ETV Bharat / state

ನಿರೂಪಕರಲ್ಲಿ ಬದಲಾವಣೆ : ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಅಪರ್ಣಾಗೆ ಕೈ ತಪ್ಪಿದ ಅವಕಾಶ​ - Change in anchors in 73 republic day function

ಈ ಬಾರಿಯ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟಿ ಅಪರ್ಣಾ ನಿರೂಪಕರಾಗಿ ಕಾಣಿಸಿಕೊಂಡಿಲ್ಲ. ಬದಲಾಗಿ ಮಹಿಳಾ ನಿರೂಪಕಿಯಾಗಿ ಡಾ. ಗಿರಿಜಾ ಹಾಗೂ ಮತ್ತೊಬ್ಬ ನಿರೂಪಕರಾಗಿ ಶಂಕರ್ ಪ್ರಕಾಶ್ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಗಿರಿಜಾ
ಗಿರಿಜಾ
author img

By

Published : Jan 26, 2022, 9:42 AM IST

Updated : Jan 26, 2022, 10:33 AM IST

ಬೆಂಗಳೂರು: ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್​​ ಮೈದಾನದಲ್ಲಿ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಬಾರಿ ನಿರೂಪಕರಲ್ಲಿ ಬದಲಾವಣೆ ಮಾಡಲಾಗಿದೆ.

ಹೌದು, ಈ ಬಾರಿ ನಟಿ ಅಪರ್ಣಾ ನಿರೂಪಕರಾಗಿ ಕಾಣಿಸಿಕೊಂಡಿಲ್ಲ. ಬದಲಾಗಿ ಮಹಿಳಾ ನಿರೂಪಕಿಯಾಗಿ ಡಾ. ಗಿರಿಜಾ ಹಾಗೂ ಮತ್ತೊಬ್ಬ ನಿರೂಪಕರಾಗಿ ಶಂಕರ್ ಪ್ರಕಾಶ್ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಕರು ಹಾಗೂ ಗಾಯಕರ ಬದಲಾವಣೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳ ಮನೆ ಮುಂದೆ ಈ ಹಿಂದೆ ಡಾ.ಗಿರಿಜಾ ಪ್ರತಿಭಟನೆ ಮಾಡಿದ್ದರು.

ಮಾಣಿಕ್ ಷಾ ಮೈದಾನದಲ್ಲಿ ನಡೆಯುತ್ತಿರುವ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ

ಪ್ರತಿ ಬಾರಿ ಹಳೆ ನಿರೂಪಕರು ಹಾಗೂ ಗಾಯಕರಿಗೆ ಮಣೆ ಹಾಕುತ್ತಿದ್ದಾರೆ. 10 ವರ್ಷದಿಂದ ಒಬ್ಬರೇ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಪ್ರತಿಭಟನೆ ನಡೆಸಿದ್ದರು. ಗಿರಿಜಾ ಪ್ರತಿಭಟನೆ ಹಿನ್ನೆಲೆ ಈ ಬಾರಿ ನಿರೂಪಕರಲ್ಲಿ ಬದಲಾವಣೆ ಮಾಡಲಾಗಿದ್ದು, ಅಪರ್ಣ ಬದಲಿಗೆ ಡಾ.ಗಿರಿಜಾಗೆ ಸ್ಥಾನ ನೀಡಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 26, 2022, 10:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.