ETV Bharat / state

18-44 ವಯೋಮಾನದವರಿಗೆ ಲಸಿಕೆ ಲಭ್ಯವಿಲ್ಲ.. ಗೊಂದಲಕ್ಕೆ ಆರೋಗ್ಯ ಇಲಾಖೆ ತೆರೆ.. NHM ಸ್ಪಷ್ಟ ಮಾಹಿತಿ - ಆರೋಗ್ಯ ಇಲಾಖೆ

ಕೋವ್ಯಾಕ್ಸಿನ್ ಎರಡನೇ ಡೋಸ್ ಪಡೆಯಬೇಕಾದ ಫಲಾನುಭವಿಗಳಿಗೆ ಎಸ್ಎಮ್ಎಸ್ ಕಳುಹಿಸಲಾಗುವುದು. ಎಸ್ಎಮ್ಎಸ್‌ನಲ್ಲಿ ತಿಳಿಸಲಾದ ಕೋವಿಡ್-19 ಲಸಿಕಾಕರಣ ಕೇಂದ್ರದಲ್ಲಿ ನಿಗದಿತ ಸಮಯಕ್ಕೆ ಫಲಾನುಭವಿಗಳು ಲಸಿಕೆ ಪಡೆಯಬಹುದು..

Clear information from the NHM about the vaccine
ಲಸಿಕೆ ಗೊಂದಲಕ್ಕೆ ತೆರೆ ಎಳೆದ ಆರೋಗ್ಯ ಇಲಾಖೆ
author img

By

Published : May 22, 2021, 8:34 PM IST

ಬೆಂಗಳೂರು್‌ : ರಾಜ್ಯದಲ್ಲಿ ಕೋವಿಡ್ ಲಸಿಕೆ ಬಗೆಗಿನ ಗೊಂದಲ ನಿವಾರಣೆಗಾಗಿ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

45 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕಾಕರಣ-ಕೋವಿಶೀಲ್ಡ್ ಮೊದಲನೇ ಡೋಸ್ ನಗರ ಪ್ರದೇಶಗಳಲ್ಲಿ ಆನ್​ಲೈನ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆನ್​ಸೈಟ್ ನೋಂದಣಿ ಮುಖಾಂತರ ಲಸಿಕೆ ನೀಡಲಾಗುತ್ತೆ.

ಕೋವಿಶೀಲ್ಡ್ ಎರಡನೇ ಡೋಸ್‌ ಹತ್ತಿರದ ಕೋವಿಡ್-19 ಲಸಿಕಾಕರಣ ಕೇಂದ್ರಕ್ಕೆ ನೇರವಾಗಿ ತೆರಳಬಹುದು (ವಾಕ್-ಇನ್)- ಕೋವ್ಯಾಕ್ಸಿನ್ ಮೊದಲನೇ ಡೋಸ್‌ ಸದ್ಯಕ್ಕೆ ಲಭ್ಯವಿರುವುದಿಲ್ಲ.

ಕೋವ್ಯಾಕ್ಸಿನ್ ಎರಡನೇ ಡೋಸ್ ಪಡೆಯಬೇಕಾದ ಫಲಾನುಭವಿಗಳಿಗೆ ಎಸ್ಎಮ್ಎಸ್ ಕಳುಹಿಸಲಾಗುವುದು. ಎಸ್ಎಮ್ಎಸ್‌ನಲ್ಲಿ ತಿಳಿಸಲಾದ ಕೋವಿಡ್-19 ಲಸಿಕಾಕರಣ ಕೇಂದ್ರದಲ್ಲಿ ನಿಗದಿತ ಸಮಯಕ್ಕೆ ಫಲಾನುಭವಿಗಳು ಲಸಿಕೆ ಪಡೆಯಬಹುದು.

18-44 ವರ್ಷ ವಯೋಮಾನದವರಿಗೆ ಕೋವಿಡ್-19 ಸದ್ಯಕ್ಕೆ ಲಸಿಕೆ ಲಭ್ಯವಿರುವುದಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.‌ ಆದರೆ, ರಾಜ್ಯ ಗುರುತಿಸಿರುವ ಕೋವಿಡ್-19 ಮುಂಚೂಣಿ ಕಾರ್ಯಕರ್ತರಿಗೆ, ದುರ್ಬಲ ಗುಂಪಿನವರಿಗೆ ಮತ್ತು ಆದ್ಯತೆ ಗುಂಪಿನವರಿಗೆ ಆಯಾ ಗುಂಪಿನ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕಾಕೀರಣದ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡಲಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಓದಿ: ಕೋವಿಡ್ ನೆಗೆಟಿವ್ ರಿಪೋರ್ಟ್​ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ; ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.