ETV Bharat / state

ವೊಲ್ವೊ ಬಸ್​​ನಲ್ಲಿ ಸಾರಿಗೆ ಸಚಿವ ಸವದಿ ಬೆಂಗಳೂರು ನಗರ ಸಂಚಾರ.. - bangalore news

ವೊಲ್ವೊ ಬಸ್​ನಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ನಗರ ಸಂಚಾರ ಮಾಡಿದ್ದಾರೆ. ಜೊತೆಗೆ ಬಸ್​ ಪ್ರಿಯಾರಿಟಿ ಲೇನ್​ ಯೋಜನೆ ಜಾರಿ ಕುರಿತಾಗಿ ಪರಿಶೀಲನೆ ನಡೆಸಿದ್ದಾರೆ.

ವೊಲ್ವೊ ಬಸ್​​ನಲ್ಲಿ ಸಾರಿಗೆ ಸಚಿವ ಸವದಿಯಿಂದ ನಗರ ಸಂಚಾರ
author img

By

Published : Oct 2, 2019, 4:56 PM IST

ಬೆಂಗಳೂರು: ವೊಲ್ವೊ ಬಸ್​​ನಲ್ಲಿ ಸಾರಿಗೆ ಸಚಿವರ ನಗರ ಸಂಚಾರವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ನಡೆಸಿದರು. ನಗರ ಸಂಚಾರದ ಜೊತೆಗೆ ಬಸ್ ಪ್ರಿಯಾರಿಟಿ ಲೇನ್ ಯೋಜನೆ ಜಾರಿ ಕುರಿತಾದ ಪರಿಶೀಲನೆಯನ್ನು ನಡೆಸಿದರು.

ವೊಲ್ವೊ ಬಸ್​​ನಲ್ಲಿ ಸಾರಿಗೆ ಸಚಿವ ಸವದಿ ಬೆಂಗಳೂರು ನಗರ ಸಂಚಾರ..

ಬಸ್ ಪ್ರಿಯಾರಿಟಿ ಲೇನ್ ಯೋಜನೆ ಜಾರಿ ಕುರಿತಾದ ಪರಿಶೀಲನೆ ನಡೆಸಲು ಸ್ವತಃ ಸಚಿವರೇ ನಗರ ಪ್ರದಕ್ಷಿಣೆ ಹಾಕಿದ್ದಾರೆ. ಪ್ರಯಾಣಿಕರಿಗೆ ಅಗತ್ಯವಾದ ರಸ್ತೆಯಲ್ಲಿ ಸುಧಾರಿತ ಪ್ರಯಾಣ, ಕಡಿಮೆ ಅವಧಿಯಲ್ಲಿ ಹೆಚ್ಚಿನ ದೂರವನ್ನು ಕ್ರಮಿಸುವುದು ಹಾಗೂ ಹೆಚ್ಚಿನ ಜನರನ್ನು ಬಸ್​​ನಲ್ಲಿ ಪ್ರಯಾಣಿಸಲು ಆಕರ್ಷಿಸುವ ನಿಟ್ಟಿನಲ್ಲಿ ಬಸ್ ಕಾರಿಡಾರ್​ಗಳನ್ನು ರಚಿಸಲು ಯೋಜನೆ ರೂಪಿಸಲಾಗಿದೆ.

ಮೊದಲನೇ ಹಂತವಾಗಿ ಟಿನ್ ಫ್ಯಾಕ್ಟರಿಯಿಂದ ಸೆಂಟ್ರಲ್​​​​ನ ಸಿಲ್ಕ್ ಬೋರ್ಡ್ ರಸ್ತೆ ಮಾರ್ಗವನ್ನು ಬಸ್ ಪ್ರಯಾರಿಟಿ ಲೇನ್​​​ಗಾಗಿ ಇರುವ ರಸ್ತೆಯನ್ನು ಸಚಿವ ಲಕ್ಷ್ಮಣ್ ಸವದಿ ಪರಿಶೀಲನೆ ನಡೆಸಿದರು. ಈಗಾಗಲೇ ಇರುವ ರಸ್ತೆಯಲ್ಲೇ 3.5 ಮೀಟರ್ ಅಗಲದ ಪಥವನ್ನು ಬಸ್‌ಗಾಗಿ ಕಾಯ್ದಿರಿಸಲಾಗುತ್ತದೆ. ಈ ರಸ್ತೆಯಲ್ಲಿ ಇನ್ನೆರಡು ಪಥಗಳನ್ನು ಇತರ ವಾಹನಗಳ ಸಂಚಾರಕ್ಕೆ ಬಳಸಬಹುದು.

