ETV Bharat / state

ಸಿಎಂ ಬದಲಾವಣೆ ವಿಚಾರ ಸತ್ಯಕ್ಕೆ ದೂರವಾದ ಸಂಗತಿ: ಸಚಿವ ಸಿ.ಟಿ.ರವಿ - BJP HighCommand

ಮುಖ್ಯಮಂತ್ರಿಗಳು, ಲಕ್ಷ್ಮಣ ಸವದಿ ದೆಹಲಿಗೆ ಹೋಗಿರೋದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಕೆಲವೊಮ್ಮೆ ಕಾಕತಾಳಿಯವಾಗಿ ಕೆಲ ಘಟನೆಗಳು ನಡೆಯುತ್ತವೆ. ಇದರ ಬಗ್ಗೆ ವಿಪರೀತ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಿಎಂ ಬದಲಾವಣೆಯ ಮಾತು ಸತ್ಯಕ್ಕೆ ದೂರವಾದದ್ದು ಎಂದು ಸಿ.ಟಿ.ರವಿ ಹೇಳಿದ್ದಾರೆ.

Changing of CM was a Far away from the truth: CT R
ಸಿಎಂ ಬದಲಾವಣೆ ವಿಚಾರ ಸತ್ಯಕ್ಕೆ ದೂರವಾದ ಮಾತು: ಸಚಿವ ಸಿ.ಟಿ ರವಿ
author img

By

Published : Jul 29, 2020, 3:28 PM IST

ಬೆಂಗಳೂರು: ಈಗ ಸಿಎಂ ಬದಲಾವಣೆ ಚರ್ಚೆಯಾಗಲಿ, ಚಿಂತನೆಯಾಗಲಿ ನಡೆದಿರೋದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರ ಜೊತೆ ಮಾತನಾಡಿದ ಅವರು, ಸಿಎಂ ಬದಲಾವಣೆ ಚರ್ಚೆ ನನ್ನ ಅರಿವಿಗೆ ಬಂದಿಲ್ಲ. ನಮಗೆ ಸಂಪೂರ್ಣ ಮಾಹಿತಿಯೂ ಇಲ್ಲ. ಮುಖ್ಯಮಂತ್ರಿಗಳು ದೆಹಲಿಗೆ ತೆರಳಿರುವ ವಿಚಾರ ಮಾಧ್ಯಮಗಳ ಮೂಲಕ ತಿಳಿದಿದೆ.

ಸಿಎಂ ಬದಲಾವಣೆ ವಿಚಾರ ಸತ್ಯಕ್ಕೆ ದೂರವಾದ ಸಂಗತಿ: ಸಚಿವ ಸಿ.ಟಿ.ರವಿ

ಕೆಲವೊಮ್ಮೆ ಕಾಕತಾಳಿಯವಾಗಿ ಕೆಲ ಘಟನೆಗಳು ನಡೆಯುತ್ತವೆ. ಇದರ ಬಗ್ಗೆ ವಿಪರೀತ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳನ್ನು ಬದಲಿಸುವ ಚಿಂತನೆಯಾಗಲಿ ಅಥವಾ ಚರ್ಚೆಯಾಗಲಿ ನಡೆದಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂಪುಟ ವಿಸ್ತರಣೆ, ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಯಾರನ್ನು ಒಳಗೆ ಕರೆ ತರಬೇಕು, ಯಾರನ್ನು ಹೊರಗೆ ಕಳಿಸಬೇಕು ಅನ್ನೋದನ್ನು ಅವರು ತೀರ್ಮಾನ ಮಾಡುತ್ತಾರೆ. ಪಕ್ಷದಲ್ಲಿರುವ ಪದ್ಧತಿಯಂತೆ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.

ಸಾಕಷ್ಟು ಜನರು ಮಂತ್ರಿ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಹಿರಿಯರು, ಪ್ರಾದೇಶಿಕತೆ ಆಧಾರದ ಮೇಲೆ ಸಚಿವರನ್ನಾಗಿ ಮಾಡುವ ಕೆಲಸ ಸಿಎಂ ಮಾಡುತ್ತಾರೆ. ಲಕ್ಷ್ಮಣ ಸವದಿ ದೆಹಲಿಗೆ ಹೋಗಿರೋದು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.