ETV Bharat / state

ಹೋಮ-ಹವನದ ನೆಪದಡಿ ಪಂಗನಾಮ... ಆರೋಪಿಗಳ ಹೆಡೆಮುರಿ ಕಟ್ಟಿದ ಅಣ್ಣಾಮಲೈ ತಂಡ - ಹೋಮ

ನಿಮ್ಮ ಮನೆ ವಾಸ್ತು ಸರಿಯಿಲ್ಲ, ನೀವು ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿರುವ ದೋಷ ಖಂಡಿತವಾಗಿಯೂ ಪರಿಹಾರವಾಗುತ್ತದೆ ಎಂದು ಹೇಳಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಐನಾತಿ ಕಳ್ಳರ ತಂಡವೊಂದು ಇದೀಗ ಪೊಲೀಸರ ಅಥಿತಿಯಾಗಿದೆ.

ಮನೆಯಲ್ಲಿರುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಐನಾತಿ ಕಳ್ಳರನ್ನು ಬಂಧಿಸಿದ ಡಿಸಿಪಿ ಅಣ್ಣಾಮಲೈ ತಂಡ
author img

By

Published : Apr 26, 2019, 9:08 PM IST

ಬೆಂಗಳೂರು: ದೋಷ ಪರಿಹಾರ ಮಾಡಿಕೊಡುತ್ತೇವೆ ಎಂದು ಹೇಳಿ ಸಾರ್ವಜನಿಕರಿಗೆ ಉಂಡೆನಾಮ ಹಾಕಿ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನೆಲ್ಲ ದೋಚಿ ಪರಾರಿ ಆಗುತ್ತಿದ್ದ ಐನಾತಿ ಕಳ್ಳರನ್ನು ಬಂಧಿಸುವಲ್ಲಿ ಡಿಸಿಪಿ ಅಣ್ಣಾಮಲೈ ತಂಡ ಯಶಸ್ವಿಯಾಗಿದೆ.

ವಾಸ್ತು ದೋಷ, ಆರೋಗ್ಯ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸ ಸರಿ ಇಲ್ಲವೆಂದು ಕೇಳಿಕೊಂಡು ಬರುತ್ತಿದ್ದವರ ಮನೆಗಳಲ್ಲಿ ಬಂಧಿತರ ಗುಂಪು ಹೋಮ-ಹವನ ನಡೆಸುತ್ತಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿ ಆಗುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ವಿವಿಧ ಠಾಣೆಯಲ್ಲಿ ಸಾಕಷ್ಟು ದೂರುಗಳು ದಾಖಲಾಗಿದ್ದವು. ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಶಂಕಿತರ ಬಂಧನಕ್ಕೆ ಬಲೆ ಬೀಸಿದ್ದರು. ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ.

ಮನೆಯಲ್ಲಿರುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಐನಾತಿ ಕಳ್ಳರನ್ನು ಬಂಧಿಸಿದ ಡಿಸಿಪಿ ಅಣ್ಣಾಮಲೈ ತಂಡ

ಚೇತನ್ ಚಂದ್ರಕಾಂತ್, ರಾಜೆಶ್ ಹಣಪತ್ ರಾವ್ ಥಾಂಬೆ, ಅಜಿತ್ ಕುಮಾರ್ ಅಲಿಯಾಸ್ ಜೊಲ್ಲು, ರಾಜು ಅಲಿಯಾಸ್ ಗೂದೆ, ಶಿವರಾಜ್ ಅಲಿಯಾಸ್ ಕಪ್ಪೆ ಶಿವ ಹಾಗೂ ಅರುಣ್ ಅಲಿಯಾಸ್ ಸುನಿ ಎಂಬುವವರು ಬಂಧಿತ ಆರೋಪಿಗಳು. ಬಂಧಿತರಿಂದ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದು, ಅವುಗಳನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಹೋಮ-ಹವನ ಮಾಡುವ ವಿಧಾನವನ್ನು ಮಹಾರಾಷ್ಟ್ರದ ಅವಿನಾಶ್ ಎಂಬುವವರಿಂದ ಕಲಿತ್ತಿದ್ದರಂತೆ. ಇದನ್ನೇ ಕಳ್ಳತನದಂತಹ ಕೃತ್ಯಗಳಿಗೆ ಬಂಡವಾಳ ಮಾಡಿಕೊಂಡು ಮನೆಗಳನ್ನು ದೋಚುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸದ್ಯ ಗಿರಿನಗರ ಪೊಲೀಸ್​ ಠಾಣೆಯಲ್ಲಿ ಆರೋಪಿಗಳು ಬಂಧಿತರಾಗಿದ್ದು, ಎಲ್ಲರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Intro:ಹೋಮ ಹವನ ಎಂದು ಇಡ್ತಾರೆ ಪಂಗನಾಮ.
ಆರೋಪಿಗಳ ಹೆಡೆಮುರಿಕಟ್ಟುವಲ್ಲಿ ಅಣ್ಣಾಮಲೈ ತಂಡ ಯಶಸ್ವಿ

