ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಜನರು ಗುಂಪು ಸೇರುವುದು, ಮಾಸ್ಕ್ ಹಾಕದೆ ಇರುವುದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪ್ರತಿಭಟನಾ ಮುಖಂಡರುಗಳಿಗೆ ನಗರ ಆಯುಕ್ತ ಕಮಲ್ ಪಂಥ್ ನೋಟಿಸ್ ಜಾರಿ ಮಾಡಿದ್ದಾರೆ.
ಓದಿ: ಕರ್ನಾಟಕ ಬಂದ್ : ಕೆಆರ್ ಮಾರ್ಕೆಟ್‌ನಲ್ಲಿ ಸಹಜ ಸ್ಥಿತಿ.. ಪೊಲೀಸ್ ಕಣ್ಗಾವಲು
ಕೋವಿಡ್ ನಿಯಮದ ಪ್ರಕಾರ, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹಾಗೆಯೇ ದೈಹಿಕ ಅಂತರ ಕಾಪಾಡಬೇಕು. ಹೈಕೋರ್ಟ್ ಸೂಚನೆ ಪ್ರಕಾರ, ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾಗದಂತೆ ಶಾಂತಿಯುತ ಪ್ರತಿಭಟನೆಗೆ ಮಾಡಬೇಕು. ಪ್ರತಿಭಟನೆ ವೇಳೆ ಮಾಸ್ಕ್ ಹಾಕದೆ ಇರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.