ಬೆಂಗಳೂರು: ಮೈಲಾರಲಿಂಗೇಶ್ವರನ ಹೆಸರಲ್ಲಿ ಮೂವರು ಗೊರವಯ್ಯಗಳು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೋಸ ಹೋದ ಮಂದಿ ನಗರ ಪೊಲೀಸರ ಸಾಮಾಜಿಕ ಜಾಲತಾಣಗಳ ಪೇಜ್ಗೆ ಟ್ಯಾಗ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗೊರವಯ್ಯಗಳು ಕಗ್ಗದಾಸಪುರದ ಮಲ್ಲೇಶ್ ಪಾಳ್ಯ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಮನೆ ಮನೆಗೆ ತೆರಳಿ ಕೆಲವರನ್ನ ಟಾರ್ಗೆಟ್ ಮಾಡುತ್ತಾರೆ. ಬಳಿಕ ಅವರ ವಿಳಾಸ ತಿಳಿದುಕೊಂಡು ನಿಮ್ಮ ಮನೆಯಲ್ಲಿ ದೋಷವಿದೆ ಎಂದು ಹೇಳಿ 25 ಸಾವಿರ ಕೇಳುತ್ತಾರಂತೆ. ಮನೆಯಲ್ಲಿರುವ ಸಮಸ್ಯೆ ಹೇಳಿ ವಶೀಕರಣ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಾರೆ.
ಸದ್ಯ ಇದೇ ರೀತಿ ಕಗ್ಗದಾಸಪುರದಲ್ಲಿ ಈ ಮೂವರು ಬಹಳಷ್ಟು ಮಂದಿಗೆ ಮೋಸ ಮಾಡಿದ್ದು, ಸದ್ಯ ಈ ಕುರಿತು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ನೊಂದ ಸಾರ್ವಜನಿಕರು ದೂರು ನೀಡಿ ದ್ದಾರೆ. ಈ ಸಂಬಂಧ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.