ETV Bharat / state

ಖಾಸಗಿ ಆಸ್ಪತ್ರೆಗಳಿಗೆ ಬೆಡ್ ಬಿಟ್ಟುಕೊಡಲು ಡೆಡ್​ಲೈನ್: ಜನಜಂಗುಳಿ ಪ್ರದೇಶಗಳಲ್ಲಿ ಕಠಿಣ ನಿಯಮ ಸಾಧ್ಯತೆ

author img

By

Published : Apr 16, 2021, 1:14 PM IST

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಹೊರತುಪಡಿಸಿ ಉಳಿದ ರೋಗಿಗಳು ದಾಖಲಾಗಿರುವುದರಿಂದ ಬೆಡ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ತಿಳಿಸಿವೆ. ಅವರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಆ ಸಮಯವೂ ಈಗ ಕಳೆದುಹೋಗಿದ್ದು, ಅವರು ಇನ್ನಷ್ಟು ಬೆಡ್ ಒದಗಿಸಿಕೊಡಬೇಕಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು.

Chief Commissioner of BBMP Gaurav Gupta statement about corona
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಖಾಸಗಿ ಆಸ್ಪತ್ರೆಗಳ ಶೇ50 ರಷ್ಟು ಬೆಡ್‌ಗಳನ್ನು ಸರ್ಕಾರಕ್ಕೆ ಒಪ್ಪಿಸಲು ಆದೇಶಿಸಿದೆ. ಬೆಡ್ ಹೆಚ್ಚಳ, ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗ್ತಿರುವ ಸಂಬಂಧ ಇಂದು ಸಿಎಂ ಎಲ್ಲಾ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಸಿಎಂ ಸಭೆಯಲ್ಲಿ ಪಾಲ್ಗೊಂಡ ಬಳಿಕ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಹಾಗೂ ಇಡೀ ರಾಜ್ಯಕ್ಕೆ ಸಂಬಂಧಪಟ್ಟಂತೆ ಕೋವಿಡ್ ಕುರಿತು ಚರ್ಚೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಏನೇನು ಕ್ರಮ ಕೈಗೊಳ್ಳಬೇಕೆಂಬ ವಿವರ, ಪ್ರಸ್ತಾವನೆಗಳನ್ನು ಸಿಎಂ ಮುಂದೆ ಇಡಲಾಗಿದೆ ಎಂದರು.

ಬೆಡ್ ಸಂಖ್ಯೆ ಹೆಚ್ಚಳಕ್ಕೆ ಕ್ರಮ:

ನಗರ ಮಟ್ಟದಲ್ಲಿ ಇರುವ ಹಾಸಿಗೆಗಳನ್ನು ಯಾವ ರೀತಿ ಹೆಚ್ಚಿಸಬೇಕೆಂಬ ಸಭೆ ಆಗಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳ್ಳಲ್ಲಿ ಇರುವ ಹಾಸಿಗೆಗಳನ್ನು ಸರ್ಕಾರಕ್ಕೆ ಒಪ್ಪಿಸಿಬಿಡುವ ಬಗ್ಗೆ ಚರ್ಚೆ ನಡೆದಿದೆ. ಖಾಸಗಿ ಆಸ್ಪತ್ರೆ, ಖಾಸಗಿ ಹೋಟೇಲ್​ಗಳು ಸೇರಿ, ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣದ ಬಗ್ಗೆಯೂ ಪ್ರಸ್ತಾವನೆ ನೀಡಲಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳಿಂದ ಈಗಾಗಲೇ 4,500 ರಷ್ಟು ಹಾಸಿಗೆಗಳು ಬಂದಿವೆ. ಎಲ್ಲಾ ಪಾಸಿಟಿವ್ ರೋಗಿಗಳು ಆಸ್ಪತ್ರೆ ಸೇರುವ ಅಗತ್ಯ ಇಲ್ಲ. ಸೋಂಕು ಲಕ್ಷಣ ಇದ್ದರೆ ಮಾತ್ರ ಆಸ್ಪತ್ರೆ ಅಗತ್ಯವಿದೆ. ಹೋಂ ಐಸೋಲೇಷನ್​ನಲ್ಲಿ ಇರುವವರು 1912 ಸಹಾಯವಾಣಿಗೆ ಕರೆ ಮಾಡಿ ಅಗತ್ಯ ಸಲಹೆ ಪಡೆಯಬಹುದು ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಹೊರತುಪಡಿಸಿ ಉಳಿದ ರೋಗಿಗಳು ದಾಖಲಾಗಿರುವುದರಿಂದ ಬೆಡ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ತಿಳಿಸಿದ್ದು, ಅವರಿಗೆ ಹತ್ತು ದಿನಗಳ ಕಾಲಾವಕಾಶ ನೀಡಲಾಗಿದೆ. ಆ ಸಮಯವೂ ಈಗ ಕಳೆದುಹೋಗಿದ್ದು, ಅವರು ಇನ್ನಷ್ಟು ಬೆಡ್ ಒದಗಿಸಿಕೊಡಬೇಕಾಗಿದೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಕಠಿಣ ನಿಯಮ?:

ನಗರದಲ್ಲಿ ಕಠಿಣ ನಿಯಮಾವಳಿಗಳನ್ನು ಜಾರಿಗೆ ತರುವ ಬಗ್ಗೆ ತಜ್ಞರ ಸಮಿತಿ ಪ್ರಸ್ತಾವನೆ ನೀಡಿದೆ. ಸರ್ಕಾರ ಸೂಚಿಸಿದರೆ ಆ ನಿಯಮಗಳನ್ನೂ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಿದರು. ನಗರದಲ್ಲಿ ಸೆಕ್ಷನ್ 144 ಈಗಾಗಲೇ ಜಾರಿಯಲ್ಲಿದ್ದು, ಇನ್ನಷ್ಟು ಕಠಿಣ ಮಾಡುವ ಬಗ್ಗೆಯೂ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಮಾರುಕಟ್ಟೆಗಳಿಗೆ ಕಠಿಣ ನಿಯಮ:

ಮಾರುಕಟ್ಟೆಗಳಿಗೆ ಅನಿವಾರ್ಯ ಇದ್ದರೆ ಮಾತ್ರ ಹೋಗಬೇಕು. ಮಾರುಕಟ್ಟೆ ಪ್ರವೇಶ, ನಿರ್ಗಮನ ದ್ವಾರಗಳನ್ನು ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕಾಗಿದೆ. ಜನರು ಮನೆಯಲ್ಲೇ ಇದ್ದು, ಸಹಕರಿಸಬೇಕಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.