ETV Bharat / state

ಬಜೆಟ್ ಪೂರ್ವ ಸಭೆ: ವಾಣಿಜ್ಯ ಮತ್ತು ಕೈಗಾರಿಕೆ ಸಂಘ - ಸಂಸ್ಥೆಗಳು ಹಾಗೂ ಸಾರಿಗೆ ಸಂಘ ಸಂಸ್ಥೆಗಳ ಮನವಿ ಏನು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಾಣಿಜ್ಯ ಮತ್ತು ಕೈಗಾರಿಕೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರಿಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಬಜೆಟ್​ ಪೂರ್ವ ಸಭೆ ನಡೆಸಿದರು. ಈ ವೇಳೆ, ಅಧಿಕಾರಿಗಳು ತಮ್ಮ ತಮ್ಮ ಸಮಸ್ಯೆ ಹಾಗೂ ವಿವಿಧ ಸೌಲಭ್ಯ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

CM Basavaraj Bommai conducted Pre-budget meeting
ಸಿಎಂ ಬೊಮ್ಮಾಯಿ ಬಜೆಟ್ ಪೂರ್ವ ಸಭೆ
author img

By

Published : Feb 26, 2022, 9:40 PM IST

ಬೆಂಗಳೂರು : ಮಾರ್ಚ್​ ಮೊದಲ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡನೆ ಮಾಡಲಿದ್ದು, ಇಂದೂ ಸಹ ಸಂಘ- ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಬಜೆಟ್​ ಪೂರ್ವ ಸಭೆ ನಡೆಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಂಘ - ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರಿಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಹೋಟೆಲ್​​​ಗಳಿಗೆ ತೆರಿಗೆ ಹೆಚ್ಚಿಸಬಾರದು: ಕೋವಿಡ್​​​​ನಿಂದ ಹೊಟೇಲ್ ಉದ್ಯಮ ಕಳೆದೆರಡು ವರ್ಷಗಳಿಂದ ನಷ್ಟದಲ್ಲಿದೆ. ಹಾಗಾಗಿ ಈ ಸಾಲಿನ ಬಜೆಟ್​​​ನಲ್ಲಿ ಹೋಟೆಲ್‍ಗಳಿಗೆ ಯಾವುದೇ ರೀತಿಯ ತೆರಿಗೆ ಹೆಚ್ಚಿಸಬಾರದು ಎಂದು ಹೋಟೆಲ್ ಮಾಲೀಕರ ಸಂಘದ ಸದಸ್ಯರು, ಸಿಎಂ ಮನವಿ ಮಾಡಿದ್ದಾರೆ.

ಆಸ್ತಿ ತೆರಿಗೆ ತಗ್ಗಿಸಲು ಮನವಿ: ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಕಳೆದೆರಡು ವರ್ಷಗಳಿಂದಲ್ಲೂ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. ಉದ್ಯಮ ನಷ್ಟದಲ್ಲಿರುವ ಸಂದರ್ಭದಲ್ಲಿ ಆಸ್ತಿ ತೆರಿಗೆ ಹೆಚ್ಚು ಮಾಡಿರುವುದು ಸರಿಯಲ್ಲ. ಇದನ್ನು ಕಡಿಮೆ ಮಾಡಿ ಸಿಎಂಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಸಿಎಂ ಬೊಮ್ಮಾಯಿ ಬಜೆಟ್ ಪೂರ್ವ ಸಭೆ

