ETV Bharat / state

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇಡೀ ಸಮಾಜದ ಮೇಲೆ ನಡೆಯುವ ಅಪರಾಧ ಕೃತ್ಯ: ಹೈಕೋರ್ಟ್ - ಈಟಿವಿ ಭಾರತ ಕನ್ನಡ

ಮಕ್ಕಳ ಮೇಲಿನ ದೌರ್ಜನ್ಯ ಇಡೀ ಸಮಾಜದ ವಿರುದ್ಧದ ಕೃತ್ಯ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

child-sexual-abuse-is-a-crime-against-the-entire-society-says-high-court
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇಡೀ ಸಮಾಜದ ಮೇಲೆ ನಡೆಯುವ ಅಪರಾಧ ಕೃತ್ಯವಾಗಿದೆ : ಹೈಕೋರ್ಟ್
author img

By

Published : May 9, 2023, 9:20 PM IST

ಬೆಂಗಳೂರು : ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೇವಲ ಮಕ್ಕಳಿಗೆ ವಿರುದ್ಧ ಮಾತ್ರವಲ್ಲದೇ ಇಡೀ ಸಮಾಜದ ವಿರುದ್ಧದ ಕೃತ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 28 ವರ್ಷದ ವ್ಯಕ್ತಿಯೊಬ್ಬರನ್ನು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಪ್ರಕರಣದಲ್ಲಿ ನಿರಪರಾಧಿ ಎಂಬುದಾಗಿ ಪ್ರಕಟಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಿ ಹೈಕೋರ್ಟ್​ ಆದೇಶಿಸಿದೆ.

ಅಲ್ಲದೆ, ಆರೋಪಿ ಸಂತ್ರಸ್ತೆಯನ್ನು ವಿವಾಹವಾಗಿದ್ದು, ಅವರಿಗೆ ಒಂದು ಮಗು ಇದ್ದರೂ ಶಿಕ್ಷೆಯಿಂದ ವಿನಾಯತಿ ನೀಡಲು ಅರ್ಹರಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಆರೋಪಿಗೆ 7 ವರ್ಷ ಶಿಕ್ಷೆ ಮತ್ತು 50 ಸಾವಿರ ರೂ. ಗಳ ದಂಡ ವಿಧಿಸಿದೆ.

ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದವರನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್​ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಎಸ್ ಮುದಗಲ್ ಮತ್ತು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅಲ್ಲದೆ ಸಾಕ್ಷ್ಯಾಧಾರಗಳಿದ್ದರೂ, ವಿಚಾರಣಾ ನ್ಯಾಯಾಲಯವು ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಸಾಬೀತಾಗಿಲ್ಲ ಎಂದು ಅಭಿಪ್ರಾಯಪಟ್ಟಿರುವುದು ಪೋಕ್ಸೋ ಕಾಯ್ದೆಯ ಸೆಕ್ಷನ್ 4, 6, 29 ಮತ್ತು 30ರ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಪರಾಧಗಳಿಗೆ ಆರೋಪಿಗೆ ಶಿಕ್ಷೆ ವಿಧಿಸಿದ ಹೈಕೋರ್ಟ್, ಘಟನೆಯ ಸಮಯದಲ್ಲಿ ಸಂತ್ರಸ್ತೆಗೆ 14 ವರ್ಷ ವಯಸ್ಸಾಗಿತ್ತು. ಆರೋಪಿ 27 ವರ್ಷ ವಯಸ್ಸಿನವನಾಗಿದ್ದು, ಸಂತ್ರಸ್ತೆಯ ವಯಸ್ಸಿನ ದುಪ್ಪಟ್ಟು ಆಗಿತ್ತು. ಅಂತಹ ಸಂದರ್ಭಗಳಲ್ಲಿ, ಸಂತ್ರಸ್ತೆ ಅವನೊಂದಿಗೆ ಹೋಗಲು ಒಪ್ಪಿಕೊಂಡರೂ, ಅದು ಒಪ್ಪಿಗೆ ಲೈಂಗಿಕ ಕ್ರಿಯೆ ಎಂದು ಹೇಳಲಾಗದು. ಜತೆಗೆ, ಅಪ್ರಾಪ್ತರನ್ನು ರಕ್ಷಣೆ ಮಾಡುವುದು ಇಡೀ ಸಮಾಜದ ಕರ್ತವ್ಯವಾಗಿರಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ : ಅಕ್ರಮವಾಗಿ ಗನ್ ಸಿದ್ಧಪಡಿಸಿ ಮಾರಾಟ ಆರೋಪ : ಆರೋಪಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಪ್ರಕರಣದ ಹಿನ್ನೆಲೆ : ಮೈಸೂರಿನ ಹುಣಸೂರು ನಿವಾಸಿಯಾದ ಸಂತ್ರಸ್ತೆಯನ್ನು ಜೂನ್ 2013ರಲ್ಲಿ 27 ವರ್ಷ ವಯಸ್ಸಿನ ವ್ಯಕ್ತಿ(ಆರೋಪಿ)ಯೊಬ್ಬರು ಪ್ರೀತಿ ಮಾಡುವುದಾಗಿ ನಂಬಿಸಿ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲದೆ, ಮತ್ತೆ ಗ್ರಾಮಕ್ಕೆ ಕರೆ ತಂದು ಲೈಂಗಿಕ ಕ್ರಿಯೆ ನಡೆಸಿದ ಆರೋಪವಿತ್ತು. ಪ್ರಕರಣ ಸಂಬಂಧ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣಾ ನ್ಯಾಯಾಲಯ, ಸಂತ್ರಸ್ತೆ 16-17 ವರ್ಷ ವಯಸ್ಸಿನವಳು ಎಂಬುದಾಗಿ ತಿಳಿಸಲಾಗಿದೆ. ಆದರೆ, ಅಪಹರಣ ಮತ್ತು ಲೈಂಗಿಕ ದೌರ್ಜನ್ಯದ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿ ಆರೋಪಿಯನ್ನು ಖುಲಾಸೆ ಗೊಳಿಸಿತ್ತು.

ಇದನ್ನೂ ಓದಿ : ಅಪಘಾತದಲ್ಲಿ ಕಣ್ಣು ಕಳೆದುಕೊಂಡ ವ್ಯಕ್ತಿಗೆ ₹5 ಲಕ್ಷ ಪರಿಹಾರ ಒದಗಿಸಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.