ETV Bharat / state

ಸಿಲಿಕಾನ್ ಸಿಟಿ‌ಯಲ್ಲಿ ರಸ್ತೆ ಗುಂಡಿಗಳ ಪರಿಶೀಲನೆಗೆ ಇಳಿದ ನಾಗರೀಕರು: ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ - ಸಂಚಾರ ದಟ್ಟಣೆ ನಿರ್ವಹಣೆ

ತರಾತುರಿಯಲ್ಲಿ ರಸ್ತೆ ಗುಂಡಿಗಳನ್ನು ಅಸಮರ್ಪಕವಾಗಿ ಮುಚ್ಚಲಾಗುತ್ತಿದೆ. ಅದರಲ್ಲೂ ಮನಬಂದಂತೆ ಮಣ್ಣು, ಕಲ್ಲಿನ ಪುಡಿ ಸಿಂಪಡಣೆ ಮಾಡಿ ಹೋಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

citizens-inspect
ಸಿಲಿಕಾನ್ ಸಿಟಿ‌ಯಲ್ಲಿ ರಸ್ತೆ ಗುಂಡಿಗಳನ್ನು ಪರಿಶೀಲನೆಗೆ ಇಳಿದ ನಾಗರೀಕರು
author img

By

Published : Aug 30, 2022, 11:15 AM IST

ಬೆಂಗಳೂರು: ಸಿಲಿಕಾನ್ ಸಿಟಿ‌ಯಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೇ ಪರಿಶೀಲಿಸಿ ಕಳಪೆ ಕಾಮಗಾರಿ ಬಯಲು ಮಾಡುತ್ತಿದ್ದಾರೆ. ತರಾತುರಿಯಲ್ಲಿ ಅಸಮರ್ಪಕ ಕೆಲಸ ಮಾಡಲಾಗಿದೆ. ಅದರಲ್ಲೂ ಮನಬಂದಂತೆ ಮಣ್ಣು, ಕಲ್ಲಿನ ಪುಡಿ ಸಿಂಪಡಣೆ ಮಾಡಿ ಹೋಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಹುತೇಕ ಕಡೆ ಚರಂಡಿಗಳಿಗೆ ನೀರಿನ ಸರಾಗವಾಗಿ ಹರಿಯಲು ಇನ್‌ಲೆಟ್‌ ಪಾಯಿಂಟ್‌ಗಳಿಲ್ಲ, ಮನಬಂದಂತೆ ರಸ್ತೆ ಕಟಿಂಗ್‌ ಮಾಡಲಾಗಿದೆ. ಭಾರತೀಯ ರಸ್ತೆ ಕಾಂಗ್ರೆಸ್‌ ಮಾನದಂಡ(ಐಆರ್‌ಸಿ) ಅನುಸರಿಸಿಲ್ಲ. ಇಂತಹ ಕಳಪೆ ಕಾಮಗಾರಿಯಿಂದ ಅಪಘಾತಗಳು ಹೆಚ್ಚಾಗಲಿವೆ ಎಂದು ದೂರಿದ್ದಾರೆ. ರಸ್ತೆಯ ಗುಣಮಟ್ಟದ ಸಮಸ್ಯೆ ಇದೆ. ಬಹುತೇಕ ಕಡೆ ರಸ್ತೆ ಹಾಳಾಗಲು ಜಲಮಂಡಳಿ ಪೈಪ್‌ಗಳೇ ಕಾರಣ. ಬಿಬಿಎಂಪಿ ರಸ್ತೆಯ ಗುಣಮಟ್ಟ ಮಾನದಂಡಕ್ಕೆ ಅನುಗುಣವಾಗಿಲ್ಲ. ಡಾಂಬರಿನ ಗುಣಮಟ್ಟವೂ ನಿಗದಿತ ಪ್ರಮಾಣದಲ್ಲಿಲ್ಲ ಎಂದು ಹಲವು ನಾಗರಿಕರು ಕಿಡಿಕಾರಿದ್ದಾರೆ.

ಸಿಲಿಕಾನ್ ಸಿಟಿ‌ಯಲ್ಲಿ ರಸ್ತೆ ಗುಂಡಿಗಳ ಪರಿಶೀಲನೆಗೆ ಇಳಿದ ನಾಗರೀಕರು

ತಕ್ಷಣ ರಸ್ತೆ ಗುಂಡಿ ಮುಚ್ಚಿ, ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಿ : ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಜೊತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆ ನಡೆಯಿತು. ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ, ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ಸಲುವಾಗಿ ಪ್ರಮುಖ ಜಂಕ್ಷನ್ ಗಳಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಚರ್ಚಿಸಿ ಜರೂರು ಕ್ರಮಗಳನ್ನು ಕೈಗೊಂಡು ಸುಗಮ ಸಂಚಾರ ದಟ್ಟಣೆ ನಿವಾರಣೆ ಮಾಡಲು ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು:

  • ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರಸ್ತೆ ಗುಂಡಿಗಳನ್ನು ವೆಟ್ ಮಿಕ್ಸ್ ಜೊತೆಗೆ ಸಿಮೆಂಟ್​ ಮಿಶ್ರಣ ಮಾಡಿ ಗುಂಡಿಗಳನ್ನು ಮುಚ್ಚಬೇಕು.
  • ಪಾಲಿಕೆಯ ಬ್ಯಾಚ್ ಮಿಕ್ಸ್ ಪ್ಲಾಂಟ್ ಜೊತೆಗೆ ಇತರ ಖಾಸಗಿ ಬ್ಯಾಚ್ ಮಿಕ್ಸ್ ಪ್ಲಾಂಟ್ ಗಳಿಂದ ಡಾಂಬರು ಪಡೆದು ರಸ್ತೆ ಗುಂಡಿಗಳನ್ನು ಮುಚ್ಚಬೇಕು.
  • 110 ಹಳ್ಳಿಗಳ ರಸ್ತೆ ದುರಸ್ತಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದು.
  • ರಸ್ತೆಗಳ ಮೇಲೆ ಮಳೆ ನೀರು ನಿಲ್ಲದಂತೆ ಸೈಡ್ ಡ್ರೈನ್ ಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸುವುದು.

ಸಭೆಯಲ್ಲಿ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಫರ್ವೇಜ್, ಬಿಡಿಎ ಆಯುಕ್ತರಾದ ಕುಮಾರ್ ನಾಯ್ಕ್, ಜಲಮಂಡಳಿ ಅಧ್ಯಕ್ಷರಾದ ಜಯರಾಮ್, ಸಂಚಾರಿ ಪೋಲಿಸ್ ಜಂಟಿ ಆಯುಕ್ತರಾದ ರವಿಕಾಂತೆ ಗೌಡ ಹಾಗೂ ಪಾಲಿಕೆಯ ವಿಶೇಷ ಆಯುಕ್ತರುಗಳು, ರೈಲ್ವೆ, ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಗೌರಿ ಗಣೇಶ ಹಬ್ಬ ತಯಾರಿಗೆ ಬ್ರೆಕ್ ಹಾಕಿದ ವರುಣ: ಬೆಂಗಳೂರು ದಕ್ಷಿಣ ಭಾಗದ ಶಾಲೆಗಳಿಗೆ ರಜೆ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.