ಬೆಂಗಳೂರು : ಕೋವಿಡ್-19 ವೈರಸ್ ಮೊದಮೊದಲು ಕಾಣಿಸಿಕೊಂಡಾಗ ರೋಗ ನಿರೋಧಕ ಶಕ್ತಿ ಕಡಿಮೆ ಇರೋರಿಗೆ, ಹಿರಿಯ ನಾಗರಿಕರಿಗೆ ಹೆಚ್ಚು ಎಫೆಕ್ಟ್ ಅಂತ ಹೇಳಲಾಗ್ತಿತ್ತು.
ಆದರೆ, ಈ ಎಲ್ಲ ನಂಬಿಕೆಗಳನ್ನ ಬುಡಮೇಲು ಮಾಡಿ, ಕೊರೊನಾ ಕೇರ್ ಲೇಸ್ ಮಾಡಿದರೆ ಕ್ಯಾರೇ ಅನ್ನದೇ ಎಲ್ಲರಿಗೂ ಅಟ್ಯಾಕ್ ಮಾಡುತ್ತೆ ಅಂತ ಪ್ರೂವ್ ಆಯ್ತು. ಸದ್ಯ ಕೊರೊನಾ ಮೊದಲ ಅಲೆಯ ಒತ್ತಡದಿಂದ ಹೊರ ಬಾರದ ಜನರಿಗೆ 2ನೇ ಅಲೆ ಪೆಟ್ಟು ಕೊಟ್ಟಿದೆ.
ಯಾವುದೇ ವಯಸ್ಸಿನ ಅಂತರವಿಲ್ಲದೇ ಎಲ್ಲ ವಯೋಮಾನದವರನ್ನ ಕೊರೊನಾ ಕಾಡಿದೆ. ಎಳೆ ಮಕ್ಕಳನ್ನ ಕೊರೊನಾದಿಂದ ಕಾಪಾಡುವ ಸಲುವಾಗಿಯೇ ಶಾಲಾ-ಕಾಲೇಜಿಗೆ ರಜೆಯನ್ನ ಸರ್ಕಾರ ಘೋಷಿಸಿದೆ. ಈ ನಡುವೆಯು ಕೊರೊನಾ ಸೋಂಕು ಮಕ್ಕಳನ್ನ ಬಿಟ್ಟಿಲ್ಲ. ಇದಕ್ಕೆ ಕಾರಣ ಹೊರಗೆ ಓಡಾಡುವ ಹಿರಿಯರು ಕೋವಿಡ್ ನಿಯಮ ಪಾಲಿಸದೇ ಇರುವುದು. ಮೊದಲ ಅಲೆಯ ಸಂದರ್ಭದಲ್ಲಿ ಹೊರಗಿನಿಂದ ಬಂದರೆ ಸ್ಯಾನಿಟೈಸ್ ಆಗ್ತಿದ್ದರು. ಆದರೆ, ಇದೀಗ ಅದನ್ನ ಮರೆತಿರುವುದೇ ಕೊರೊನಾ ಹರಡಲು ದಾರಿಯಾಗುತ್ತಿದೆ.
ಯಾವ್ಯಾವ ವಯಸ್ಸಿನ ಮಕ್ಕಳಿಗೆ ಕೊರೊನಾ ಬಾಧಿಸಿದೆ?
ಮಕ್ಕಳ ವರ್ಷ | ಸೋಂಕಿತರ ಸಂಖ್ಯೆ | ಸಾವು |
0-9 ವರ್ಷ | 67,687 | 43 |
10-19 ವರ್ಷ | 1,70,595 | 62 |
ಇನ್ನು, ಇಲ್ಲಿ ತನಕ 0-9 ವರ್ಷದ 67,687 ಮಕ್ಕಳಿಗೆ ಸೋಂಕು ತಗುಲಿದ್ದು, 43 ಮಕ್ಕಳು ಸಾವನ್ನಪ್ಪಿಸಿದ್ದಾರೆ. 10-19 ವರ್ಷದ 1,70,595 ಮಕ್ಕಳಿಗೆ ಸೋಂಕು ಬಾಧಿಸಿದ್ದು, 62 ಮಕ್ಕಳು ಬಲಿಯಾಗಿದ್ದಾರೆ.
ರಾಜಧಾನಿಯಲ್ಲಿ ನೂರಾರು ಮಕ್ಕಳಿಗೆ ಕೊರೊನಾ ಸೋಂಕು
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ತೀವ್ರ ಸ್ವರೂಪದಲ್ಲಿದ್ದು, ಕಳೆದ 24 ಗಂಟೆಯಲ್ಲಿ ನೂರಾರು ಮಕ್ಕಳಿಗೆ ಸೋಂಕು ತಗುಲಿದೆ. 9 ವರ್ಷದೊಳಗಿನ 137 ಹೆಣ್ಣು ಮಕ್ಕಳು, 181 ಗಂಡು ಮಕ್ಕಳು ಹಾಗೂ 10-19 ವರ್ಷದೊಳಗಿನ 339 ಬಾಲಕಿರು 312ಬಾಲಕರಿಗೆ ಸೋಂಕು ತಗುಲಿದೆ.
ಆದರೆ, ಸಮಾಧಾನಕರ ಸಂಗತಿ ಅಂದರೆ ಬಹುಬೇಗ ಚೇತರಿಕೆ ಕಾಣುತ್ತಿರುವುದನ್ನ ಗಮನಿಸಬಹುದಾಗಿದೆ. ನಿನ್ನೆ ಒಂದೇ ದಿನ ಒಂಬತ್ತು ವರ್ಷದೊಳಗಿನ 943 ಮಕ್ಕಳು ಗುಣಮುಖರಾಗಿದ್ದರೆ, ಇತ್ತ 10-19ವರ್ಷದೊಳಗಿನ 1,855 ಮಕ್ಕಳು ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ.
ಓದಿ: ಕೋವಿಡ್ ವಿಚಾರದಲ್ಲಿ ಸಿದ್ಧರಾಮಯ್ಯ, ಡಿಕೆಶಿ ರಾಜಕಾರಣ ಬಿಡಬೇಕು: ಜಗದೀಶ್ ಶೆಟ್ಟರ್