ETV Bharat / state

ನ್ಯಾಯದಾನ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳಿಗೆ ಹೆಚ್ಚು ಆದ್ಯತೆ : ಸಿಎಂ - ಪ್ರಜಾಪ್ರಭುತ್ವ

ಕಾನೂನು ಮತ್ತು ಸಂಸದೀಯ ಸುಧಾರಣಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಡಿ ಶಾಸ್ತ್ರೀಯ ಭಾಷಾ ಯೋಜನೆಯ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಇಂದು ನಡೆಯಿತು.

four books release
ನಾಲ್ಕು ಪುಸ್ತಕಗಳ ಲೋಕಾರ್ಪಣೆ
author img

By

Published : Dec 8, 2022, 7:44 PM IST

ಬೆಂಗಳೂರು: ನ್ಯಾಯದಾನ ವ್ಯವಸ್ಥೆಯಲ್ಲಿ ಮಾನವೀಯ ಗುಣಗಳಿರುವ ವಿಚಾರಗಳಿಗೆ ಹಿಂದಿನಿಂದಲೂ ಹೆಚ್ಚು ಮೌಲ್ಯ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಕಾನೂನು ಮತ್ತು ಸಂಸದೀಯ ಸುಧಾರಣಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಹೊರತಂದಿರುವ ಶಾಸ್ತ್ರೀಯ ಭಾಷಾ ಯೋಜನೆಯ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಈಗ ಕ್ರೋಢೀಕರಿಸಿದ ಶಾಸನ ರಚನೆ ಹಾಗೂ ನ್ಯಾಯದಾನದ ವ್ಯವಸ್ಥೆ ಇದೆ. ಕ್ರೋಢೀಕರಣ ಆಗದಿದ್ದರೂ ಕೂಡ ತನ್ನದೇ ಆದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ರಾಜರ ಕಾಲದಲ್ಲಿ ನ್ಯಾಯದಾನ, ರಾಣಿಯರ ಆಡಳಿತದ ಪರಂಪರೆಯ ವಿಚಾರಗಳು ಈ ಪುಸ್ತಕಗಳಲ್ಲಿ ಬಂದಿರುವುದು, ಕಾನೂನು ಆಸಕ್ತಿ ಇರುವವರಿಗೆ ಮಾರ್ಗದರ್ಶಿಯಾಗಲಿದೆ ಎಂದು ಹೇಳಿದರು.

ಪಿಹೆಚ್‌ಡಿ ಮಾಡಿದ್ದ ಒಬ್ಬರು ಕಲ್ಯಾಣ ಚಾಲುಕ್ಯರ ಆಡಳಿತದಲ್ಲಿ ನ್ಯಾಯದಾನ ವ್ಯವಸ್ಥೆ ಹೇಗಿತ್ತು, ಪ್ರಜಾಪ್ರಭುತ್ವ ಹೇಗಿತ್ತು ಅನ್ನುವುದನ್ನು 11 ನೇ ಶತಮಾನದ ಶಿಲಾಶಾಸನಗಳನ್ನು ಅಭ್ಯಾಸ ಮಾಡಿ ತಿಳಿಸಿದ್ದಾರೆ. ನಾನಾ ವಿಚಾರದ ಈ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ನೀಡಲಾಗಿದೆ. ಹೆಚ್ಚೆಚ್ಚು ಯುವಜನರು ಓದಿ ನ್ಯಾಯ, ನ್ಯಾಯಾಂಗ ಹಾಗೂ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತಾಗಲಿ ಎಂದು ತಿಳಿಸಿದರು.

ಇದನ್ನೂಓದಿ:ವಿಚ್ಛೇದನ: ಎರಡು ಕಾಯಿದೆಗಳಡಿ ಪತ್ನಿ ಪರಿಹಾರ ಪಡೆಯಲು ಅರ್ಹ- ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.