ETV Bharat / state

ಯೋಗ ದಿನ, ಪ್ರಧಾನಿ ಸ್ವಾಗತದ ಫಲಕಗಳು ಸೇರಿ ಅಕ್ರಮ ಬ್ಯಾನರ್​ಗಳ ತೆರವು: ಬಿಬಿಎಂಪಿ - ಯೋಗ ದಿನ ಬ್ಯಾನರ್

ಹೈಕೋರ್ಟ್ ಆದೇಶದ ಹೊರತಾಗಿಯೂ ನಗರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್​ಗಳು ಹೆಚ್ಚಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿ ರಾಜಕೀಯ ಮುಖಂಡರನ್ನು ಸ್ವಾಗತಿಸುವ ಬ್ಯಾನರ್‌ಗಳನ್ನು ಹಾಕುವವರ ವಿರುದ್ಧ ಪಾಲಿಕೆ ಕ್ರಮದ ಎಚ್ಚರಿಕೆ ಕೊಟ್ಟಿದೆ.

bbmp
ಬಿಬಿಎಂಪಿ
author img

By

Published : Jun 22, 2022, 4:55 PM IST

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರುವ ಫಲಕಗಳೂ ಸೇರಿದಂತೆ ನಗರದ ಹಲವು ರಸ್ತೆಗಳಲ್ಲಿದ್ದ ಅಕ್ರಮ ಬ್ಯಾನರ್​ಗಳನ್ನು ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಮಾಹಿತಿ ನೀಡಿದೆ. ಜಂಟಿ ಆಯುಕ್ತರ ನೇತೃತ್ವದಲ್ಲಿ 2 ವಲಯಗಳಲ್ಲಿ 200 ಸಿಬ್ಬಂದಿಯ ತಂಡ ವಿಶೇಷ ಅಭಿಯಾನ ನಡೆಸಿ 5,000ಕ್ಕೂ ಹೆಚ್ಚು ಬ್ಯಾನರ್​ಗಳನ್ನು ತೆರವುಗೊಳಿಸಿದೆ ಎಂದು ಬಿಬಿಎಂಪಿ (ಕಂದಾಯ) ವಿಶೇಷ ಆಯುಕ್ತ ದೀಪಕ್ ತಿಳಿಸಿದರು.

ಈ ಬಾರಿ ಅಕ್ರಮ ಬ್ಯಾನರ್​ಗಳ ಪತ್ತೆಗೆ ಜಿಪಿಎಸ್ ಕ್ಯಾಮೆರಾಗಳನ್ನು ಬಳಕೆ ಮಾಡಲಾಗಿದೆ. ಹೈಕೋರ್ಟ್ ಆದೇಶದ ಹೊರತಾಗಿಯೂ ನಗರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್​ಗಳು ಹೆಚ್ಚಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿ ರಾಜಕೀಯ ಮುಖಂಡರನ್ನು ಸ್ವಾಗತಿಸುವ ಬ್ಯಾನರ್‌ಗಳನ್ನು ಹಾಕುವವರ ವಿರುದ್ಧ ಪಾಲಿಕೆ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಅಗ್ನಿಪಥ್ ಯೋಜನೆ ಯುವಕರಿಗೆ ವರದಾನವಾಗುತ್ತದೆ: ಶಾಸಕ ಮಹೇಶ್ ಕುಮಟಳ್ಳಿ

ಯೋಗ ದಿನ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಅಕ್ರಮ ಬ್ಯಾನರ್‌ಗಳ ಕುರಿತು ನಮಗೆ ಸಾಕಷ್ಟು ದೂರುಗಳು ಬಂದಿದ್ದವು. ಸಿಎಂ ಬೊಮ್ಮಾಯಿ ನಿವಾಸದ ಎದುರಿನ ಕನಕದಾಸ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕೆಲ ಸಂಘಟಕರು ಬ್ಯಾನರ್​ಗಳನ್ನು ಹಾಕಿದ್ದರು. ಹೀಗಾಗಿ ಎಲ್ಲಾ ವಲಯಗಳ ಅಧಿಕಾರಿಗಳಿಗೆ ಸೂಚನೆ ನೀಡಿ ಜಿಪಿಎಸ್ ಕ್ಯಾಮೆರಾಗಳನ್ನು ಬಳಸಿ ಅಕ್ರಮ ಬ್ಯಾನರ್​ಗಳನ್ನು ತೆರವುಗೊಳಿಸಿದ್ದೇವೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.