ETV Bharat / state

ಅರಣ್ಯ ಸಂಪತ್ತು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯ ಮೆಚ್ಚಲೇಬೇಕು: ಸಿಎಂ ಬಿಎಸ್​ವೈ

author img

By

Published : Nov 23, 2020, 5:33 PM IST

ಅರಣ್ಯ ರಕ್ಷಣೆ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗಣನೀಯ ಸೇವೆ ಸಲ್ಲಿಸಿದ ಅರಣ್ಯ ಸಿಬ್ಬಂದಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಲಾಯಿತು..

CM Medal Distribution for Forest Department Staff
ಅರಣ್ಯ ಸಿಬ್ಬಂದಿಗೆ ಮುಖ್ಯಮಂತ್ರಿ ಪದವಿ ಪ್ರಧಾನ ಸಮಾರಂಭ ನಡೆಯಿತು

ಬೆಂಗಳೂರು : ಎಲ್ಲಾ ಒತ್ತಡಗಳನ್ನು ಮೀರಿ ಅರಣ್ಯ ಸಂಪತ್ತು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಯ ಕಾರ್ಯ ಮೆಚ್ಚಲೇಬೇಕು. ಈ ಸಿಬ್ಬಂದಿಯ ಕರ್ತವ್ಯದಿಂದ ಅರಣ್ಯ ಸಂಪತ್ತು ರಕ್ಷಣೆಯಲ್ಲಿದೆ ಎಂದು ಸಿಎಂ ಬಿ.ಎಸ್​ ಯಡಿಯೂರಪ್ಪ ಹೇಳಿದರು.

ವಿಧಾನಸೌಧದಲ್ಲಿ ಆಯೋಜಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ-ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪದಕ ಪಡೆಯದವರೂ ಅರಣ್ಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ಮುಂದೆ ಪದಕ ಪಡೆಯುವಂತಾಗಬೇಕು.

ಜೈವಿಕ ಸಂಪತ್ತನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಕರ್ನಾಟಕ ರಾಜ್ಯ ಅರಣ್ಯ ಮತ್ತು ಜೀವ ಸಂಪತ್ತನ್ನು ಉಳಿಸುವಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದರು.

ಅರಣ್ಯ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಪ್ರದಾನ ಸಮಾರಂಭ..

ವನ್ಯ ಜೀವಿ ಸಂಪತ್ತಿನಲ್ಲಿ ಕೂಡ ನಾವು ಅಗ್ರಸ್ಥಾನದಲ್ಲಿದ್ದೇವೆ. ಹುಲಿ ಮತ್ತು ಆನೆಗಳ ಸಂಖ್ಯೆಯಲ್ಲಿ ದೇಶದಲ್ಲಿ ಎಂಟನೇ ಸ್ಥಾನದಲ್ಲಿ ಇದ್ದೇವೆ. ಪಶ್ಚಿಮ ಘಟ್ಟಗಳ ಬಹುಭಾಗ ನಮ್ಮ ರಾಜ್ಯದಲ್ಲಿದೆ. ಎಲ್ಲಾ ಒತ್ತಡ ಮೀರಿ ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆ ಶ್ರಮ ವಹಿಸುತ್ತಿದೆ.

ಇವರ ಪರಿಶ್ರಮದಿಂದ ಕರ್ನಾಟಕಕ್ಕೆ ಉತ್ತಮ ಹೆಸರಿದೆ. ಪದಕ ಪಡೆದವರು ಮುಂದಿನ ದಿನಗಳಲ್ಲಿ ಹೆಚ್ಚು ಅರಣ್ಯ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

ಪೊಲೀಸ್ ಇಲಾಖೆಗೆ ಸಿಗುವ ಸೌಲಭ್ಯ ನೀಡಿ : ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಪೊಲೀಸ್ ಇಲಾಖೆಗೆ ಸಿಗುವ ಸೌಲಭ್ಯ ನೀಡುವಂತೆ ಸಿಎಂಗೆ ಅರಣ್ಯ ಸಚಿವ ಆನಂದ್ ಸಿಂಗ್ ಮನವಿ ಮಾಡಿದರು.

