ETV Bharat / state

ಬ್ರಿಟಿಷರ ಕಾಲದ ಪದ್ದತಿಗಳ ಬದಲಾವಣೆ, ಕಂದಾಯ ಇಲಾಖೆ ಸೇವೆ ಸರಳೀಕರಣ: ಅಶೋಕ್ - ಭ್ರಷ್ಟಾಚಾರದ ಆರೋಪ

ಸ್ವಾತಂತ್ರ್ಯ ಬಂದಾಗಿನಿಂದಲೂ ಭ್ರಷ್ಟಾಚಾರದ ಆರೋಪ ಕಂದಾಯ ಇಲಾಖೆ ಮೇಲಿದೆ. 75 ವರ್ಷದಲ್ಲಿ 8 ವರ್ಷ ಮಾತ್ರ ನಾವು ಆಳ್ವಿಕೆ ಮಾಡಿದ್ದೇವೆ. ಉಳಿದ ಕಾಲ ಯಾರಿದ್ದರು ಎಂದು ಸೂಚ್ಯವಾಗಿ ತಿಳಿಸಿ ಆರ್​ ಅಶೋಕ್​ ಚರ್ಚೆಗೆ ತೆರೆ ಎಳೆದರು.

Revenue Minister R Ashok
ಕಂದಾಯ ಸಚಿವ ಆರ್ ಅಶೋಕ್
author img

By

Published : Sep 23, 2022, 7:10 PM IST

ಬೆಂಗಳೂರು: ಕಂದಾಯ ಇಲಾಖೆಯ ಸೇವೆಗಳನ್ನು ಒದಗಿಸಲು ಬ್ರಿಟಿಷರ ಕಾಲದಿಂದ ಇದ್ದ ಪದ್ದತಿಗಳನ್ನು ಬದಲಾಯಿಸಿ ಸರಳೀಕರಣಗೊಳಿಸಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಆನ್​ಲೈನ್ ಮೂಲಕ ಕೆಲ ಸೇವೆಗಳನನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂದಾಯ ಇಲಾಖೆಯಲ್ಲಿ ಪಿಂಚಣಿ, ಭೂ ಪರಿವರ್ತನೆ, ಜನನ, ಮರಣ ಪತ್ರಕ್ಕೆ ಹಣಕೊಡಬೇಕು. ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸದಸ್ಯರು ಆರೋಪಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ಆರ್​ ಅಶೋಕ್​, ನಾವು ಈಗಾಗಲೇ ಕಂದಾಯ ಇಲಾಖೆಯಲ್ಲಿ 59 ಸೇವೆಗಳನ್ನು ಆನ್​ಲೈನ್ ಮಾಡಿದ್ದೇವೆ. ಜನನ, ಮರಣ ಪತ್ರದಂತಹ ಸೇವೆ ಆನ್​ಲೈನ್​ನಲ್ಲೇ ಪಡೆಯಬಹುದಾಗಿದೆ. ಭೂ ಪರಿವರ್ತನೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ 79ಎ ಮತ್ತು ಬಿ ಅನ್ನು ತೆಗೆದುಹಾಕಿದ್ದೇವೆ. ಪಿಂಚಣಿ ಸೇವೆ ಪಡೆಯಲು ಹಲೋ ಕಂದಾಯ ಸಚಿವರೆ ಎನ್ನುವ ಸಹಾಯವಾಣಿಗೆ ಕರೆ ಮಾಡಿದರೆ ಅವರ ಮನೆ ಬಾಗಲಿಗೆ ಪಿಂಚಣಿ ತಲುಪಲಿದೆ ಎಂದರು.

ಎಲ್ಲದಕ್ಕೂ ಹಣ ಕೊಡುವ ಪದ್ಧತಿ ಇತ್ತು. ಬ್ರಿಟಿಷರ ಕಾಲದಿಂದ ಇದ್ದ ಈ ಪದ್ದತಿಯನ್ನು ಬದಲಾಯಿಸುತ್ತಿದ್ದೇವೆ. ರೈತರು ಈಗ ಅವರ ಜಮೀನಿನ ಸರ್ವೇ ಅವರೇ ಮಾಡಿಕೊಳ್ಳಬಹುದಾಗಿದೆ ಎಂದರು.

