ETV Bharat / state

ಸರ್ಕಾರಿ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಈ ಬಾರಿಯೂ ಇಲ್ಲ ಸೈಕಲ್ ಭಾಗ್ಯ - no cycles for students

ಸೈಕಲ್ ಭಾಗ್ಯ ಯೋಜನೆಯನ್ನು ಜಾರಿಗೆ ತರುವ ವಿಷಯದಲ್ಲಿ ಉತ್ಸಾಹ ವ್ಯಕ್ತಪಡಿಸಲಿಲ್ಲ. ಕಳೆದ ವರ್ಷವೂ ಸೈಕಲ್ ನೀಡಿಲ್ಲ, ಈ ವರ್ಷ ನೀಡದಿದ್ದರೆ ಮುಂದಿನ ವರ್ಷ ನೀಡಿದರಾಯಿತು ಎಂದು ವಿಷಯವನ್ನು ಸಚಿವ ಬಿ ಸಿ ನಾಗೇಶ್ ನಯವಾಗಿ ತಳ್ಳಿ ಹಾಕಿದರು.

minister bc nagesh
ಬಿ ಸಿ ನಾಗೇಶ್
author img

By

Published : Nov 15, 2022, 5:09 PM IST

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಂಟನೇ ತರಗತಿ ಓದುತ್ತಿರುವ ಮಕ್ಕಳಿಗೆ ಈ ಬಾರಿಯೂ ಸೈಕಲ್ ಹತ್ತುವ ಭಾಗ್ಯವಿಲ್ಲ. ಕಳೆದ ವರ್ಷ ಸೈಕಲ್ ಭಾಗ್ಯ ಯೋಜನೆಗೆ ಕಡಿವಾಣ ಹಾಕಿದ್ದ ಸರ್ಕಾರ, ಈ ಬಾರಿಯೂ ಸರ್ಕಾರಿ ಶಾಲೆಗಳಲ್ಲಿ ಎಂಟನೇ ತರಗತಿ ಓದುತ್ತಿರುವ ಮಕ್ಕಳಿಗೆ ಸೈಕಲ್ ನೀಡಲು ಉತ್ಸುಕತೆ ತೋರುತ್ತಿಲ್ಲ. ಮಕ್ಕಳಿಗೆ ಈ ಬಾರಿಯಲ್ಲದಿದ್ದರೆ ಮುಂದಿನ ಬಾರಿ ಸೈಕಲ್ ನೀಡಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಸ್ಪಷ್ಟ ಉತ್ತರ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಈಗ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಳ ಮಾಡಲು ಆದ್ಯತೆ ನೀಡಿದ್ದೇವೆ. ಸುಮಾರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಎಂಟು ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದ್ದು, ಇದರಿಂದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಕ್ಕಳ ಕಲಿಕೆಗೆ ಕೊರತೆಯಾಗಬಾರದು ಎಂಬ ಕಾರಣಕ್ಕಾಗಿ ಈ ವರ್ಷ 12 ಸಾವಿರ ಮಂದಿ ಶಿಕ್ಷಕರ ಹೈಸ್ಕೂಲ್​ಗೆ ನೇಮಕಾತಿ ಮಾಡಿಕೊಳ್ಳುತ್ತೇವೆ.

ಅತಿಥಿ ಶಿಕ್ಷಕರ ನೇಮಕಕ್ಕೆ ತೀರ್ಮಾನ: ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ನೇಮಕ ಮಾಡಿಕೊಳ್ಳದಷ್ಟು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಈ ವರ್ಷ 38 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದ ಸಚಿವರು, ನೇಮಕಗೊಂಡ ಶಿಕ್ಷಕರ ಪೈಕಿ ಪ್ರಾಥಮಿಕ ಶಾಲಾ ಶಿಕ್ಷಕರ ಗೌರವ ಧನದ ಪ್ರಮಾಣವನ್ನು ಎರಡೂವರೆ ಸಾವಿರ ರೂ.ಗಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಹೈಸ್ಕೂಲ್ ಶಿಕ್ಷಕರ ಗೌರವ ಧನದ ಪ್ರಮಾಣವನ್ನು 3 ಸಾವಿರ ರೂ. ಗಳಷ್ಟು ಹೆಚ್ಚಳ ಮಾಡಲಾಗುಗುವುದು ಎಂದರು.

ಹೀಗೆ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಳ ಮಾಡಲು ಏನು ಬೇಕೋ? ಅದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಸೈಕಲ್ ಭಾಗ್ಯ ಯೋಜನೆಯನ್ನು ಜಾರಿಗೆ ತರುವ ವಿಷಯದಲ್ಲಿ ಉತ್ಸಾಹ ವ್ಯಕ್ತಪಡಿಸಲಿಲ್ಲ. ಕಳೆದ ವರ್ಷವೂ ಸೈಕಲ್ ನೀಡಿಲ್ಲ. ಈ ವರ್ಷ ನೀಡದಿದ್ದರೆ ಮುಂದಿನ ವರ್ಷ ನೀಡಿದರಾಯಿತು ಎಂದು ವಿಷಯವನ್ನು ಬಿ ಸಿ ನಾಗೇಶ್ ನಯವಾಗಿ ತಳ್ಳಿ ಹಾಕಿದರು.

