ಬೆಂಗಳೂರು: ಮದುವೆ ಊಟಕ್ಕೆ ಹೋದವರು ಸ್ಟೇಷನ್ಗೆ ದಿಢೀರ್ ಭೇಟಿ ನೀಡಿದ್ದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಪೊಲೀಸ್ ಸಿಬ್ಬಂದಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಅವರು, ಆ ಕಾರ್ಯಕಮದ ಬಳಿಕ ಅಲ್ಲೇ ಪಕ್ಕದಲ್ಲೇ ಇದ್ದ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿದ್ದರು.
ಈ ವೇಳೆ ಆ ಠಾಣೆಯಲ್ಲಿ ಸ್ವಚ್ಛತೆ ಇಲ್ಲದ್ದನ್ನು ಕಂಡ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಠಾಣೆಯಲ್ಲಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ. ನಿರ್ವಹಣೆಯನ್ನು ದುರುಪಯೋಗ ಪಡಿಸಿಕೊಂಡಿದ್ದಿರಾ, ಹಾಗೆಯೇ ಪ್ರಮುಖ ಪ್ರಕರಣಗಳ ಫೈಲ್ಗಳನ್ನ ತಿಪ್ಪೆಗುಂಡಿಯಲ್ಲಿ ಬಿಸಾಡಿದಂತೆ ಡಬ್ಬದಲ್ಲಿ ಬಿಸಾಕಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಸ್ಟೇಷನ್ಗೆ ಭೇಟಿ ಕೊಟ್ಟಾಗ ಠಾಣಾಧಿಕಾರಿ ಪಿಎಸ್ಐ, ಹೆಚ್ಸಿ ಯಾರೂ ಇರದ ಕಾರಣ ಮತ್ತಷ್ಟು ಸಿಡಿಮಿಡಿಗೊಂಡಿದ್ದಾರೆ. ಸ್ಟೇಷನ್ ಮುಂದಿರುವ ಗಲೀಜನ್ನ ನೋಡಿ ಅಲ್ಲಿನ ಸಿಬ್ಬಂದಿಯನ್ನ ಕರೆಸಿ ಇನ್ನು 15 ದಿನಗಳಲ್ಲಿ ಸ್ಟೇಷನ್ ಸ್ವಚ್ಛವಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೆ ಅಲ್ಲೆ ಇದ್ದ ವಾಕಿಟಾಕಿ ಮುಖಾಂತರ ನಗರದ ಎಲ್ಲಾ ಠಾಣೆಗಳಿಗೂ ಮಾಹಿತಿ ರವಾನೆ ಮಾಡಿ ಯಾವ ಕ್ಷಣದಲ್ಲಾದರೂ ಭೇಟಿ ಕೊಡ್ತಿನಿ ಠಾಣೆಗಳನ್ನು ಸ್ವಚ್ಛವಾಗಿ ಇಡದಿದ್ದಲ್ಲಿ ಅಮಾನತುಗೊಳಿಸೋದಾಗಿ ಖಡಕ್ ಸಂದೇಶ ರವಾನಿಸಿದ್ದಾರೆ.