ETV Bharat / state

ಮಕ್ಕಳನ್ನು ಸುಪರ್ದಿಗೆ ಪಡೆಯುವ ವ್ಯಾಜ್ಯಗಳಿಗೆ ಕೌಟುಂಬಿಕ ನ್ಯಾಯಾಲಯಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು: ಹೈಕೋರ್ಟ್​ - ನ್ಯಾಯಮೂರ್ತಿ ಎಚ್ ಪಿ ಸಂದೇಶ್

ಮಕ್ಕಳ ಪೋಷಕತ್ವ ಹಾಗೂ ಸುಪರ್ದಿ ವ್ಯಾಜ್ಯಗಳನ್ನು ಕೌಟುಂಬಿಕ ನ್ಯಾಯಾಲಯಗಳು ಮಾತ್ರ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್​ ತಿಳಿಸಿದೆ.

ಹೈಕೋರ್ಟ್​
ಹೈಕೋರ್ಟ್​
author img

By

Published : Jun 6, 2023, 7:46 AM IST

ಬೆಂಗಳೂರು: ಮಕ್ಕಳ ಪೋಷಕತ್ವ ಹಾಗೂ ಸುಪರ್ದಿ ವ್ಯಾಜ್ಯಗಳನ್ನು ಕೌಟುಂಬಿಕ ನ್ಯಾಯಾಲಯಗಳಲ್ಲಿ ಮಾತ್ರ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಕ್ಕಳ ಸುಪರ್ದಿಗೆ ಸಂಬಂಧಿಸಿದ ವ್ಯಾಜ್ಯದ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕ ಸದಸ್ಯಪೀಠ, ಮಕ್ಕಳ ಸುಪರ್ದಿಗೆ ಕೋರಿ ಜಿಲ್ಲಾ ನ್ಯಾಯಾಲಯ ಸೇರಿದಂತೆ ಇತರ ಅಧೀನ ಸಿವಿಲ್ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಈ ರೀತಿಯ ಪ್ರಕರಣಗಳನ್ನು ಕೌಟುಂಬಿಕ ನ್ಯಾಯಾಲಯಗಳು ಮಾತ್ರ ವಿಚಾರಣೆ ನಡೆಸಬೇಕು ಎಂದು ಪೀಠ ತಿಳಿಸಿದೆ.

ಕೌಟುಂಬಿಕ ನ್ಯಾಯಾಲಯ ಕಾಯಿದೆ ಸೆಕ್ಷನ್ 8 ರಲ್ಲಿ ಆಯಾ ಪ್ರದೇಶದಲ್ಲಿ ಪ್ರತ್ಯೇಕವಾಗಿ ಕೌಟುಂಬಿಕ ವ್ಯಾಜ್ಯಗಳ ವಿಚಾರಣೆಗೆ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗಿರುತ್ತದೆ. ಆ ಕೋರ್ಟ್‌ಗಳಿರುವ ವ್ಯಾಪ್ತಿ ಜಿಲ್ಲಾ ನ್ಯಾಯಾಲಯ ಸೇರಿದಂತೆ ಇತರ ಯಾವುದೇ ಅಧೀನ ನ್ಯಾಯಾಲಯಗಳಿಗೆ ಅಧಿಕಾರ ಇರುವುದಿಲ್ಲ ಎಂದು ಪೀಠ ತಿಳಿಸಿದೆ.

ಅಪ್ರಾಪ್ತ ಮಗುವಿನ ಸುರ್ಪದಿಗೆ ಮತ್ತು ಅದರ ಪೋಷಕತ್ವಕ್ಕೆ ಸೇರಿದಂತೆ ದಂಪತಿ ನಡುವೆ ವ್ಯಾಜ್ಯವಿದೆ. ಫ್ಯಾಮಿಲಿ ಕೋರ್ಟ್ ಕಾಯಿದೆಯಲ್ಲಿ ನ್ಯಾಯಾಲಯಗಳ ವ್ಯಾಪ್ತಿ ಅತ್ಯಂತ ಸ್ಪಷ್ಟವಾಗಿರುವುದರಿಂದ ಕೌಟುಂಬಿಕ ನ್ಯಾಯಾಲಯಗಳು ಮಾತ್ರ ಅಂತಹ ವಿಚಾರಗಳ ಕುರಿತು ನಿರ್ಧರಿಸುವ ಅಧಿಕಾರಿ ಹೊಂದಿದೆಯೇ ಹೊರತು ಇತರ ನ್ಯಾಯಾಲಯಗಳಿಗಲ್ಲ ಎಂದು ಆದೇಶಲ್ಲಿ ಉಲ್ಲೇಖಿಸಿದೆ.