ಪೊಲೀಸ್ ಇಲಾಖೆಗೆ ಹೋಲಿಸಿದರೆ ಅರಣ್ಯ ಇಲಾಖೆಗೆ ಸೌಲಭ್ಯಗಳು ಕಡಿಮೆ ಇದೆ. ಮುಂದಿನ ದಿನಗಳಲ್ಲಿ ತಾರತಮ್ಯ ಸರಿಪಡಿಸಲು ಕ್ರಮ ವಹಿಸಲಾಗುವುದು. ಈ ಇಲಾಖೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪೊಲೀಸ್​ ಇಲಾಖೆಯ ಸೌಲಭ್ಯ ಕೊಡಬೇಕು ಎಂದು ಮುಖ್ಯಮಂತ್ರಿ ಗಳಲ್ಲಿ ವಿನಂತಿ ಮಾಡುತ್ತೇನೆ.

ಅರಣ್ಯ ರಕ್ಷಣೆ ಸಂಧರ್ಭದಲ್ಲಿ ಅನೇಕ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಸುಮಾರು ವರ್ಷಗಳಿಂದ ಈ ಕಾರ್ಯಕ್ರಮ ನೆನೆಗುದಿಗೆ ಬಿದ್ದಿತ್ತು. ಈಗ ಯಡಿಯೂರಪ್ಪ ಅವರಿಂದ ಈ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ ಆನಂದ್​ ಸಿಂಗ್​ ಹೇಳಿದರು.

ಅನೇಕ ರಾಜ್ಯಗಳು ನಮ್ಮ ಕರ್ನಾಟಕ ರಾಜ್ಯದ ಅರಣ್ಯ ಇಲಾಖೆ ಕೆಲಸವನ್ನು ಮಾದರಿ ಮಾಡಿಕೊಂಡಿವೆ. ಅರಣ್ಯ ಇಲಾಖೆ ಮೇಲೆ ಕೆಲವು ಆರೋಪಗಳೂ ಇವೆ. ಬಹಳ ಒತ್ತಡದಲ್ಲಿ ಸಿಬ್ಬಂದಿ ಕೆಲಸವನ್ನು ಮಾಡುತ್ತಾರೆ. ಅದೆಲ್ಲವನ್ನೂ ನಿಭಾಯಿಸಿಕೊಂಡು ಕೆಲಸ ಮಾಡಬೇಕಿದೆ. ಅರಣ್ಯ ಮತ್ತು ಪರಿಸರ ಮನುಷ್ಯನ ಜೀವನಾಡಿ. ಲಾಕ್ ಡೌನ್ ಸಂಧರ್ಭದಲ್ಲಿ ಕೂಡಾ ವೇತನ ಕಡಿತ ಮಾಡದೇ ಇರುವುದು ಮೆಚ್ಚುವ ನಿರ್ಧಾರ ಎಂದರು‌.

ಅಧಿಕಾರಿಗಳಿಗೆ ಪ್ರಶಸ್ತಿ ಪ್ರಧಾನ : ಒಟ್ಟು 75 ಮಂದಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಗೌರವ ಪ್ರಶಸ್ತಿ ಪ್ರಧಾನ ಮಾಡಲಾಯಿತು. 2017- 18 ಹಾಗೂ 2019 ನೇ ಸಾಲಿನಲ್ಲಿ ಗೌರವ ಪದಕ ಪಡೆದ ಸಿಬ್ಬಂದಿ ಪದಕ ಪ್ರಧಾನ ಮಾಡಲಾಯಿತು. 2019 ನೇ ಸಾಲಿನ ಮೂವರು ವಲಯ ಅರಣ್ಯಾಧಿಕಾರಿಗಳು, ಐವರು ಉಪ ಅರಣ್ಯ ವಲಯಾಧಿಕಾರಿಗಳು, 12 ಅರಣ್ಯ ರಕ್ಷಕರು, 4 ಕ್ಷೇಮಾಭಿವೃದ್ಧಿ ನೌಕರರು ಒಳಗೊಂಡು ಒಟ್ಟು 75 ಮಂದಿಗೆ ಸಿಎಂ ಪದಕ ನೀಡಿ ಗೌರವಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.