ಭವ್ಯ

ನಿಮ್ಮ ಆರೋಗ್ಯದಲ್ಲಿ ಸಮಸ್ಯೆಯಿದೆ,ನಿಮ್ಮ ವಾಸ್ತು ಸರಿಯಿಲ್ಲ ನೀವು ಈ ರೀತಿ ದೋಷ ಪರಿಹಾರ ಮಾಡಿಕೊಂಡ್ರೆ ಖಂಡಿತ ನಿಮ್ಮ ಮನೆಯಲ್ಲಿರುವ ದೋಷ ಎಲ್ಲ ಮುಕ್ತ ಆಗಿ ನೀವು ಬಂಗಾರದ ಬದುಕು ಸಾಗಿಸ್ತೀರಾ ಅಂತ ಯಾರಾದ್ರು ಹೇಳೋದನ್ನ ನೀವು ನಂಬ್ತೀರಾ .. ಇತ್ತೀಚೆಗೆ ಎಲ್ಲಿ ನೋಡಿದ್ರು ಜ್ಯೋತಿಷಿಗಳೆ.. ಮನೆ ಮನೆಗೆ ನುಗ್ಗೋ ಜ್ಯೋತಿಷಿಗಳಿಗೇನು ಬರ ಇಲ್ಲ ಬಿಡಿ.. ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಎದುರಾಗುತ್ತೆ, ನಿಮಗೆ ತೊಂದರೆಯಿದೆ.. ನಿಮ್ಮ ಮಕ್ಕಳ ವಿದ್ಯಾಭ್ಯಾಸ ತೊಂದರೆ ಇದೆ ಅಂತ್ಹೇಳಿ ಉಂಡೆನಾಮ ಹಾಕಿ ಮನೆಲಿರೋ ವಸ್ತುವನ್ನೆಲ್ಲಾ ದೋಚೋ ಐನಾತಿ ಕಳ್ಳರಿಗೇನು ಕಮ್ಮಿ ಇಲ್ಲ.. ಸದ್ಯ ಇದರ ಬೇಟೆಯಾಡಿರೋ ದಕ್ಷಿಣ ವಿಭಾಗದ ಪೊಲೀಸರು ಆರೋಪಿಗಳನ್ನ ಖೆಡ್ಡಾಕೆ ಕೆಡಯುವವಲ್ಲಿ ಯಶಸ್ವಿಯಾಗಿದ್ದಾರೆ.
ಚೇತನ್ ಚಂದ್ರಕಾಂತ್,ರಾಜೆಶ್ ಹಣಪತ್ ರಾವ್ ಥಾಂಬೆ,ಅಜಿತ್ ಕುಮಾರ್ ಅಲಿಯಾಸ್ ಜೊಲ್ಲುರಾಜು ಅಲಿಯಾಸ್ ಗೂದೆ,ಶಿವರಾಜ್ ಅಲಿಯಾಸ್ ಕಪ್ಪೆ ಶಿವ,ಅರುಣ್ ಅಲಿಯಾಸ್ ಸುನಿ.. ಈ ಐನಾತಿ ಕಳ್ಳರು ಸದ್ಯ ಮನೆ ಮನೆಗೆ ತೆರಳಿ ನಿಮ್ಮ ಮನೆಯ ವಾಸ್ತು ದೋಷ ಸರಿಯಿಲ್ಲ ನಿಮಗೆ ಆರೋಗ್ಯ ಸಮಸ್ಯೆಯಿದೆ ಅಂತ್ಹೇಳಿ ನೀವು ಹೋಮ ಹವನ ಮಾಡಿಸಬೇಕು ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ನಾವು ಮಾಡ್ತೀವಿ ಅಂತ್ಹೇಳಿ ಹೋಮಕ್ಕೆ ಕೂತುಕೊಂಡಾಗ ಇವರಲ್ಲೆ ಒಬ್ಬ ಪೂಜಾರಿಯಂತೆ ನಟಿಸಿ ನೀವು ನಿಮ್ಮ ಮನೆಯಲ್ಲಿರುವುದನ್ನೆಲ್ಲಾ ಚೊಂಬಲ್ಲಿ ಇಡಬೇಕು ಅಂತ ಸುಳ್ಳು ಹೇಳಿ ಯಾಮಾರಿಸಿ ಅವರಿಗೇ ಗೊತ್ತಿಲ್ಲದ ಹಾಗೆ ಚಿನ್ನ ಎಗರಿಸಿದ್ದಾರೆ. ಮಹಾರಾಷ್ಟ್ರದಲ್ಲಿರುವ ತಮ್ಮ ಗುರು ಅವಿನಾಶ್ ಸುರೇಶ್ ಎನ್ನುವವನಿಂದ ಈ ವಿದ್ಯೆ ಕಲಿತು ಅವನಿಗೂ ಇಲ್ಲಿಂದ ಹಣ ಸಾಗಿಸ್ತಿದ್ರಂತೆ.. ಸದ್ಯ ಅಷ್ಟೂ ಆರೋಪಿಗಳ ಹೆಡೆಮುರಿಕಟ್ಟುವಲ್ಲಿ ವಿವಿಪುರಂ,ಕೆಂಪೇಗೌಡನಗರ,ಗಿರಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಸದ್ಯ ಆರೋಪಿಗಳ ಮೇಲೆ ನಗರದ ನಾನಾ ಠಾಣೆಗಳಲ್ಲಿ ದೂರು ಕೂಡ ದಾಖಲಾಗಿದ್ವು.
ಇತ್ತ ಐನಾತಿಗಳು ಕದ್ದಿದ್ದ 30 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನ ಅದರ ಮಾಲೀಕರಿಗೆ ಒಪ್ಪಿಸುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರ ನೇತೃತ್ವದಲ್ಲೇ ಅದರ ಮಾಲೀಕರಿಗೆ ಮಾಲನ್ನ ಒಪ್ಪಿಸಲಾಗಿದೆ..
Body:KN_BNG
KN_BNG_0526419-SOUTH_7204498-BHAVYAConclusion:KN_BNG_0526419-SOUTH_7204498-BHAVYA
ETV Bharat Logo

Copyright © 2025 Ushodaya Enterprises Pvt. Ltd., All Rights Reserved.