ಸಿಆರ್‌ಪಿಸಿ ನಿಯಮ 11 ರಡಿ ಅಪ್ರಾಪ್ತ ಮಗುವನ್ನು ವಶಕ್ಕೆ ನೀಡಲು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಸೀಮ್ ಬಾನು ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದೆ. ಅಪ್ತಾಪ್ತ ಮಕ್ಕಳು ಪತಿಯ ಜೊತೆ ಇದ್ದು, ಅವರು ಅರೆಹಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಗಾಗಿ ಪೋಷಕತ್ವದ ಕುರಿತ ಅರ್ಜಿಯನ್ನು ಫ್ಯಾಮಿಲಿ ಕೋರ್ಟ್ ವಿಚಾರಣೆ ನಡೆಸಿ ಆದೇಶ ನೀಡಬಹುದು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಆದರೆ ಪ್ರತಿವಾದಿ ಪತಿ, ಪೋಷಕತ್ವ ಮತ್ತು ಮಕ್ಕಳ ಕಾಯಿದೆ ಸೆಕ್ಷನ್ 9 ರಡಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಹಾಗಾಗಿ ಆ ಬಗ್ಗೆ ವಿಚಾರಣೆ ನಡೆಸುವ ಅಧಿಕಾರ ಜಿಲ್ಲಾ ನ್ಯಾಯಾಲಯಕ್ಕೆ ಮಾತ್ರವೇ ಇದೆ ಎಂದು ಪ್ರತಿಪಾದಿಸಿದ್ದರು. ಇದೀಗ ಹೈಕೋರ್ಟ್ ಮಕ್ಕಳ ಪೋಷಣೆ ಮತ್ತು ಸುಪರ್ದಿಗೆ ನೀಡುವ ಅಧಿಕಾರ ಕೇವಲ ಕೌಟುಂಬಿಕ ನ್ಯಾಯಾಲಯಕ್ಕೆ ಮಾತ್ರ ಇರಲಿದೆ ಎಂದು ಅಭಿಪ್ರಾಯ ಪಟ್ಟು ಆದೇಶ ನೀಡಿದೆ.

ಮಕ್ಕಳ ಸುಪರ್ದಿ ಪ್ರಕರಣದಲ್ಲಿ ಸೋಲುವ ಪೋಷಕರ ಮಗುವಿನ ಭೇಟಿಗೆ ಅವಕಾಶ ಕಲ್ಪಿಸಿ: ಮಕ್ಕಳ ಸುಪರ್ದಿ ಹಂಚಿಕೆ ವಿಚಾರದಲ್ಲಿ ಹೈಕೋರ್ಟ್​ ಕಳೆದ ತಿಂಗಳು ಮೇಯಲ್ಲಿ ಸೋಲುವ ಪೋಷಕರ ಪರವಾಗಿ ಅಭಿಪ್ರಾಯಪಟ್ಟಿತು. ದಂಪತಿಯ ನಡುವಿನ ಮಕ್ಕಳ ಸುಪರ್ದಿಗೆ ವಹಿಸುವ ಪ್ರಕರಣಗಳಲ್ಲಿ ಸೋಲುವ ಪೋಷಕರಿಗೆ ಮಗುವಿನ ಭೇಟಿಗೆ ಸಾಕಷ್ಟು ಅವಕಾಶವನ್ನಾದರೂ ಕಲ್ಪಿಸಬೇಕು. ಮಗುವಿನ ಪೋಷಕತ್ವಕ್ಕೂ ಮಗುವಿನ ಕಸ್ಟಡಿಗೂ ವ್ಯತ್ಯಾಸವಿದೆ.

ಮಕ್ಕಳ ಕಸ್ಟಡಿ ಪ್ರಕರಣಗಳಲ್ಲಿ ಸೋಲುವ ಪೋಷಕರಿಗೆ ಸಾಕಷ್ಟು ಭೇಟಿಯ ಹಕ್ಕು ನೀಡಬೇಕಾಗುತ್ತದೆ. ಆ ಮೂಲಕ ಮಗು ತಂದೆಯ ಜೊತೆ ಸಾಮಾಜಿಕ, ಭೌತಿಕ ಸಂಪರ್ಕ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿತ್ತು. ಜೊತೆಗೆ ತಂದೆಯೂ ಸಹ ರಜೆ ಪಡೆದು ಪೂರ್ಣ ಸಮಯವನ್ನು ಮಗುವಿನ ಜೊತೆ ಕಾಲ ಕಳೆಯಬೇಕಾಗುತ್ತದೆ. ಆ ಅವಧಿಯಲ್ಲಿ ಮಗುವಿನ ಅಜ್ಜಿ ಸಹ ಜೊತೆಯಲ್ಲಿರಬಹುದು ಎಂದು ತಿಳಿಸಿತ್ತು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ: ಐಎಎಸ್ ಅಧಿಕಾರಿ ಪತ್ನಿ ವಿರುದ್ಧದ ಇಡಿ ಸಮನ್ಸ್ ರದ್ದು ಪಡಿಸಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.