ಟ್ರೇಡ್ ಲೈಸನ್ಸ್ ರಿನಿವಲ್ ಒನ್ ಟೈಮ್ ಆಗಬೇಕು. ಒಂದೇ ಬಾರಿ ಪರವಾನಗಿ ಕೊಡಬೇಕು. ಪ್ರತಿವರ್ಷ ರಿನಿವಲ್ ಮಾಡುವುದರಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ.ರಸ್ತೆ ಬದಿಯಲ್ಲಿ ಅನೇಕ ಹೋಟೆಲ್​​​​ಗಳಿವೆ. ಅವರಿಗೆ ಫುಟ್​ಪಾತ್ ವ್ಯವಸ್ಥೆ ಮಾಡಬೇಕು. ಪ್ರವಾಸಿ ಸ್ಥಳಗಳಲ್ಲೂ ಈ ಉದ್ಯಮದವರಿಗೆ ಅನುಕೂಲ ಮಾಡಬೇಕು. ಈ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊಟ್ಟಿದ್ದೇವೆ. ನಮ್ಮ ಮನವಿಯನ್ನು ಆಲಿಸಿರುವ ಸಿಎಂ ಎಲ್ಲವನ್ನೂ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಹೋಟೆಲ್​​​​ಗಳಲ್ಲಿ ಆಹಾರ ಪದಾರ್ಥಗಳ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ದರ ಏರಿಕೆ ಸಾಮಾನ್ಯವಾಗಿದೆ. ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ ಹೋಟೆಲ್ ದರದಲ್ಲೂ ವ್ಯತ್ಯಾಸವಾಗುತ್ತದೆ. ರಸ್ತೆ ಬದಿಯಲ್ಲಿರುವ ಹೋಟೆಲ್‍ಗಳಲ್ಲಿ ನಮಗಿಂತ ದರ ಹೆಚ್ಚಾಗಿದೆ. ಜನರು ಉತ್ತಮ ಆಹಾರ ಕೇಳುತ್ತಿದ್ದಾರೆ. ದರ ಹೆಚ್ಚಳದ ಬಗ್ಗೆ ಹೇಳಿಲ್ಲ. ಕೋವಿಡ್‍ನಿಂದ ನಷ್ಟವಾಗಿದೆ. ಸರ್ಕಾರ ಪರಿಹಾರ ನೀಡಬೇಕು. ಇಂತಹ ಸಂದರ್ಭದಲ್ಲಿ ತೆರಿಗೆ ಹೆಚ್ಚಿಸಬೇಡಿ ಎಂದು ಮನವಿ ಮಾಡಿದ್ದೇವೆ ಎಂದರು.

ಕೈಗಾರಿಕೆ,ವಾಣಿಜ್ಯ ಸಂಸ್ಥೆಗೆ ಸೌಲಭ್ಯಕ್ಕೆ ಆಗ್ರಹ: ಬಳಿಕ ಎಫ್​​ಕೆಸಿಸಿಐ ಅಧ್ಯಕ್ಷ ಡಾ.ಐ.ಎಸ್.ಪ್ರಸಾದ್ ಮಾತನಾಡಿ, ರಾಜ್ಯಮಟ್ಟದ ರಫ್ತು ಉತ್ತೇಜನ ಮಂಡಳಿ ಭಾರತ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಉತ್ತೇಜಿಸಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ರಫ್ತು ಕೇಂದ್ರಗಳನ್ನು ಸ್ಥಾಪಿಸಲು ನಿರ್ದಿಷ್ಟ ಯೋಜನೆಯನ್ನು ರೂಪಿಸಬೇಕೆಂದು ಎಂದು ಮನವಿ ಮಾಡಲಾಗಿದೆ ಎಂದರು.

ಸಿಎಂ ಬೊಮ್ಮಾಯಿ ಬಜೆಟ್ ಪೂರ್ವ ಸಭೆ

ಕೋವಿಡ್​​​​​ನಿಂದಾಗಿ ಆರ್ಥಿಕ ನಷ್ಟ ಉಂಟಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಕೊಟ್ಟು ಹೆಚ್ಚಿನ ಸೌಲಭ್ಯ ಕೊಡಬೇಕು. ಅಭಿವೃದ್ಧಿಗೆ ಪೂರಕವಾಗಿ ಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾವೆಲ್ಲರೂ ಸಹಕಾರ ನೀಡುತ್ತೇವೆ. ವಾಣಿಜ್ಯ ಮತ್ತು ಕೈಗಾರಿಕೆಗೆ ಇಡೀ ಜಿಲ್ಲೆಯಲ್ಲಿ ಹೆಚ್ಚಿನ ಉತ್ತೇಜನ ಕೊಡಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಬಜೆಟ್​​​​ನಲ್ಲಿ ಸಾಮಾಜಿಕ ಭದ್ರತೆ, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು‌. ಕೈಗಾರಿಕಾ ಟೌನ್ಶಿಪ್​​​ಗಳನ್ನು ಘೋಷಣೆ ಮಾಡಬೇಕು. ವಿದ್ಯುತ್ ತೆರಿಗೆ ಕಡಿತ ಮಾಡಬೇಕು. ಎಪಿಎಂಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕು. ಅದೇ ರೀತಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಏಕಗವಾಕ್ಷಿ ಯೋಜನೆಗೆ ಉತ್ತೇಜನಕ್ಕೆ ಮನವಿ: ನಂತರ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕೈಗಾರಿಕಾ ಮತ್ತು ವಾಣಿಜ್ಯ ಸಮಿತಿ ಅಧ್ಯಕ್ಷ ಉಮೇಶ್ ಹೆಚ್.ಪಾಟೀಲ್ ಮಾತನಾಡಿ, ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಏಕಗವಾಕ್ಷಿ ಯೋಜನೆಯನ್ನು ಉತ್ತೇಜನಗೊಳಿಸಿ ಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ಎಂಎಸ್ಎಂಇಗೆ ಆರ್ಥಿಕ ಸಬಲೀಕರಣಗೊಳಿಸುವುದು. ವಿದ್ಯುತ್‌ ಚಾಲಿತ ವಾಹನಗಳಿಗೆ ಇ.ವಿ. ಚಾರ್ಟಿಂಗ್ ಪಾಯಿಂಟ್‌ಗಳನ್ನು ಹಾಕಬೇಕು. ವಸ್ತು ಪ್ರದರ್ಶನಗಳಲ್ಲಿ ಎಂಎಸ್ಎಂಇ ಗಳು ಭಾಗವಹಿಸಲು ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.

