ETV Bharat / state

ರಕ್ಷಣೆ ನೀಡಲು ಲಂಚ ಪಡೆದ ಪ್ರಕರಣ: ಆರ್​ಐ, ಕಾನ್​​ಸ್ಟೇಬಲ್ ಬಂಧನ, ಇನ್​​​​​​ಸ್ಪೆಕ್ಟರ್​​​ ನಾಪತ್ತೆ - ಭ್ರಷ್ಟಾಚಾರ ನಡೆಸಿದ ಪೊಲೀಸರು

ಪೊಲೀಸ್ ರಕ್ಷಣೆ ನೀಡಲು ಜಮೀನು ಖರೀದಿದಾರರೊಬ್ಬರಿಂದ ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇನ್​​ಸ್ಪೆಕ್ಟರ್​ ನಾಪತ್ತೆಯಾಗಿದ್ದಾರೆ.

Inspector missing
ಇನ್ಸ್​ಪೆಕ್ಟರ್ ಯಶವಂತ್
author img

By

Published : Jan 11, 2021, 8:14 PM IST

ಯಲಹಂಕ: ಜಮೀನು ಖರೀದಿದಾರರೊಬ್ಬರಿಗೆ ಪೊಲೀಸ್ ರಕ್ಷಣೆ ನೀಡಲು ಲಂಚ ಪಡೆದಿದ್ದ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಕಂದಾಯ ನಿರೀಕ್ಷಕ, ಚಿಕ್ಕಜಾಲ ಪೊಲೀಸ್ ಠಾಣೆಯ ಕಾನ್​​​ಸ್ಟೇಬಲ್​ವೊಬ್ಬರನ್ನು ಬಂಧಿಸಿದ್ದು, ಇನ್​​​​​​ಸ್ಪೆಕ್ಟರ್​​ ಪರಾರಿಯಾಗಿದ್ದಾರೆ.

ಆರ್​​ಐ ಪುಟ್ಟ ಹನುಮಯ್ಯ, ಕಾನ್​​ಸ್ಟೇಬಲ್​​​​ ರಾಜು ಬಂಧಿತರು. ಯಶವಂತ್ ಮೂರು ದಿನಗಳಿಂದ ನಾಪತ್ತೆಯಾದ ಇನ್​​ಸ್ಪೆಕ್ಟರ್. ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯಲ್ಲಿ ವ್ಯಕ್ತಿಯೊಬ್ಬರು 2018ರಲ್ಲಿ 5 ಎಕರೆ ಜಮೀನು ಖರೀದಿಸಿದ್ದರು. ಆದರೆ, ಅದೇ ಜಮೀನನ್ನು ಮೂಲ ಮಾಲೀಕರು ಬೇರೆಯವರಿಗೆ ಮಾರಲು ಮುಂದಾಗಿದ್ದರು. ಈ ಕುರಿತು ಜಮೀನು ಖರೀದಿದಾರರು ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.

ಇದನ್ನೂ ಓದಿ: ಪರಿಷತ್ ಗಲಾಟೆ ವಿಚಾರದಲ್ಲಿ ನಾವು ಯಾವುದೇ ತಂತ್ರಗಾರಿಕೆ ಮಾಡಿಲ್ಲ : ಸಚಿವ ಮಾಧುಸ್ವಾಮಿ

ಕೋರ್ಟ್‌ ತಡೆಯಾಜ್ಞೆ ನೀಡಿರುವ ಕುರಿತು ಜಮೀನಿನಲ್ಲಿ ಫಲಕ ಅಳವಡಿಸಬೇಕು. ಮೂಲ ಜಮೀನು ಮಾಲೀಕರಿಂದ ತನಗೆ ರಕ್ಷಣೆ ನೀಡಬೇಕು ಎಂದು ಇನ್​​​​​​ಸ್ಪೆಕ್ಟರ್‌ ಯಶವಂತ್​​ಗೆ ಕೋರಿದಾಗ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಪುಟ್ಟ ಹನುಮಯ್ಯ ಕೂಡ ಮ್ಯುಟೇಷನ್‌ ಬದಲಾಯಿಸಿ ಕೊಡುವುದಕ್ಕೆ ಮತ್ತು ಜಮೀನಿನಲ್ಲಿ ಕೋರ್ಟ್‌ ತಡೆಯಾಜ್ಞೆ ಫಲಕ ಹಾಕುವುದಕ್ಕೆ ₹50 ಲಕ್ಷ ಲಂಚ ನೀಡುವಂತೆ ಹೇಳಿದ್ದರು.

ಈ ಕುರಿತು ಜಮೀನು ಖರೀದಿದಾರರು ಎಸಿಬಿ ಮೊರೆ ಹೋಗಿದ್ದರು. ಶುಕ್ರವಾರ (ಜನವರಿ 8ರಂದು) ಹನುಮಯ್ಯಗೆ ಮೊದಲ ಕಂತಿನ ₹6 ಲಕ್ಷ ಹಣ ನೀಡುವಾಗ ಮತ್ತು ಇನ್​​​​​​ಸ್ಪೆಕ್ಟರ್‌ ಪರವಾಗಿ ₹5 ಲಕ್ಷ ಪಡೆಯುತ್ತಿದ್ದ ರಾಜುಗೆ ಸಿಸಿಬಿ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ಈ ಇಬ್ಬರ ಬಂಧನದ ನಂತರ ಕಾಲ್ಕಿತ್ತಿರುವ ಯಶವಂತ್ ಮೂರು ದಿನಗಳಾದರೂ ಠಾಣೆಯತ್ತ ಮುಖಮಾಡಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೆ ನಾಲ್ಕು ದಿನಗಳಿಂದ ಕೆಲಸಕ್ಕೆ ಗೈರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.