ಬೆಂಗಳೂರು: ಕರ್ತವ್ಯದಲ್ಲಿ ಬ್ಯುಸಿಯಾಗಿರುವ ಪೊಲೀಸರಿಗೆ ಸ್ವಲ್ಪ ಮೈಂಡ್ ಫ್ರೀ ಮಾಡಿಸಿ, ಕೆಲಸದೊತ್ತಡ ಹೋಗಲಾಡಿಸಲು ನಗರ ಪೊಲೀಸ್ ಆಯಕ್ತ ಭಾಸ್ಕರ್ ರಾವ್ ಹೊಸ ಪ್ಲಾನ್ ಮಾಡಿದ್ದಾರೆ. ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಫಿಟ್ನೆಸ್ ಜಿಮ್ ತೆರೆಯಲು ಅವರು ನಿರ್ಧರಿಸಿದ್ದಾರೆ.
ಪೊಲೀಸ್ ಠಾಣೆಗಳ ಒಂದು ಕೊಠಡಿಯನ್ನು ಜಿಮ್ ಆಗಿ ಪರಿವರ್ತಿಸಿ, ಆಯಾ ವ್ಯಾಪ್ತಿಯ ಜಿಮ್ ತರಬೇತುದಾರರು ಪೊಲೀಸರಿಗೆ ತರಬೇತಿ ನೀಡಲಿದ್ದಾರೆ. ಪೊಲೀಸ್ ಸಿಬ್ಬಂದಿಗಳು ಫಿಟ್ ಆಗಿಲ್ಲ. ಹೀಗಾಗಿ ಠಾಣೆಯ ಒಂದು ಭಾಗವನ್ನು ಜಿಮ್ ಆಗಿ ಪರಿವರ್ತಿಸಲಾಗುತ್ತಿದ್ದು ಸಿಬ್ಬಂದಿ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಠಾಣೆಯಲ್ಲಿ ಜಿಮ್ ಇದ್ದರೆ ಮಹಿಳೆಯರು, ಪುರುಷರು ಸೇರಿದಂತೆ ಎಲ್ಲಾ ಸಿಬ್ಬಂದಿ ತರಬೇತಿ ಪಡೆಯಬಹುದು ಎಂಬುದು ಪೊಲೀಸ್ ಆಯುಕ್ತರ ಯೋಚನೆ.
ಇತ್ತೀಚೆಗೆ ಈಶಾನ್ಯ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಸಿಬ್ಬಂದಿಗಳಿಂದ ಜುಂಬಾ ನೃತ್ಯ ಮಾಡಿಸಿ ಗಮನ ಸೆಳೆದಿದ್ದರು.