ಕಾಯ್ದಿರಿಸಿದ ಪಥದಲ್ಲಿ ಬಸ್‌ ಹಾಗೂ ಆ್ಯಂಬುಲೆನ್ಸ್ ಹೊರತಾಗಿ ಅನ್ಯವಾಹನಗಳಿಗೆ ಪ್ರವೇಶ ಇಲ್ಲದ ಕಾರಣ, ಇಲ್ಲಿ ಬಸ್‌ಗಳ ಸರಾಸರಿ ವೇಗ ಹೆಚ್ಚಳವಾಗಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಬಹುದು. ಇದನ್ನು ಹೊರವರ್ತುಲ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಇದರಿಂದ ಬಸ್‌ ಪ್ರಯಾ ಣಿಕರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Intro:ಬೆಂಗಳೂರು:

BMTC ಬಸ್​​ನಲ್ಲಿ ಸಾರಿಗೆ ಸಚಿವರ ನಗರ ಸಂಚಾರ, ಬಸ್ ಪ್ರಿಯಾರಿಟಿ ಲೇನ್ ಯೋಜನೆ ಜಾರಿ ಕುರಿತಾದ ಪರಿಶೀಲನೆ.

ಸಾರಿಗೆ ಸಚಿವರಾದ ಬಳಿಕ ಲಕ್ಷ್ಮಣ್ ಸವದಿ ಮೊದಲ ಬಾರಿಗೆ ಇಂದು ಬಿಎಂಟಿಸಿ ವೋಲ್ವೋ ಬಸ್​​ನಲ್ಲಿ ನಗರ ಸಂಚಾರ ಮಾಡಿದ್ರು.

ಬಸ್ ಪ್ರಿಯಾರಿಟಿ ಲೇನ್ ಯೋಜನೆ ಜಾರಿ ಕುರಿತಾದ ಪರಿಶೀಲನೆ ನಡೆಸಲು ಸ್ವತಃ ಸಚಿವರೇ ನಗರ ಪ್ರದಕ್ಷಿಣೆ ಹಾಕಿದ್ದಾರೆ. ಪ್ರಯಾಣಿಕರಿಗೆ ಅಗತ್ಯವಾದ ರಸ್ತೆ ಸುಧಾರಿತ ಪ್ರಯಾಣ, ಕಡಿಮೆ ಅವಧಿಯಲ್ಲಿ ಹೆಚ್ಚಿನ ದೂರವನ್ನು ಕ್ರಮಿಸುವುದು ಹಾಗೂ ಹೆಚ್ಚಿನ ಜನರನ್ನು ಬಸ್​​ನಲ್ಲಿ ಪ್ರಯಾಣಿಸಲು ಆಕರ್ಷಿಸುವ ನಿಟ್ಟಿನಲ್ಲಿ ಬಸ್ ಕಾರಿಡಾರ್​ಗಳನ್ನು ರಚಿಸಲು ಯೋಜನೆ ರೂಪಿಸಲಾಗಿದೆ.Body:ಮೊದಲನೇ ಹಂತವಾಗಿ ಟಿನ್ ಫ್ಯಾಕ್ಟರಿಯಿಂದ ಸೆಂಟ್ರಲ್​​​​ನ ಸಿಲ್ಕ್ ಬೋರ್ಡ್ ರಸ್ತೆ ಮಾರ್ಗವನ್ನು ಬಸ್ ಪ್ರಯಾರಿಟಿ ಲೇನ್​​​ಗಾಗಿ ಸಚಿವ ಲಕ್ಷ್ಮಣ್ ಸವದಿ ಪರಿಶೀಲನೆ ನಡೆಸಿದರು.Conclusion:ಇರುವ ರಸ್ತೆಯಲ್ಲೇ 3.5 ಮೀ ಅಗಲದ ಪಥವನ್ನು ಬಸ್‌ಗಾಗಿ ಕಾಯ್ದಿರಿಸಲಾಗುತ್ತದೆ. ಈ ರಸ್ತೆಯಲ್ಲಿ ಇನ್ನೆರಡು ಪಥ ಗಳನ್ನು ಇತರ ವಾಹನಗಳ ಸಂಚಾರಕ್ಕೆ ಬಳಸಬಹುದು. ಕಾಯ್ದಿರಿಸಿದ ಪಥದಲ್ಲಿ ಬಸ್‌ ಹಾಗೂ ಆಂಬುಲೆನ್ಸ್ ಹೊರತಾಗಿ ಅನ್ಯವಾಹನಗಳಿಗೆ ಪ್ರವೇಶ ಇಲ್ಲದ ಕಾರಣ, ಇಲ್ಲಿ ಬಸ್‌ಗಳ ಸರಾಸರಿ ವೇಗ ಹೆಚ್ಚಳವಾಗಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಬಹುದು,ಇದನ್ನು ಹೊರವರ್ತುಲ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಇದರಿಂದ ಬಸ್‌ ಪ್ರಯಾ ಣಿಕರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.