ETV Bharat / state

ಕೃಷ್ಣ ಮೇಲ್ದಂಡೆ ಕಾಮಗಾರಿಗಳಿಗೆ 10 ಸಾವಿರ ಕೋಟಿ ರೂ ಘೋಷಿಸಿದ ಸಿಎಂ

ಕೃಷ್ಣ ಮೇಲ್ದಂಡೆ 3ನೇ ಹಂತದ ಕಾಮಗಾರಿಗೆ ಮತ್ತು 20 ಹಳ್ಳಿಗಳ ಪುನರ್ವಸತಿ, ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂ. ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ವಿಧಾನಸಭೆಯಲ್ಲಿ ಘೋಷಿಸಿದರು.

author img

By

Published : Mar 6, 2020, 3:21 PM IST

B. S. Yediyurappa
ಯಡಿಯೂರಪ್ಪ

ಬೆಂಗಳೂರು : ಕೃಷ್ಣ ಮೇಲ್ದಂಡೆ 3 ನೇ ಹಂತದ ಯೋಜನೆಗಳ ಕಾಮಗಾರಿಗಳಿಗೆ 10 ಸಾವಿರ ಕೋಟಿ ರೂ.ಗಳ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಇಂದು ಘೋಷಿಸಿದ್ದಾರೆ.

ಕಲಾಪ ಆರಂಭವಾದಾಗ ಸಂವಿಧಾನದ ಮೇಲೆ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಮಾತನಾಡುತ್ತಿದ್ದರು. ಆ ವೇಳೆ ಸ್ವಯಂಪ್ರೇರಿತರಾಗಿ ಹೇಳಿಕೆ ನೀಡಿದ ಸಿಎಂ, ನಿನ್ನೆ ಬಜೆಟ್‍ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ಹಣ ನೀಡಬೇಕೆಂಬುದು ಎಲ್ಲರ ಒತ್ತಾಯವಾಗಿತ್ತು. ಹಾಗಾಗಿ ನಿನ್ನೆ ಹಣಕಾಸು ಇಲಾಖೆ ಜೊತೆ ಚರ್ಚೆ ಮಾಡಿದ್ದೇನೆ. ಕೃಷ್ಣ ಮೇಲ್ದಂಡೆ 3ನೇ ಹಂತದ ಕಾಮಗಾರಿಗೆ ಮತ್ತು 20 ಹಳ್ಳಿಗಳ ಪುನರ್ವಸತಿ, ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂ. ನೀಡಲಾಗುವುದು. ಈ ಯೋಜನೆಗೆ ಕ್ರಿಯಾಯೋಜನೆ ರೂಪಿಸಿ ಮುಂದಿನ ಮೂರು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಧಾನಸಭೆ ಕಲಾಪ

ಸಂಪನ್ಮೂಲ ಕ್ರೂಢೀಕರಣದಲ್ಲಿ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಅಗತ್ಯವಿರುವ ಕಡೆಯಿಂದ ಹಣಕಾಸು ಹೊಂದಿಸಲಾಗುವುದು. ಇಂದು ದೆಹಲಿಗೆ ತೆರಳುತ್ತಿದ್ದು, ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಕೇವಲ ಭರವಸೆ ಬೇಡ:

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನಿನ್ನೆ ಬಜೆಟ್ ಮಂಡನೆ ಮಾಡಿದ್ದಾರೆ. ಅದರಲ್ಲಿ ಕೃಷ್ಣ ಮೇಲ್ದಂಡೆ 3ನೇ ಹಂತದ ಕಾಮಗಾರಿಗಳ ಬಗ್ಗೆ ಪ್ರಸ್ತಾಪ ಇಲ್ಲ. ಈಗ ಎಲ್ಲರಿಂದ ಒತ್ತಡ ಬಂದಿದೆ ಎಂಬ ಕಾರಣಕ್ಕಾಗಿ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಹಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಹಣ ಕೊಡುವುದಾದರೆ ಅದಕ್ಕೆ ನಾನು ಸ್ವಾಗತಿಸುತ್ತೇನೆ. ಆದರೆ, ಸರ್ಕಾರದಲ್ಲಿ ಹಣವೇ ಇಲ್ಲ. ಕೇವಲ ಮೂಗಿಗೆ ತುಪ್ಪ ಹಚ್ಚಿ ಆ ಭಾಗದ ಜನರನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಆಗ ಸಿಎಂ ಯಡಿಯೂರಪ್ಪ, ಕೃಷ್ಣ ಯೋಜನೆ ಜಾರಿಗೆ ಬರಬೇಕು. ಹಣಕಾಸು ಕೊರತೆಯಾಗದಂತೆ ಎಚ್ಚರಿಕೆ ವಹಿಸಿದ್ದೇನೆ. ಕಾಮಗಾರಿಗಳನ್ನು ಆರಂಭಿಸಲು ತಕ್ಷಣ ಪ್ರಯತ್ನ ಮಾಡುತ್ತೇನೆ ಎಂದು ಸಮಜಾಯಿಷಿ ನೀಡಿದರು.

