ಬೆಂಗಳೂರು: ಕೊರೊನಾ ಹರಡುವಿಕೆ ಹೆಚ್ಚಾದ ಹಿನ್ನೆಲೆ ಬಿಬಿಎಂಪಿಯಿಂದ ಎಲ್ಲಾ ವಾರ್ಡ್ಗಳಲ್ಲಿ ರಾಸಾಯನಿಕ ಸಿಂಪಡಣೆ ಕಾರ್ಯ ಮುಂದುವರೆದಿದೆ.
ಡ್ರೋನ್ ಮೂಲಕ ವಿಕ್ಟೋರಿಯಾ-ವಾಣಿವಿಲಾಸ್ ಆಸ್ಪತ್ರೆಯಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಯಿತು. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕೊರೊನಾ ಪರೀಕ್ಷೆ ಲ್ಯಾಬ್ ಇದ್ದು, ಹೆಚ್ಚು ಜನ ಅಲ್ಲಿ ಓಡಾಡುವುದರಿಂದ ನಿಗಾವಹಿಸಲಾಗಿದೆ.
ಜೊತೆಗೆ ಪಕ್ಕದಲ್ಲೇ ವಾಣಿವಿಲಾಸ್ ಆಸ್ಪತ್ರೆ ಇರುವುದರಿಂದ ಗರ್ಭಿಣಿಯರು ಬರುವ ಕಾರಣ ಎರಡು ದಿನಕ್ಕೊಮ್ಮೆ ರಾಸಾಯನಿಕ ಸಿಂಪಡಿಸುವ ಯೋಜನೆ ರೂಪಿಸಲಾಗಿದೆ.