ಕೆಲ ತಹಶೀಲ್ದಾರರ ಮೇಲೆ ಭ್ರಷ್ಟಾಚಾರದ ದೂರು ಬಂದಿದ್ದು, ಅದರಲ್ಲಿ ಕೆಲವನ್ನು ಅಮಾನತು ಮಾಡಿ ಲೋಕಾಯುಕ್ತಕ್ಕೆ ಪ್ರಕರಣವನ್ನು ಕೊಡಲಾಗಿದೆ. ಯಾವ ಎಸಿ, ತಹಶೀಲ್ದಾರ್ ವಿರುದ್ಧ ದೂರು ಬಂದರೂ ತನಿಖೆ ತಡೆಯಲ್ಲ ಎಂದರು.

ಹಾಗಾದರೆ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎನ್ನುವುದನ್ನು ಒಪ್ಪುತ್ತೀರಾ? ಎನ್ನುವ ಸಲೀಂ ಹೇಳಿಕೆಯನ್ನು ಒಪ್ಪದ ಅಶೋಕ್, ಸ್ವಾತಂತ್ರ್ಯ ಬಂದಾಗಿನಿಂದಲೂ ಭ್ರಷ್ಟಾಚಾರದ ಆರೋಪ ಕಂದಾಯ ಇಲಾಖೆ ಮೇಲಿದೆ. 75 ವರ್ಷದಲ್ಲಿ 8 ವರ್ಷ ಮಾತ್ರ ನಾವು ಆಳ್ವಿಕೆ ಮಾಡಿದ್ದೇವೆ. ಉಳಿದ ಕಾಲ ಯಾರಿದ್ದರು ಎಂದು ಸೂಚ್ಯವಾಗಿ ತಿಳಿಸಿ ಚರ್ಚೆಗೆ ತೆರೆ ಎಳೆದರು.

ಪಿಎಫ್ಐ ಎಸ್‌ಡಿಎಫ್‌ಐ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಭಯೋತ್ಪಾದಕ ಚಟುವಟಿಕೆ ಜೊತೆ ನಂಟಿನ ಆರೋಪದ ಮೇಲೆ ರಾಷ್ಟ್ರೀಯ ತನಿಖಾದಳ ಪಿಎಫ್ಐ ಮತ್ತು ಎಸ್‌ಡಿಎಫ್‌ಐ ಸಂಘಟನೆಗಳ ಮೇಲೆ ದಾಳಿ ನಡೆಸಿರುವ ವಿಷಯವನ್ನು ವಿಧಾನ ಪರಿಷತ್​ನಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಮುನಿರಾಜುಗೌಡ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ವಿಧಾನ ಪರಿಷತ್​ನ ಶೂನ್ಯವೇಳೆ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಪಿಎಫ್ಐ, ಎಸ್‌ಡಿಎಫ್ಐ ಸಂಘಟನೆ ಮೇಲೆ ಎನ್ಐಎ ದಾಳಿ ಮಾಡಿದೆ. ಮಹತ್ವದ ದಾಖಲಾತಿ ವಶಪಡಿಸಿಕೊಂಡಿದೆ. ಹಿಜಾಬ್, ಅಜಾನ್, ಸೇರಿದಂತೆ ಹಿಂದೂ ಯುವಕರ ಹತ್ಯೆ ಪ್ರಕರಣದಲ್ಲಿ ಈ ಸಂಘಟನೆಗಳು ಭಾಗಿಯಾಗಿರುವ ಬಗ್ಗೆ ಚರ್ಚೆ ಆಗುತ್ತಿದೆ. ಐಸಿಸ್ ಉಗ್ರ ಸಂಘಟನೆ ಜೊತೆ ಇವರ ಲಿಂಕ್ ಇದೆ ಎನ್ನಲಾಗುತ್ತಿದೆ.

ಈ‌ ಬಗ್ಗೆ ಕಠಿಣ ಕ್ರಮ ಆಗಬೇಕು. ಈ ಹಿಂದೆ ಇದ್ದ ಸರ್ಕಾರ ಈ ಸಂಘಟನೆಗಳ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದರಿಂದ ಇವರ ಚಟುವಟಿಕೆ ಹೆಚ್ಚಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ: ಹಬ್ಬ... ಸರಣಿ ರಜೆಗಳ ವೇಳೆ ಖಾಸಗಿ ಬಸ್​ಗಳ ದುಬಾರಿ ಪ್ರಯಾಣ ದರಕ್ಕೆ ಅಂಕುಶ: ಶ್ರೀರಾಮುಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.