ಬೆಂಗಳೂರು: ರ‍್ಯಾಶ್ ಡ್ರೈವಿಂಡ್, ಮೋಜು ಮಸ್ತಿಗೆ ರೈಡಿಂಗ್, ಬೆಟ್ಟಿಂಗ್, ಸಿಗ್ನಲ್ ಜಂಪ್ ಇಂತಹ ಕಾರು ಚಾಲನೆಯ ಮೇಲೆ ನಿಗಾ ಇಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಟ್ರಾಫಿಕ್ ಆಯುಕ್ತ ರವಿಕಾಂತೇಗೌಡ ಅವರಿಗೆ ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ ನಗರದಲ್ಲಿ ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹಾಕಿಕೊಂಡು ಸಂಚರಿಸುವ ಶಾಲಾ ವಾಹನ ಚಾಲಕರ ಬಗ್ಗೆ ನಿಗಾ ಇಡಲು ಕೂಡ ವಿಶೇಷವಾಗಿ ಸೂಚನೆ ನೀಡಿದ್ದಾರೆ. ಶಾಲಾ ವಾಹನದಲ್ಲಿ 4+1 ಜನರು ಕೂರುವ ಸೀಟ್ನಲ್ಲಿ 15 ಮಕ್ಕಳನ್ನ ಕೂರಿಸುವರ ವಿರುದ್ಧ ಕ್ರಮ ಕೈಗೊಳ್ಳಲು ಟ್ರಾಫಿಕ್ ಇಲಾಖೆಗೆ ತಿಳಿಸಿದ್ದಾರೆ.
ಇನ್ನು ಇದರ ಬಗ್ಗೆ ನಗರ ಆಯುಕ್ತರು ಮಾತನಾಡಿ ರ‍್ಯಾಶ್ ಡ್ರೈವಿಂಗ್ ಮಾಡುವುದರ ಮೂಲಕ ಕೆಲವು ವಾಹನ ಸವಾರರು ಸುಪ್ರೀಂಕೋರ್ಟ್ ನಿಯಮ ಉಲ್ಲಂಘನೆ ಮಾಡ್ತಿದ್ದಾರೆ. ಹೀಗಾಗಿ ಟ್ರಾಫಿಕ್ ಆಯುಕ್ತರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾಗಿ ತಿಳಿಸಿದರು.