ಸರ್ಕಾರಿ ಆಸ್ತಿಗಳ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ: ಈ ಮಧ್ಯೆ ಸರ್ಕಾರಿ ಶಾಲೆಗಳ ಜಾಗದ ದಾಖಲೆಗಳನ್ನು ಕ್ರಮಬದ್ಧಗೊಳಿಸಲು ಆದ್ಯತೆ ನೀಡಲಾಗಿದೆ. ಸರ್ಕಾರಿ ಆಸ್ತಿಗಳ ವಿಷಯದಲ್ಲಿ ಈಗಲೇ ಎಚ್ಚರಿಕೆ ವಹಿಸುವುದು ಸೂಕ್ತ ಎಂಬುದು ನಮ್ಮ ಭಾವನೆ. ಹಿಂದೆ ಸರ್ಕಾರಿ ಶಾಲೆಗಳಿಗೆ ಹಲವಾರು ಮಂದಿ ಜಾಗವನ್ನು ದಾನ ನೀಡಿದ್ದರು. ಆದರೆ ಹೀಗೆ ಪಡೆಯಲಾದ ದಾನದ ಭೂಮಿಯ ವಿವರವನ್ನು ದಾಖಲೆಗಳಲ್ಲಿ ಸಂಗ್ರಹಿಸಿಡುವ ಕೆಲಸ ಪರಿಪೂರ್ಣವಾಗಿ ಆಗಿಲ್ಲ. ಹಿಂದೆ ದಾನ ನೀಡಿದವರ ಪೈಕಿ ಹಲವರ ಮಕ್ಕಳು, ಮೊಮ್ಮಕ್ಕಳು ಈಗ ಸದರಿ ಜಾಗವನ್ನು ಬಿಟ್ಟುಕೊಡಲು ಬಯಸುತ್ತಿಲ್ಲ. ಬೆಂಗಳೂರು, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಇಂತಹವರ ಪ್ರಮಾಣ ಜಾಸ್ತಿ ಎಂದು ಹೇಳಿದರು.

ಭೂಮಿಯ ಮೌಲ್ಯ ಹೆಚ್ಚಳವಾಗಿರುವುದು ಇಂತಹ ಮನಸ್ಥಿತಿಗಳಿಗೆ ಕಾರಣವಿರಬಹುದು. ಇದೇ ರೀತಿ ದಾನವಾಗಿ ಭೂಮಿ ನೀಡಿದವರ ಪೈಕಿ ಹಲವರ ಕುಟುಂಬದವರು ದಾನದ ಕಾರಣದಿಂದ ತಮ್ಮ ಉಳಿದ ಭೂಮಿಯ ಜತೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ ದಾನ ನೀಡಿದ ಜಾಗದಲ್ಲಿ ಇಂತಿಷ್ಟು ಪ್ರಮಾಣದ ಜಾಗವನ್ನು ಬಿಟ್ಟುಕೊಡಿ ಎಂದು ಹೇಳುತ್ತಿದ್ದಾರೆ. ಆದರೆ ದಾನವಾಗಿ ಪಡೆದ ಭೂಮಿಯನ್ನು ಬಿಟ್ಟು ಕೊಡುವುದು ಹೇಗೆ?. ಒಂದು ವೇಳೆ ಬಿಟ್ಟು ಕೊಡದೆ ಇದ್ದರೆ ದಾನಿಗಳ ವಿಷಯದಲ್ಲಿ ಮಾನವೀಯತೆಯಿಂದ ನಡೆದುಕೊಂಡಂತೆ ಆಗುವುದಿಲ್ಲ ಎಂಬುದು ಸರ್ಕಾರದ ಯೋಚನೆ ಎಂದರು.

ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಹಣ ಸಂಗ್ರಹಕ್ಕೆ ಸುತ್ತೋಲೆ.. ಅದಕ್ಕೂ ನಮಗೂ ಸಂಬಂಧವೇ ಇಲ್ಲ- ಸಚಿವ ನಾಗೇಶ್

ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಸಮಯ ಹತ್ತಿರವಾಗುತ್ತಿದ್ದು, ಇದಕ್ಕೆ ಪೂರಕವಾದ ಪಠ್ಯಕ್ರಮಕ್ಕೆ 25 ವಿಷಯಗಳನ್ನು ನಮೂದಿಸಿ ಕೇಂದ್ರ ಸರ್ಕಾರದ ವೆಬ್​ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ ರೀತಿ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ರಾಜ್ಯದ ಪಠ್ಯಕ್ರಮವನ್ನು ನಿರ್ಧರಿಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು.ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ ಈ ತಜ್ಞರು ನೀಡುವ ವರದಿಯನ್ನು ಆಧರಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಸಚಿವರು ಸ್ಪಷ್ಟ ಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.