ಬೆಂಗಳೂರು:ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದ ಹಿನ್ನೆಲೆ ಚೆನ್ನೈ ಮತ್ತು ಬೆಂಗಳೂರು ಮಾರ್ಗದಲ್ಲಿ ಓಡಾಡುವ ರೈಲುಗಳ ಸಂಚಾರವನ್ನು ಸ್ಥಗಿತ ಮಾಡಲಾಗಿತ್ತು. ಈಗ ಮತ್ತೆ ಯಥಾಸ್ಥಿತಿ ರೈಲು ಸಂಚಾರ ಆರಂಭವಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಬುಧವಾರ ಜಿಲ್ಲೆಯ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಬಳಿ ವಿದ್ಯುತ್ ತಂತಿ ತುಂಡಾಗಿತ್ತು. ಈ ಹಿನ್ನೆಲೆ ಸುಮಾರು 8ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಮುಖವಾಗಿ ಮಾರಿಕುಪ್ಪಂ ಬೆಂಗಳೂರು, ಬೆಂಗಳೂರು ಮೈಸೂರು ತಿರುಪತಿ, ಬೆಂಗಳೂರು ಚೆನೈ, ಜೋಲಾರ್‌ಪೇಟ್ ಬೆಂಗಳೂರು, ಸೇರಿದಂತೆ ಸುಮಾರು ಎಂಟು ರೈಲುಗಳ ಸಂಚಾರ ಸ್ಥಗಿತ ಮಾಡಲಾಗಿತ್ತು ಎಂದು ಹೇಳಿದೆ.
ಜಿಲ್ಲೆಯ ಮಾಲೂರು ತಾಲೂಕು ಬ್ಯಾಟರಾಯನಹಳ್ಳಿ ಬಳಿ ವಿದ್ಯುತ್ ರೈಲು ತುಂಟಾಗಿ ಬಿದ್ದಿದೆ. ಮಧ್ಯಾಹ್ನ ಸುಮಾರಿಗೆ ವಿದ್ಯುತ್ ಲೈನ್ ತುಂಡಾಗಿರುವ ಕುರಿತು ಮಾಹಿತಿ ಸಿಕ್ಕ ತಕ್ಷಣ ಬಂಗಾರಪೇಟೆ ಹಾಗೂ ಕಂಟ್ರೋನ್‌ಮೆಂಟ್ ರೈಲ್ವೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಆಗಬಹುದಾದ ಅನಾಹುತ ತಪ್ಪಿಸಿದ್ದಾರೆ ಎಂದು ಮಾಹಿತಿ ನೀಡಿದೆ. ಜಿಲ್ಲೆಯ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಬಳಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಗಮನಕ್ಕೆ ಬಂದ ತಕ್ಷಣ ದುರಸ್ತಿ ಕಾರ್ಯ ಶುರು ಮಾಡಲಾಗಿತ್ತು. ಸದ್ಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು ಎಂದಿನಂತೆ ರೈಲು ಸಂಚಾರ ಅರಂಭವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಕೋಲಾರ ಜಿಲ್ಲೆಯ ಮಾರ್ಗವಾಗಿ ಮಧ್ಯಾಹ್ನ 2.45 ಕ್ಕೆ ಬೆಂಗಳೂರು - ಮಾರಿಕುಪ್ಪಂ ಪ್ಯಾಸೆಂಜರ್ ರೈಲು (ತೃ. ನಂ. 01775) ಹಾದು ಹೋಗುತ್ತಿದ್ದಾಗ ಓವರ್ ಹೆಡ್ ವಿದ್ಯುತ್ ತಂತಿ ತುಂಡಾಗಿತ್ತು. ಬಂಗಾರಪೇಟೆ ಮಾರ್ಗದ ಕಡೆಗೆ (ಯುಪಿ ಲೈನ್) ಇವೆ. ಆದರೆ ಡೌನ್ ಲೈನ್ (ಬಂಗಾರಪೇಟೆಯಿಂದ ಕೆಎಸ್‌ಆರ್) ಬಾಧಿತವಾಗಿಲ್ಲ ಎಂದು ವಿವರಣೆ ನೀಡಿದೆ.
ಇದರಿಂದಾಗಿ 15 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿತ್ತು. 1 ರೈಲನ್ನು ಭಾಗಶಃ ರದ್ದುಗೊಳಿಸಲಾಗಿತ್ತು. ಓವರ್ ಹೆಡ್ ವಿದ್ಯುತ್ ತಂತಿ ಸ್ಟಾಪ್ ಆಗಿತ್ತು. ಡೀಸೆಲ್ ಇಂಜಿನ್‌ಗಳೊಂದಿಗೆ ರೈಲುಗಳನ್ನು ಓಡಿಸಲು ಟ್ರ್ಯಾಕ್ ಸೂಕ್ತ ಎಂದು ಪರಿಗಣಿಸಿ ಆಗತ್ಯಕ್ಕೆ ಅನುಗುಣವಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರಿಂದ ಆಕ್ರೋಶ: ಬಂಗಾರಪೇಟೆ ಮತ್ತು ಇತರ ನಿಲ್ದಾಣಗಳಿಂದ ಬೆಂಗಳೂರಿಗೆ ನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಬೆಂಗಳೂರು ರೈಲ್ವೆ ವಿಭಾಗವು ಸಾಮಾಜಿಕ ಜಾಲತಾಣಗಳಲ್ಲಿ ಸೇವೆಗೆ ಅಡ್ಡಿಪಡಿಸುವ ಕುರಿತು ಸಂದೇಶ ನೀಡಿಲ್ಲ. ಸಾವಿರಾರು ಪ್ರಯಾಣಿಕರು ನಿಲ್ದಾಣಗಳಲ್ಲಿ ಸುಳಿವಿಲ್ಲದೇ ಸಿಕ್ಕಿಹಾಕಿಕೊಂಡರು ಎಂದು ಅಳಲು ತೋಡಿಕೊಂಡಿದ್ದರು. ನಮಗೆ ಯಾವುದೇ ಮಾಹಿತಿ ಇರಲಿಲ್ಲ. ರೈಲು ಸುಮ್ಮನೆ ನಿಧಾನಗೊಂಡು ನಿಂತಿತು. ಕ್ರಾಸಿಂಗ್ ಗೆ ರೈಲು ನಿಂತಿದೆ ಎಂದು ನಾವೆಲ್ಲ ಭಾವಿಸಿದ್ದೆವು. ಎಷ್ಟೋ ಹೊತ್ತಿನವರೆಗೆ ರೈಲು ಆರಂಭವಾಗದಿದ್ದಾಗ ಮೇಲ್ವೇತುವೆ ಉಪಕರಣಗಳು ಕೆಟ್ಟು ಹೋಗಿದೆ ಎಂಬ ವಿಚಾರ ತಿಳಿದು ಬಂತು ಎಂದು ಕೆಲ ಪ್ರಯಾಣಿಕರು ಸಾಮಾಜಿಕ ಜಾತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ನಿನ್ನೆಯೇ ರೈಲ್ವೆ ಇಲಾಖೆ ಪ್ರಕಟಣೆ ಕೂಡಾ ಹೊರಡಿಸಿತ್ತು.
ಇದನ್ನೂ ಓದಿ:ಹುಬ್ಬಳ್ಳಿಗೆ ಚಾಣಕ್ಯ ಅಮಿತ್ ಶಾ ಆಗಮನ: ಬಿಗಿ ಬಂದೋಬಸ್ತ್