ಕಳೆದ ಒಂದು ತಿಂಗಳಿನಿಂದಲೂ ಏನು ಮಾಡುತ್ತಿದ್ದೀರಿ. 10 ಸಾವಿರ ಕೋಟಿ ರೂ. ಬಜೆಟ್‍ನ ಲೆಕ್ಕದಲ್ಲಿಲ್ಲ. ಹೆಚ್ಚುವರಿಯಾಗಿ ಪ್ರಕಟಿಸುತ್ತಿರುವ ಈ ಹಣ ಎಲ್ಲಿಂದ ತರುತ್ತೀರಾ? ಕೇಂದ್ರ ಸರ್ಕಾರದ ಬಳಿ ಮನವಿ ಮಾಡುತ್ತೇವೆ, ಹೇಗೋ ಹೊಂದಿಸುತ್ತೇವೆ ಎಂಬ ಮಾತುಗಳು ನಂಬೋಕಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಗೋವಿಂದ ಕಾರಜೋಳರಿಂದ ಸಿದ್ದರಾಮಯ್ಯ ಮಾತಿಗೆ ಆಕ್ಷೇಪ:

ಆಗ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬ್ರಿಜೇಶ್ ಪಟೇಲ್ ಅವರ ಸಮಿತಿ ಕರ್ನಾಟಕಕ್ಕೆ ಕೃಷ್ಣ ನದಿ ಪಾತ್ರದಿಂದ 173 ಟಿಎಂಸಿ ನೀರು ಹಂಚಿಕೆ ಮಾಡಿ 7 ವರ್ಷ ಕಳೆದಿದೆ. ಹಿಂದಿನ ಸರ್ಕಾರ ಒಂದೂ ರೂಪಾಯಿ ಕೂಡ ಕೊಡಲಿಲ್ಲ. 2012-13ನೇ ಸಾಲಿನಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಗೆ 17,207 ಕೋಟಿಗಳನ್ನು ನಿಗದಿ ಮಾಡಿ ಕ್ರಿಯಾ ಯೋಜನೆ ರೂಪಿಸಿತ್ತು. ನೂತನ ಸರ್ಕಾರಗಳು 1.32 ಲಕ್ಷ ಹೆಕ್ಟೇರ್ ಭೂಮಿಗೆ ಪರಿಹಾರ ನೀಡಿದ್ದರೆ ಈ ವೇಳೆಗಾಗಲೇ ಆಲಮಟ್ಟಿಯ ಎತ್ತರ 520 ಸಾವಿರ ಮೀಟರ್​​​ನಿಂದ 524 ಮೀಟರ್ ಏರುತ್ತಿತ್ತು. ಜಲಾಶಯದಲ್ಲಿ ನೀರು ನಿಲ್ಲುತ್ತಿತ್ತು.

ನಾವು ಕೃಷ್ಣ ನದಿ ನೀರಿನ ಹಂಚಿಕೆ ವಿಚಾರವಾಗಿ ಕಾನೂನು ಸಮರವನ್ನು ಮುಂದುವರೆಸುತ್ತಿದ್ದೇವೆ. ಮತ್ತೊಂದೆಡೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ನಾನು ಕೃಷ್ಣ ಯೋಜನೆಯ ಮುಳುಗಡೆ ಪ್ರದೇಶದಿಂದ ಬಂದವನು. ಸಿದ್ದರಾಮಯ್ಯ ಕೂಡ ಈಗ ನಮ್ಮ ಜಿಲ್ಲೆಗೆ ಬಂದಿದ್ದಾರೆ. ಯಡಿಯೂರಪ್ಪ ಅವರು 10 ಸಾವಿರ ಕೋಟಿ ರೂ. ಘೋಷಣೆ ಮಾಡಿದಾಗ ಅಭಿನಂದನೆ ಹೇಳುತ್ತಾರೆ ಎಂದುಕೊಂಡಿದ್ದೆ. ನಾನಂತೂ ಯಡಿಯೂರಪ್ಪ ಅವರಿಗೆ ಅಭಿನಂದನೆ ಹೇಳುತ್ತೇನೆ ಎಂದರು.

ಲೆಕ್ಕದಲ್ಲಿ ಇಲ್ಲದ್ದನ್ನ ಎಷ್ಟರ ಮಟ್ಟಿಗೆ ನಂಬಬೇಕು?

ಆಗ ಸಿದ್ದರಾಮಯ್ಯನವರು ಬಜೆಟ್‍ನ ಲೆಕ್ಕದಲ್ಲಿ 10 ಸಾವಿರ ಕೋಟಿ ರೂ. ಸೇರಿದ್ದರೆ ನಾನು ಅಭಿನಂದನೆ ಹೇಳುತ್ತಿದ್ದೆ. ಆದರೆ, ಭರವಸೆಯ ಮಾತುಗಳನ್ನು ನಂಬೋಕೆ ಆಗುವುದಿಲ್ಲ. ಮೊದಲು ಯೋಜನೆಯನ್ನು ಜಾರಿಗೊಳಿಸಲಿ. ಈ ಹಿಂದೆ ನಮ್ಮ ಸರ್ಕಾರ ಐದು ವರ್ಷದಲ್ಲಿ ನೀರಾವರಿಗೆ 58 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.