ಬೆಂಗಳೂರು : ಸರ್ಕಾರದ ಆದೇಶಕ್ಕೆ ಬೆಲೆ ಕೊಡದೆ ನಗರದ ಕ್ರೈಸ್ಟ್ ಕಾಲೇಜು ಆಡಳಿತ ಮಂಡಳಿ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿದೆ.

ಪ್ರಥಮ ಮತ್ತು ದ್ವಿತೀಯ ಪದವಿ ಪರೀಕ್ಷೆ ನಡೆಸಬಾರದು ಎಂದು ಸರ್ಕಾರದ ಸೂಚನೆ ನೀಡಿದೆ. ಆದರೆ, ಕ್ರೈಸ್ಟ್ ಕಾಲೇಜಿನಲ್ಲಿ ಪರೀಕ್ಷೆ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ಸರ್ಕಾರ ಸೂಚನೆ ನೀಡಿದೆ. ಆದರೆ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲು ಕ್ರೈಸ್ಟ್ ಕಾಲೇಜು ಮುಂದಾಗಿದೆ.

ಆಟಾನಮಸ್ ಯೂನಿವರ್ಸಿಟಿ ಆಗಿರುವ ಕ್ರೈಸ್ಟ್ ಕಾಲೇಜು ಆನ್ಲೈನ್ ಮುಖಾಂತರ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದೆ. ಅನೇಕ ವಿದ್ಯಾರ್ಥಿಗಳ ಬಳಿ ಲ್ಯಾಪ್ಟಾಪ್ ಹಾಗೂ ಪುಸ್ತಕಗಳಿಲ್ಲದೆ ಪರದಾಡುತ್ತಿದ್ದಾರೆ. ಅಲ್ಲದೆ ಪಿಜಿಗಳು ಕ್ಲೋಸ್ ಆಗಿರೋದರಿಂದ ತುಂಬಾ ವಿದ್ಯಾರ್ಥಿಗಳು ಅವರವರ ಊರು ಸೇರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕ್ರೈಸ್ಟ್ ಕಾಲೇಜ್ ಯುಜಿಸಿ ಗೈಡ್ಲೈನ್ಸ್ ಫಾಲೋ ಮಾಡದಿರುವ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.