ETV Bharat / state

ಸೈಕೋ ಕಿಲ್ಲರ್ ವಿರುದ್ಧ ಚಾರ್ಜ್‌ಶೀಟ್, ಬೆಂಕಿರಾಜನ ಹಿಸ್ಟ್ರಿಗೆ ಬೆಚ್ಚಿಬಿದ್ದ ಪೊಲೀಸರು! - Kannada news

ತನ್ನ 8ನೇ ವರ್ಷಕ್ಕೆ ಅಕ್ಕನನ್ನೇ ಉರಿಯುತ್ತಿದ್ದ ಬೆಂಕಿಗೆ ತಳ್ಳಿ ಕೊಲೆ ಮಾಡಿದ್ದು, ಅಂದಿನಿಂದ ರಾಜೇಂದ್ರ ಅಲಿಯಾಸ್ ಬೆಂಕಿ ರಾಜ ಎಂಬ ಕುಖ್ಯಾತಿಯನ್ನು ಈ ಆರೋಪಿ ಗಿಟ್ಟಿಸಿಕೊಂಡಿದ್ದ.

ಕುಖ್ಯಾತ ಸೈಕೋ ಕಿಲ್ಲರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
author img

By

Published : Jun 2, 2019, 1:03 PM IST

ಬೆಂಗಳೂರು : ಕುಖ್ಯಾತ ಸೈಕೋ ಕಿಲ್ಲರ್ ರಾಜೇಂದ್ರ ಅಲಿಯಾಸ್‌ ಬೆಂಕಿ ರಾಜನ ವಿರುದ್ಧ ಕೆ.ಎಸ್ ಲೇಔಟ್ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಬೆಂಕಿ ರಾಜ ಅಂದ್ರೆ, ಸಿಲಿಕಾನ್ ಸಿಟಿ ಜನರಲ್ಲಿ ವಿಲಕ್ಷಣ ಭಯ ಮನೆಮಾಡಿತ್ತು. ಯಾಕಂದ್ರೆ ಈತ ಅಂಥ ಪಾಶವೀ ಮನಸ್ಥಿತಿಯ ವ್ಯಕ್ತಿಯಾಗಿದ್ದ. 10 ರೂಪಾಯಿಗಾಗಿ ಮನುಷ್ಯತ್ವ ಮರೆತು ವ್ಯಕ್ತಿಯನ್ನು ಸಾಯಿಸಿದ ಆರೋಪ ಈತನ ಮೇಲಿದೆ. ಇದೇ ಮಾರ್ಚ್ 24 ರಂದು ಉತ್ತರಹಳ್ಳಿ ರಸ್ತೆಯ ಕರ್ನಾಟಕ ಬ್ಯಾಂಕ್ ಸೆಕ್ಯೂರಿಟಿ ಲಿಂಗಪ್ಪನನ್ನು ಕೊಲೆಗೈದಿದ್ದು, ಈ ಸಂಬಂಧ ಕೆ.ಎಸ್‌.ಲೇ ಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು.

ಕುಖ್ಯಾತ ಸೈಕೋ ಕಿಲ್ಲರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಕೃತ್ಯದ ಕುರಿತಾಗಿ ತನಿಖೆ ಆರಂಭಿಸಿದ ಪೊಲೀಸರಿಗೇ ಆಘಾತವಾಗಿದೆ. ಯಾಕಂದ್ರೆ, ದುಡ್ಡಿಗಾಗಿ ಈತ ಒಂಟಿಯಾಗಿ ಅಲೆದಾಡುವವರನ್ನು, ಎಟಿಎಂ ಸೆಕ್ಯೂರಿಟಿ ಗಾರ್ಡ್‌ಗಳು, ಬಸ್ ನಿಲ್ದಾಣಗಳು, ಉದ್ಯಾನವನಗಳಲ್ಲಿ ವಿಶ್ರಾಂತಿ ಪಡೆಯುವವರನ್ನು ಕೇವಲ 50 ರೂಪಾಯಿಗೂ ಹತ್ಯೆ ಮಾಡಿ ಪರಾರಿಯಾಗುತ್ತಿದ್ದ. ಹಾಗೆಯೇ ತನ್ನ 8ನೇ ವರ್ಷಕ್ಕೆ ಆಕ್ಕನನ್ನೇ ಉರಿಯುತ್ತಿದ್ದ ಬೆಂಕಿಗೆ ತಳ್ಳಿ ಕೊಲೆ ಮಾಡಿದ್ದ ಗಂಭೀರ ಆರೋಪವೂ ಈತನ ಮೇಲಿದೆ.

ಸೆಕ್ಯೂರಿಟಿ ಗಾರ್ಡ್‌ ಲಿಂಗಪ್ಪನ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಬೆಂಕಿ ರಾಜ ನಡೆಸಿದ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 150 ಪುಟಗಳುಳ್ಳ ಚಾರ್ಜ್‌ಶೀಟ್ ಸಿದ್ದಪಡಿಸಿ 36 ಜನ ಸಾಕ್ಷಿಗಳನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Intro:ಕುಖ್ಯಾತ ಸೈಕೋ ಕಿಲ್ಲರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ.
ಬೆಂಗಳೂರು ದಕ್ಷಿಣ ಭಾಗದಲ್ಲಿದ್ದ ಆ್ಯಕ್ಟೀವ್ ಆಗಿದ್ದ ಸೈಕೋ..

