ಬೆಂಗಳೂರು: ಕೊರೊನಾ ವಾರಿಯರ್ಸ್ಗೆ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ನಗರ ಆಯುಕ್ತರು ಸಿಲಿಕಾನ್ ಸಿಟಿಯ ನಾಗರಿಕರಿಗೆ ಪೊಲೀಸರ ಜೊತೆ ಕೆಲಸ ಮಾಡುವ ಅವಕಾಶ ನೀಡಿದ್ದರು.
ಸದ್ಯ ಕೊರೊನಾ ಇದ್ದರೂ ಕೂಡ ಕೊರೊನಾ ವಾರಿಯರ್ಸ್ ಜೊತೆ ಲಾಕ್ಡೌನ್ನಲ್ಲಿ ನಾವು ಕೈ ಜೋಡಿಸ್ತೀವಿ ಎಂದು ಬಹಳಷ್ಟು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ದಕ್ಷಿಣ ವಿಭಾಗ - 1,967, ಉತ್ತರ ವಿಭಾಗ - 1884, ಪಶ್ಚಿಮ ವಿಭಾಗ - 1,532, ಪೂರ್ವ ವಿಭಾಗ - 1,184, ಆಗ್ನೇಯ ವಿಭಾಗ - 1,070, ವೈಟ್ ಫೀಲ್ಡ್ ವಿಭಾಗ - 740, ಕೇಂದ್ರ ವಿಭಾಗ - 542, ಈಶಾನ್ಯ ವಿಭಾಗದಲ್ಲಿ 706 ಮಂದಿ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಈ ಅರ್ಜಿ ಸಲ್ಲಿಕೆ ಮಾಡಿದ ನಾಗರಿಕ ಪೊಲೀಸರನ್ನ ಸದ್ಯ ಪೊಲೀಸರ ಜೊತೆ ಲಾಕ್ಡೌನ್ ಸಂದರ್ಭದಲ್ಲಿ ಭದ್ರತೆ ನೋಡಿಕೊಳ್ಳಲು ಬಳಕೆ ಮಾಡಲಾಗುವುದು. ಇವರು ಪೊಲೀಸರ ಹಾಗೆ ಅನಗತ್ಯ ವಾಹನ ಓಡಾಟ , ಮಾಸ್ಕ್ ಹಾಕದೇ ಓಡಾಟಕ್ಕೆ ಬ್ರೇಕ್ ಹಾಕಲಿದ್ದಾರೆ. ಸಿಟಿಯ ಭದ್ರತೆ, ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆ ಪೊಲೀಸರ ಜೊತೆ ಕೆಲಸದಲ್ಲಿ ಇವರು ಕೈ ಜೋಡಿಸಲಿದ್ದಾರೆ.
ಸದ್ಯ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಿನ್ನೆಲೆ ಪೊಲೀಸರ ಜೊತೆ ಸಾರ್ವಜನಿಕರು ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಇವರಿಗೆ ಪೊಲೀಸ್ ಇಲಾಖೆಯಿಂದಲೇ ಮಾಸ್ಕ್ , ಫೇಸ್ ಶೀಲ್ಡ್, ಜರ್ಕಿನ್ ವಿತರಣೆ ಮಾಡಲಾಗುವುದು. ಕೊರೊನಾ ಸೋಂಕಿತ ಕಂಟೇನ್ಮೆಂಟ್ ಝೋನ್ಗಳಳಿಗೆ ನಿರ್ಬಂಧ ಹೇರಲಾಗಿದೆ. ಸದ್ಯ ನಾಗರಿಕ ಪೊಲೀಸರು ನೈಟ್ ರೌಂಡ್ಸ್ ಶುರು ಮಾಡಿಕೊಂಡಿದ್ದಾರೆ.