ETV Bharat / state

5 ದಿನಗಳ ಸಿಐಟಿಯು ರಾಷ್ಟ್ರೀಯ ಸಮ್ಮೇಳನಕ್ಕೆ ತೆರೆ: ಬಿಜೆಪಿ ವಿರುದ್ಧ ಹೋರಾಟಕ್ಕೆ ಪಣ - ETV Bharat Kannada News

ಬೆಂಗಳೂರಿನಲ್ಲಿ ಐದು ದಿನಗಳ ಕಾಲ ನಡೆದ ಸಿಐಟಿಯು ರಾಷ್ಟ್ರೀಯ ಸಮ್ಮೇಳನಕ್ಕೆ ಭಾನುವಾರ ತೆರೆ ಬಿದ್ದಿದೆ.

General Secretary of CITU Comrade Tapan Sen
ಸಿಐಟಿಯುಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ತಪನ್ ಸೇನ್
author img

By

Published : Jan 23, 2023, 10:00 AM IST

ಬೆಂಗಳೂರು : ದೇಶದ ಪ್ರಮುಖ ಕಾರ್ಮಿಕ ಸಂಘಟನೆ ಸೆಂಟರ್ ಫಾರ್‌ ಇಂಡಿಯನ್ ಟ್ರೇಡ್‌ ಯೂನಿಯನ್‌ (ಸಿಐಟಿಯು)ನ 17ನೇ ಅಖಿಲ ಭಾರತ ಸಮ್ಮೇಳನ ಭಾನುವಾರ ನಗರದಲ್ಲಿ ಸಮಾಪನಗೊಂಡಿತು. ಅರಮನೆ ಮೈದಾನದಲ್ಲಿ ಐದು ದಿನಗಳವರೆಗೆ ಸಿಐಟಿಯು ಕಾರ್ಯಕರ್ತರ ಬೃಹತ್ ಶಕ್ತಿ ಪ್ರದರ್ಶನ ನಡೆದಿದ್ದು, ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಸಮಾರೋಪ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ತಪನ್ ಸೇನ್ ಪಾಲ್ಗೊಂಡಿದ್ದರು. "ರಾಷ್ಟ್ರದಲ್ಲಿ ಇಂದು ಉತ್ತಮ ವಾತಾವರಣ ಇಲ್ಲ. ಕೋಮುವಾದ, ಜಾತಿವಾದದ ಹೆಸರಿನಲ್ಲಿ ದೇಶ ಒಡೆಯುವ ಕಾರ್ಯ ನಡೆಯುತ್ತಿದೆ" ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

"ನಾವು ಇಂದು ಜನರಲ್ಲಿ ಐಕ್ಯತೆಯ ಭಾವನೆ ಮೂಡಿಸಲು ಶ್ರಮಿಸಬೇಕು. ಬಲಪಂಥೀಯ ಬಿಜೆಪಿ ಸರ್ಕಾರದ ವಿರುದ್ಧ ನಿಲ್ಲಬೇಕು. ಕಾರ್ಮಿಕರು ದೇಶದ ಯಾವುದೇ ಭಾಗದಲ್ಲಿ ಸಂಕಷ್ಟಕ್ಕೀಡಾಗಿದ್ದರೂ ಅವರ ಬೆಂಬಲಕ್ಕೆ ಮುಂದಾಗಬೇಕು. ಆಳುವ ಸರ್ಕಾರಗಳು ಬಂಡವಾಳಶಾಹಿಗಳ ಪರ ಮತ್ತು ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ. ಪ್ರಜಾಪ್ರಭುತ್ವದ ಮೇಲೆ ನಿರಂತರ ದಾಳಿಯಾಗುತ್ತಿದೆ. ದುಡಿಯುವ ಜನರಿಗೆ ಕೆಲಸದ ಸ್ಥಳದಲ್ಲಿ ಕಿರುಕುಳ, ಆರ್ಥಿಕ ಹೊಡೆತ ಸೇರಿದಂತೆ ಸಾಂಕ್ರಾಮಿಕ ರೋಗ ತಂದೊಡ್ಡಿದ ಬಿಕ್ಕಟ್ಟಿನಿಂದ ನಲುಗುತ್ತಿದ್ದಾರೆ" ಎಂದು ಕಾಮ್ರೆಡ್​ ತಪನ್​ ಸೇನ್ ಹೇಳಿದರು.

