವೊಲಿಕೆ ಮಾಡುವ ಸಾಧ್ಯತೆ ಇದೆ. ಎಲ್ಲವೂ ಈ ಸಭೆಯ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.