ETV Bharat / state

ಮೊಬೈಲ್​ ಪ್ಯಾಕ್​ನಲ್ಲಿರುವ ಚಾರ್ಜರ್​ಗೆ ಪ್ರತ್ಯೇಕ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್​ - ಈಟಿವಿ ಭಾರತ ಕನ್ನಡ

ಮೊಬೈಲ್​ ಪ್ಯಾಕ್​ನಲ್ಲಿರುವ ಚಾರ್ಜರ್​​ - ​ಚಾರ್ಜರ್​ಗೆ ಪ್ರತ್ಯೇಕ ತೆರಿಗೆ ವಿಧಿಸುವಂತಿಲ್ಲ ಎಂದ ಹೈಕೋರ್ಟ್​

charger-in-mobile-pack-cannot-be-taxed-separately-says-high-court
ಮೊಬೈಲ್​ ಪ್ಯಾಕ್​ನಲ್ಲಿರುವ ಚಾರ್ಜರ್​ಗೆ ಪ್ರತ್ಯೇಕ ತೆರಿಗೆ ವಿಧಿಸುವಂತಿಲ್ಲ : ಹೈಕೋರ್ಟ್​
author img

By

Published : Mar 1, 2023, 10:21 PM IST

ಬೆಂಗಳೂರು : ಮೊಬೈಲ್​ ಪ್ಯಾಕ್​ನಲ್ಲಿ ಬರುವ ಚಾರ್ಜ​ರ್​ಗೂ ಸೇರಿ ಶೇ.5ರಷ್ಟು ಕೆವ್ಯಾಟ್​ (ಕರ್ನಾಟಕ ಮೌಲ್ಯವರ್ಧಿತ ತೆರಿಗೆ) ವಿಧಿಸಿದ ಬಳಿಕ ಪ್ರತ್ಯೇಕವಾಗಿ ಹೆಚ್ಚುವರಿ ತೆರಿಗೆ ವಿಧಿಸಲಾಗದು ಎಂದು ಹೈಕೋರ್ಟ್ ಆದೇಶಿಸಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯಿದೆ(ಕೆವ್ಯಾಟ್) ಅನ್ವಯ ಹೊರಡಿಸಿರುವ ಸೂಚನೆಯಲ್ಲಿ ಟೆಲಿಫೋನ್ ಸೆಟ್ ಎಂದು ಉಲ್ಲೇಖಿಸಲಾಗಿದೆ. ಸೆಟ್ ಎಂದರೆ ಅದರ ಭಾಗಗಳೂ ಚಾರ್ಜರ್ ಸಹಿತವಾಗಿರಲಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕೆವ್ಯಾಟ್​ ಕಾಯಿದೆ ಸೆಕ್ಷನ್ 4ರಡಿ ಮೌಲ್ಯಮಾಪನಕ್ಕೆ ಯಾವುದೇ ಕಾರ್ಯತಂತ್ರವಿಲ್ಲ. ಹಾಗಾಗಿ ಪ್ರತಿಯೊಂದು ಬಿಡಿ ಭಾಗದ ಮೇಲೂ ಪ್ರತ್ಯೇಕ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಕಾಯಿದೆಯ ಶೆಡ್ಯೂಲ್ 3ರ ಪ್ರಕಾರ ಮೊಬೈಲ್ ಫೋನ್​ಗೆ ಶೇ.5ರಷ್ಟು ತೆರಿಗೆ ಇದೆ. ಮತ್ತು ಅದರಲ್ಲಿ ಚಾರ್ಜರ್ ಸೇರಿದ್ದರೂ ಸಹ ಮತ್ತೆ ಚಾರ್ಜರ್ ಗೆ ಪ್ರತ್ಯೇಕವಾಗಿ ಶೇ.5ರಷ್ಟು ಶುಲ್ಕ ವಿಧಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ : ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಮುಖ ಮೊಬೈಲ್ ಕಂಪನಿಗೆ 2008ರಿಂದ 2013ರ ಅವಧಿಯಲ್ಲಿ ರಾಜ್ಯ ರಿಟೇಲ್ ಮಾರಾಟಗಾರರಿಗೆ ಮೊಬೈಲ್ ಮತ್ತು ಚಾರ್ಜರ್ ಮಾರಾಟ ಮಾಡಿರುವುದನ್ನು ಮೌಲ್ಯಮಾಪನ ನಡೆಸಿ ಚಾರ್ಜರ್‌ಗೆ ಶೇ.12ರಿಂದ ಶೇ.14.5ರಷ್ಟು ತೆರಿಗೆ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಕಂಪನಿ 2017ರಲ್ಲಿ ಕರ್ನಾಟಕ ಮೇಲ್ಮನವಿ ಪ್ರಾಧಿಕಾರ(ಕೆಎಟಿ)ದ ಮೊರೆ ಹೋಗಿತ್ತು. ಕೆಎಟಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ತೆರಿಗೆ ಪಾವತಿಗೆ ನೀಡಿದ್ದ ನೋಟಿಸ್ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