ಮುಂದುವರೆದು ಮಾತನಾಡಿ, "ಶ್ರೀಮಂತರು ಇನ್ನಷ್ಟು ಶ್ರೀಮಂತರಾದರೆ, ಬಡವರು ದಿನದಿಂದ ದಿನಕ್ಕೆ ಬಡವರಾಗುತ್ತಲೇ ಸಾಗಿದ್ದಾರೆ. ಶ್ರೀಮಂತರ ಪರ ಕೆಲಸ ನಿರ್ವಹಿಸುವ ಸರ್ಕಾರಗಳು ಕಾರ್ಮಿಕರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಭಾರತದಂತಹ ದೇಶದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರ ತನ್ನ ಸಾಧನೆಗಳ ಪ್ರಚಾರದ ಹೊರತಾಗಿ ಏನನ್ನೂ ಮಾಡಿಲ್ಲ" ಎಂದರು.

ಪ್ರಮುಖ ನಿರ್ಣಯಗಳು: ಬೆಂಗಳೂರಿನಲ್ಲಿ ನಡೆದ ಸಮ್ಮೇಳನವು ಆಧುನಿಕ ಕಾಲದ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿತು. ಕಾರ್ಮಿಕ-ರೈತ ಐಕ್ಯ ಪ್ರತಿಭಟನೆಗಳ ಯಶಸ್ಸಿನಿಂದ ಪಡೆದ ಪಾಠಗಳನ್ನು ಅಳವಡಿಸಿಕೊಂಡು, ಐಕ್ಯ ಹೋರಾಟವನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಸಮ್ಮೇಳನ ಚರ್ಚಿಸಿದೆ. ಮೋದಿ ಸರ್ಕಾರದ ನವ ಉದಾರವಾದಿ ನೀತಿಗಳ ವಿರುದ್ಧ ಐಕ್ಯ ಹೋರಾಟದ ಕ್ರಮದ ಬಗ್ಗೆಯೂ ಸಮ್ಮೇಳನ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಚೆಗುವೆರಾ ಮಗಳು, ಮೊಮ್ಮಗಳ ಆಗಮನ: ಜ.19ರಂದು ಗುರುವಾರ ಸಂಜೆ 4.30ಕ್ಕೆ ಸಿಐಟಿಯು ಸಮ್ಮೇಳನದಲ್ಲಿ ಕ್ಯೂಬಾ ಕ್ರಾಂತಿಕಾರಿ ಚೆಗುವೆರಾ ಮಗಳು ಡಾ.ಅಲಿಡಾ ಗೆವಾರ ಹಾಗೂ ಮೊಮ್ಮಗಳು ಎಫ್ತಿಪಾನಿಯಾ ಭಾಗಿಯಾಗಿದ್ದರು. ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮ್ಮೇಳನವು ಬುಧವಾರದಿಂದ ಜ.22ರ ಭಾನುವಾರದವರೆಗೆ ಒಟ್ಟು ಐದು ದಿನಗಳ ನಡೆದಿದ್ದು, ದೇಶಾದ್ಯಂತ 2,000 ಪ್ರತಿನಿಧಿಗಳು ಭಾಗವಹಿಸಿದ್ದರು.

ಅರಮನೆ ಮೈದಾನದಲ್ಲಿ ಬುಧವಾರ ಬೆಳಗ್ಗೆ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಕೆಜಿಎಫ್ ಹುತಾತ್ಮರ ಸ್ಮಾರಕದಿಂದ ತಂದ ಜ್ಯೋತಿಯನ್ನು ಸಮ್ಮೇಳನ ಮೈದಾನದಲ್ಲಿ ಬೆಳಗಿಸಲಾಯಿತು. ನಂತರ ರೆಡ್ ಆರ್ಮಿ ಸದಸ್ಯರಿಂದ ಗೌರವ ವಂದನೆ ಮತ್ತು ಪುಷ್ಪ ನಮನ ನಡೆಯಿತು.

ಇದನ್ನೂ ಓದಿ: ಪ್ರತಿಭಟನೆಗೆ ನೇತಾಜಿ ಜನ್ಮದಿನವನ್ನೇ ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದೆ: ರವಿಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.