ಭವ್ಯ

ಕುಖ್ಯಾತ ಸೈಕೋ ಕಿಲ್ಲರ್ ವಿರುದ್ಧ ನ್ಯಾಯಲಯಕ್ಕೆ ಚಾರ್ಜ್ ಶೀಟ್ ಅನ್ನ‌ ಬೆಂಗಳೂರು ದಕ್ಷಿಣ ವಿಭಾಗದ ಕೆ.ಎಸ್ ಲೇಔಟ್ ಪೊಲೀಸರು ಸಲ್ಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಸರು ರಾಜೇಂದ್ರ ಅಲಿಯಾಸ್ ಬೆಂಕಿ ರಾಜ.ಈ ಸೈಕೋವಿನ ಆಟಾಟೋಪಕ್ಕೆ ಸಾರ್ವಜನಿಕರು ಬೆಚ್ಚಿ ಬಿದಿದ್ರು. ಯಾಕಂದ್ರೆ
ತನ್ನ ವಿಕೃತ ಮನಸ್ಥಿತಿಗೆ ದುಡ್ಡಿಗಾಗಿ ವ್ಯಕ್ತಿಗಳನ್ನ ಬಲಿಪಶು ಮಾಡ್ತಿದ್ದ.

ಇದೇ ಮಾರ್ಚ್ 24ರಂದು ಉತ್ತರಹಳ್ಳಿ ರಸ್ತೆಯ ಕರ್ನಾಟಕ ಬ್ಯಾಂಕ್ ಸೆಕ್ಯೂರಿಟಿ ಲಿಂಗಪ್ಪನ ಕೊಲೆ ಮಾಡಿದ್ದ ಈ ಸಂಬಂಧ ದಕ್ಷಿಣಾ ವಿಭಾಗ ಠಾಣೆಯ ಕೆ.ಎಸ್ ಲೇ ಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಬೆಂಕಿ ರಾಜನನ್ನ ಪೊಲೀಸರು ಬಂಧಿಸಿದ್ರು.‌
ನಂತ್ರ ತನಿಖೆ ನಡೆಸಿದಾಗ ಪೊಲೀಸರಿಗೆ ಶಾಕ್ ಕಾದಿತ್ತು ಯಾಕಂದ್ರೆ ದುಡ್ಡಿಗಾಗಿ ಈತ ಒಂಟಿ ಹೋಗುವವರು ನಿದ್ದೆ ಮಾಡೋ ಎಟಿಎಂ ಸೆಕ್ಯೂರಿಟಿಗಳು, ಬಸ್ ನಿಲ್ದಾಣಗಳಲ್ಲಿ, ಪಾರ್ಕಿನಲ್ಲಿ ಮಲಗಿರುವರನ್ನ ಕಂಡ್ರೆ 50ರೂಪಾಯಿಗು ಕೊಲೆಗೈದು ಎಸ್ಕೇಪ್ ಆಗ್ತಿದ್ದ. ಯಾವುದೇ ಆಯುಧಗಳನ್ನು ಬಳಸದೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡುತ್ತಿದ್ದ. ಹಾಗೆ ತನ್ನ 8ನೇ ವರ್ಷಕ್ಕೆ ಆಕ್ಕನನ್ನೆ ಊರಿಯುತ್ತಿದ್ದ ಬೆಂಕಿಗೆ ತಳ್ಳಿ ಕೊಲೆ ಮಾಡಿದ್ದ ಅಂದಿನಿಂದ ರಾಜೇಂದ್ರ ಅಲಿಯಾಸ್ ಬೆಂಕಿ ರಾಜ ಎಂಬ ಹೆಸರು ಬಂದಿತ್ತು.

ಇನ್ನು ಸೈಕೋ ರಾಜೇಂದ್ರ ಅಲಿಯಾಸ್ ಬೆಂಕಿ ರಾಜ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು ಅದ್ರಲ್ಲಿ.‌ಕಲ್ಲು ತೆಗೆದುಕೊಂಡು ಹೋಗುವ ದೃಶ್ಯಗಳು, ಓಡಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಕಾರಣ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ರು. ಹಾಗೆ ಈತ
ನಗರದ ಬಸವನಗುಡಿ, ಕೆಎಸ್ ಲೇಔಟ್, ಜೆಪಿ ನಗರದಲ್ಲಿ ಇದೇ ರೀತಿ ಕೆಲವು ವ್ಯಕ್ತಿಗಳನ್ನ ಕೊಲೆಗೈದಿದ್ದ ..

ಇದೀಗ ಆರೋಪಿಯ ಎಲ್ಲಾ ಕೃತ್ಯಗಳನ್ನ ಸಾಕ್ಷಿ ಸಮೇತ ಹೊರತೆಗೆದ ಕೆ.ಎಸ್ ಲೇಔಟ್ ಪೊಲೀಸರು.ಆರೋಪಿ ವಿರುದ್ದ ಕೋರ್ಟಿಗೆ ‌ಸುಮಾರು 150 ಪುಟ್ಳ ಚಾರ್ಜ್ ಶೀಟ್ ಸಲ್ಲಿಸಿ ಆಟ್ಟಹಾಸದ ಬಗ್ಗೆ 36 ಜನರ ಸಾಕ್ಷಿಗಳ ಉಲ್ಲೇಖ ಮಾಡಿದ್ದಾರೆ..

Body:KN_BNG_03_2_SAIKO_7204498_BHAVYAConclusion:KN_BNG_03_2_SAIKO_7204498_BHAVYA
ETV Bharat Logo

Copyright © 2025 Ushodaya Enterprises Pvt. Ltd., All Rights Reserved.