ಇಂಜಾಜ್ ವಂಚನೆ ಪ್ರಕರಣ..ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ : ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡಲಾಗುವುದು ಎಂದು ಆಮಿಷವೊಡ್ಡಿ ಸಾವಿರಾರು ಜನರಿಂದ ಸುಮಾರು 250 ಕೋಟಿವರೆಗೂ ಪಡೆದು ವಂಚಿಸಿದ್ದ ಇಂಜಾಜ್ ಇಂಟರ್ ನ್ಯಾಷನಲ್ ಅಸೋಸಿಯೆಟ್ ಗ್ರೂಪ್ ವಿರುದ್ಧ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂಬಂಧ ಬೆಂಗಳೂರು ವಿಶೇಷ ನ್ಯಾಯಾಲಯ ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದೆ.

ಕಳೆದ ನವೆಂಬರ್​ನಲ್ಲಿ ಕಂಪನಿ ಮಾಲೀಕರಾದ ಮಿಸ್ಬಾಹಿದ್ದೀನ್ ಹಾಗೂ ಸುಹೇಲ್ ಅಹಮ್ಮದ್ ಅವರ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು‌ ಇ.ಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದರು. ತನಿಖೆಯಲ್ಲಿ ನೂರಾರು ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸದ್ಯ ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಕೋರ್ಟ್ ಅನುಮತಿ ನೀಡಿದೆ‌.

ಮಿಸ್ಬಾಹಿದ್ದೀನ್ ಹಾಗೂ ಸುಹೇಲ್ ಅಹಮ್ಮದ್ ಇಬ್ಬರು ಕಂಪನಿ ತೆರೆದಿದ್ದರು. ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿ ಬಳಿಕ ಬಡ್ಡಿ ಹಣ ನೀಡದೆ ವಂಚಿಸಿದ್ದರು. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು‌. ಬಳಿಕ ಈ ಪ್ರಕರಣ ಸಿಸಿಬಿಗೆ ಹಸ್ತಾಂತರಿಸಲಾಗಿತ್ತು. ತನಿಖೆ ವೇಳೆ ಕೋಟ್ಯಂತರ ರೂಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಕಂಡು ಬಂದಿತ್ತು. ದೇಶ-ವಿದೇಶಗಳಿಂದ ವಿವಿಧ ಬ್ಯಾಂಕ್ ಗಳಲ್ಲಿ ಹಣ ಕಟ್ಟಿಸಿಕೊಂಡು ಆರ್ ಬಿಐ ನಿಯಮಾವಳಿ ಉಲ್ಲಂಘಿಸಿದ್ದರು. ಈ ಬಗ್ಗೆ‌ ಇ.ಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.

ಇದನ್ನೂ ಓದಿ :ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.