ETV Bharat / state

ಬಾಲಕಿ ನಿಗೂಢ ಮರಣ... ಸಾವಿಗೆ ಪ್ರಚೋದನೆ ನೀಡಿತಾ ಟಿವಿಯ ದೃಶ್ಯ?! - ಪೊಲೀಸರು

ಬೆಂಗಳೂರಲ್ಲಿ ಬಾಲಕಿವೋರ್ವಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಸಾವನ್ನಪ್ಪಿದ್ದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈಕೆ ಟಿವಿ ನೋಡುತ್ತಿರುವಾಗಲೇ ಸಾವನ್ನಪ್ಪಿದ್ದು, ಟಿವಿಯ ಯಾವುದಾದರು ದೃಶ್ಯ ನೋಡಿ ಈ ರೀತಿ ಮಾಡಿಕೊಂಡಿದ್ದಾಳಾ? ಎನ್ನುವ ಶಂಕೆ ವ್ಯಕ್ತವಾಗಿದೆ.

ಬಾಲಕಿ ಅನುಮಾನಸ್ಪದ ಸಾವು
author img

By

Published : May 7, 2019, 11:57 AM IST

ಬೆಂಗಳೂರು: ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಬಾಗಲಗುಂಟೆ ಬಳಿಯ ಮಲ್ಲಸಂದ್ರದಲ್ಲಿ ಬೆಳಕಿಗೆ ಬಂದಿದೆ.

ಪೂಜಾ (11) ಸಾವಿಗೀಡಾಗಿರುವ ಬಾಲಕಿ. ಮಲ್ಲಸಂದ್ರದಲ್ಲಿ ಬಾಲಕಿ ತಂದೆ-ತಾಯಿ ಜೊತೆ ವಾಸವಿದ್ದು, ಪೋಷಕರು ಗೋಬಿ ಮಂಚೂರಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರತಿ ದಿನ ಸಂಜೆ 7 ರಿಂದ 9 ರವರೆಗೆ ಪೂಜಾಗೆ ಟಿವಿ ನೋಡುವ ಅಭ್ಯಾಸವಿತ್ತು. ಸೋಮವಾರ ಕೂಡ ಟಿವಿ ನೋಡಲೆಂದು ಅಪ್ಪ-ಅಮ್ಮನಿಗೆ ತಿಳಿಸಿ ಗೋಬಿ ಅಂಗಡಿಯಿಂದ ಮನೆಗೆ ಬಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

ಯಾರು ಇಲ್ಲದ ವೇಳೆ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮತ್ತೊಂದೆಡೆ ಟಿವಿ ನೋಡುತ್ತಾ ಬಾಲಕಿ ಸಾವನ್ನಪ್ಪಿದ್ದು, ಟಿವಿಯ ಯಾವುದಾದರು ದೃಶ್ಯ ನೋಡಿ ಈ ರೀತಿ ಮಾಡಿಕೊಂಡಿದ್ದಾಳಾ? ಎನ್ನುವ ಅನುಮಾನ ಕೂಡ ಕಾಡುತ್ತಿದೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Intro:ಟಿವಿಯ ದೃಶ್ಯ ನೋಡಿ ಸಾವನ್ನಪ್ಪಿದ್ಲ ಬಾಲಕಿ
ಸಾವಿನ ಸುತ್ತಾ ಅನುಮಾನದ ಹುತ್ತಾ.

ಭವ್ಯ

ಬೆಂಗಳೂರಿನಲ್ಲಿ ಬಾಲಕಿ ಅನುಮಾನಸ್ಪದ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.೧೧ ವರ್ಷದ ಪೂಜಾ ಸಾವಿಗೀಡಾದ
ಬಾಲಕಿ.

ಬಗಲಗುಂಟೆ ಬಳಿಯ ಮಲ್ಲಸಂದ್ರದಲ್ಲಿ ಬಾಲಕಿ ತಂದೆ ತಾಯಿ ತಮ್ಮ ಜೊತೆ ವಾಸವಿದ್ಲು. ಅಪ್ಪ ಅಮ್ಮ ಅಲ್ಲೇ ಗೋಬಿ ಮಂಚೂರಿ ಅಂಗಡಿ ಹಾಕೊಂಡು ತಮ್ಮ ಮಕ್ಕಳ ಜೀವನ ಸಾಗಿಸ್ತಿದ್ರು. ಆದ್ರೆ ಪ್ರತಿ ದಿನ ಸಂಜೆ 7ರಿಂದ 9ರವರೆಗೆ ಪೂಜಾಗೆ ಟಿವಿ ನೋಡುವ ಅಭ್ಯಾಸ ಇದ್ದು ನಿನ್ನೆ ಕೂಡ ಟಿವಿ ನೋಡಲೆಂದು ಅಪ್ಪ ಅಮ್ಮನಿಗೆ ಹೇಳಿ ಮನೆಗೆ ಬಂದು ಮನೆಯಲ್ಲಿ ತಂದೆ ತಾಯಿ ಇಲ್ಲದ ವೇಳೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

ಇನ್ನು ಯಾರು ಇಲ್ಲದ ವೇಳೆ ಸಾವನ್ನಪ್ಪಿದ್ದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ರೆ ಸ್ಥಳಕ್ಕೆ ಬಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದಾರೆ. ಮತ್ತೊಂದೆಡೆ ಟಿವಿ ನೋಡ್ತಾ ಬಾಲಾಕಿ ಸಾವನ್ನಪ್ಪಿರುವಂತದ್ದು ಟಿವಿಯ ಯಾವುದಾದ್ರು ದೃಶ್ಯ ನೋಡಿ ಈ ರೀತಿ ಮಾಡಿದ್ಲ ಅನ್ನೋ ಅನುಮಾನ ಕೂಡ ಇದೆ. ಹಾಗೆ ಸುತ್ತಾ ಮುತ್ತ ಜನರ ಬಗ್ಗೆ ಕೂಡ ವಿಚಾರಣೆ ನಡೆಸಿದ್ದಾರೆ. ಹಾಗೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆBody:KN_BNG_02-6-19-SUSIDE_BHAVYA_7204498Conclusion:KN_BNG_02-6-19-SUSIDE_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.