ದೇವನಹಳ್ಳಿ(ಬೆಂಗಳೂರು): ನಗರದಬಟ್ಟೆ ಅಂಗಡಿಗೆ ಬಟ್ಟೆ ಖರೀದಿಯ ನೆಪದಲ್ಲಿ ಬಂದ ಖದೀಮರು ಗಲ್ಲಾ ಪೆಟ್ಟಿಗೆಯ ಮೇಲಿಟ್ಟಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಫೆಬ್ರವರಿ 2 ರಂದು ದೇವನಹಳ್ಳಿ ಪಟ್ಟಣದ ಬಟ್ಟೆ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ವಿಶೇಷಚೇತನ ಮಗನನ್ನು ಕೊಂದು ದಂಪತಿ ಆತ್ಮಹತ್ಯೆ
ಬಟ್ಟೆ ಅಂಗಡಿಯಲ್ಲಿ ಒಬ್ಬಳೆ ಮಹಿಳೆ ಇರುವುದನ್ನ ಖಚಿತಪಡಿಸಿಕೊಂಡ ಇಬ್ಬರು ಖದೀಮರು ಬಟ್ಟೆ ಖರೀದಿ ನೆಪದಲ್ಲಿ ಅಂಗಡಿಗೆ ಬಂದಿದ್ದಾರೆ. ಮೊದಲಿಗೆ ಬಂದ ವ್ಯಕ್ತಿ ಬಟ್ಟೆ ಖರೀದಿಗೆ ಬಂದಿದ್ದ. ನಂತರ ಬಂದವನು 2 ಸಾವಿರ ರೂ.ಗೆ ಚಿಲ್ಲರೆ ಕೊಡುವಂತೆ ಕೇಳಿಕೊಂಡು ಬಂದಿದ್ದಾನೆ. ಮಹಿಳೆ ಬಟ್ಟೆಗಳನ್ನ ತೋರಿಸುತ್ತಿದ್ದಾಗ ಹಿಂದಿದ್ದ ವ್ಯಕ್ತಿ ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣವನ್ನ ಎಗರಿಸಿದ್ದಾನೆ. ಕಳ್ಳತನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.