ಬೆಂಗಳೂರು: ನಗರದ ಆಸ್ಪತ್ರೆಗಳ ಎಡವಟ್ಟಿಗೆ ತಾಯಿಯ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ರಾತ್ರಿ ಮೂರು ಗಂಟೆಯಿಂದ ಸುತ್ತಾಡಿ ಸುತ್ತಾಡಿ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಕೊನೆಗೆ ಕೆ.ಸಿ. ಜರಲ್ ಆಸ್ಪತ್ರೆಗೆ ಬರುತ್ತಿದ್ದಂತೆ ಆಟೋದಲ್ಲಿಯೇ ಹೆರಿಗೆಯಾಗಿ ಅಮ್ಮನ ಕಾಣುವ ಮುಂಚೆಯೇ ಮಗು ಸಾವನ್ನಪ್ಪಿದೆ.
ಶ್ರೀರಾಮಪುರದ ನಿವಾಸಿಯಾಗಿರುವ ಗರ್ಭಿಣಿ ವಿಕ್ಟೋರಿಯಾ, ವಾಣಿ ವಿಲಾಸ, ಶ್ರೀರಾಮಪುರ ಸರ್ಕಾರಿ ಆಸ್ಪತ್ರೆಗೆ ಸುತ್ತಾಡಿ ಹೆರಿಗೆ ನೋವು ಬಂದು 8 ಗಂಟೆಯಾದ್ರೂ ಬೆಡ್ ಸಿಕ್ಕಿರಲಿಲ್ಲ. ಕಡೆಗೆ ಕೆ.ಸಿ. ಜನರಲ್ ಆಸ್ಪತ್ರೆಗೆ ಬಂದು ಅರ್ಧ ಗಂಟೆ ಬಳಿಕ ಬೆಡ್ ನೀಡಲು ಮುಂದಾಗಿದ್ದಾರೆ. ಆದರೆ ಬೆಡ್ ನೀಡುವ ಮುಂಚೆಯೇ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದು, ಮಗು ಸಾವನ್ನಪ್ಪಿದೆ. ಸದ್ಯ ಗರ್ಭಿಣಿ ಕುಟುಂಬಸ್ಥರು ಮಲ್ಲೇಶ್ವರಂ ಠಾಣೆಯಲ್ಲಿ ಎನ್ಸಿಆರ್ ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.