ಲಾರಿ ಚಾಲಕರ ಸಮಸ್ಯೆ ಪರಿಹರಿಸಿ: ಇದೇ ವೇಳೆ, ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಮಾತನಾಡಿ, ಬಾರ್ಡರ್ ಚೆಕ್ ಪೋಸ್ಟ್ ಗಳಿಂದ ಉಪಯೋಗವಿಲ್ಲ. ಅಲ್ಲಿ ಕಿರುಕುಳ ಇದೆ. ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಲಾಗಿದೆ. ಲಾರಿ ಚಾಲಕರ ಸಮಸ್ಯೆ ಹೆಚ್ಚಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಎಷ್ಟೋ ಮುಖ್ಯಮಂತ್ರಿಗಳು ಬಂದರು, ಹೋದರು. ಆದರೆ, ಇಲ್ಲಿವರೆಗೂ ಬಡ ಚಾಲಕರ ನೆರವಿಗೆ ಬರಲಿಲ್ಲ. ಅವರಿಗೆ ನೆರವು ನೀಡಬೇಕೆಂದು ಮನವಿ ಮಾಡಲಾಗಿದೆ.

ಈ ಬಗ್ಗೆ ಚರ್ಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಪ್ರತಿವರ್ಷ ಅಂದಾಜು 10 ಸಾವಿರ ಮಂದಿ ಲಾರಿ ಚಾಲಕರು ರಸ್ತೆ ಅಪಘಾತದಲ್ಲಿ ಸಾಯುತ್ತಾರೆ. ಹಾಗಾಗಿ ಐವತ್ತು ಕಿಲೋಮೀಟರ್ ಒಂದರಂತೆ ಅಟಲ್ ಜಿ ಕ್ಯಾಂಟೀನ್ ತೆಗೆಯಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ.ಮಂಜುನಾಥ್ ಮಾತನಾಡಿ, ಲಾರಿ, ಟ್ಯಾಕ್ಸಿ, ಆಟೋ ಚಾಲಕರ ಅಭಿವೃದ್ಧಿ ನಿಗಮ ಸ್ಥಾಮಿಸಬೇಕು. ಕೋವಿಡ್​​​​ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಸಾಲ ಸೌಲಭ್ಯ ನೀಡಬೇಕು. ಆಟೋ ಚಾಲಕರಿಗೆ ಒಂದು ಲಕ್ಷ ಹಾಗೂ ಟ್ಯಾಕ್ಸಿ ಚಾಲಕರಿಗೆ ಎರಡು ಲಕ್ಷ ಸಾಲ ಸಿಗುವಂತಾಗಬೇಕೆಂದು ಮನವಿ ಮಾಡಲಾಗಿದೆ. ಚಾಲಕರ ದಿನಾಚರಣೆ ಮಾಡಬೇಕು. ಸಾರಥಿ ಯೋಜನೆಯಡಿ ಚಾಲಕರ ಕಾಲೋನಿಗಳನ್ನು ನಗರದಲ್ಲಿ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಆಕ್ರೋಶ : 2022 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಖಾಸಗಿ ಬಸ್ ಮಾಲೀಕರ ಬೇಡಿಕೆಗಳನ್ನು ಮಂಡಿಸಲು ಸಮಯಾವಕಾಶ ನೀಡದೇ ಖಾಸಗಿ ಬಸ್ ಮಾಲೀಕರ ಸಮಸ್ಯೆಗಳ ಕುರಿತು ಸಂಪೂರ್ಣವಾಗಿ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದನ್ನು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಖಂಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.