ETV Bharat / state

ಒಂದು ವರ್ಷ ಪೂರೈಸಿದ ಚಂದ್ರಯಾನ -2 ಮಿಷನ್​​... ಆರ್ಬಿಟರ್​​​​ನಲ್ಲಿ 7 ವರ್ಷಕ್ಕಾಗುವಷ್ಟು ಇಂಧನ - India's second lunar mission Chandrayaan-2

ಚಂದ್ರಯಾನ - 2 ಉಡಾವಣೆಗೊಂಡ ಒಂದು ತಿಂಗಳ ಬಳಿಕ ಚಂದ್ರನ ಕಕ್ಷೆ ತಲುಪಿತ್ತು. ಬಳಿಕ ಸಾಫ್ಟ್​ ಲ್ಯಾಂಡಿಂಗ್ ಸಾಧ್ಯವಾಗದೇ ವಿಕ್ರಮ್​​​ ಲ್ಯಾಂಡರ್​​​ನ ಸಂಪರ್ಕ ಕಡಿತಗೊಂಡಿತ್ತು. ಹೀಗಿದ್ದರೂ ವಿಜ್ಞಾನಿಗಳಲ್ಲಿ ಇಂದಿಗೂ ಚಂದ್ರನ ಕುರಿತ ಕೌತುಕವನ್ನು ಆರ್ಬಿಟರ್​ ತುಂಬಿಕೊಡುತ್ತಿದೆ.

Chandrayaan-2 Completes A Year Around Moon
ಒಂದು ವರ್ಷ ಪೂರೈಸಿದ ಚಂದ್ರಯಾನ-2 ಮಿಷನ್​​...ಆರ್ಬಿಟರ್​​​​ನಲ್ಲಿ 7 ವರ್ಷಕ್ಕಾಗುವಷ್ಟು ಇಂಧನ
author img

By

Published : Aug 21, 2020, 11:08 AM IST

ಬೆಂಗಳೂರು: ಭೂಮಿಗೂ ಚಂದ್ರನಿಗೂ ಅವಿನಾಭಾವ ಸಂಬಂಧ. ಚಂದ್ರನಲ್ಲಿ ಏನಿದೆ ಎಂದು ಹುಡುಕುವ ಪ್ರಯತ್ನ ನಿಲ್ಲಲು ಸಾಧ್ಯವಿಲ್ಲ. ಚಂದ್ರನನ್ನು ಇನ್ನಷ್ಟು ಅರಿಯಬೇಕು ಎಂಬ ಕೌತುಕದಿಂದ ಇಸ್ರೋ ಹೊಸ ಇತಿಹಾಸ ನಿರ್ಮಿಸಿದೆ. ಈ ಇತಿಹಾಸಕ್ಕೀಗ 1 ವರ್ಷ ತುಂಬಿದೆ.

ಭಾರತ ಹೆಮ್ಮೆ ಪಡುವಂತಹ ಯೋಜನೆಯಾದ ಚಂದ್ರಯಾನ - 2 ಯಶಸ್ವಿ ಎನಿಸಿದರು ಸಾಫ್ಟ್​ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಚಂದ್ರನ ಕಕ್ಷೆ ಸೇರಿದ್ದ ಆರ್ಬಿಟರ್​ 4,400 ಸುತ್ತನ್ನು ಚಂದ್ರನ ಸುತ್ತ ಯಶಸ್ವಿಯಾಗಿ ಪೂರೈಸಿದೆ.

ಇದಲ್ಲದೇ ಈ ಆರ್ಬಿಟರ್​​ ಚಂದ್ರನ ಸುತ್ತ ಇನ್ನೂ 7 ವರ್ಷಗಳ ಕಾಲ ಸುತ್ತಲು ಬೇಕಾಗುವಷ್ಟು ಇಂಧನ ಇದೆ ಎಂದು ಇಸ್ರೋ ಮಾಹಿತಿ ನೀಡಿದೆ. 22ನೆ ಜುಲೈ 2019ರಂದು ಚಂದ್ರಯಾನ -2 ಹೊತ್ತ ರಾಕೆಟ್ ಶ್ರೀ ಹರಿಕೋಟಾದಿಂದ ಯಶಸ್ವಿ ಉಡಾವಣೆ ಮಾಡಲಾಗಿತ್ತು. ಬಳಿಕ ಒಂದು ತಿಂಗಳ ಬಳಿಕ ಆರ್ಬಿಟರ್​​ ಚಂದ್ರನ ಮೇಲ್ಮೈ ತಲುಪಿತ್ತು. ಆದರೆ, ಈ ವೇಳೆ ಲ್ಯಾಂಡರ್​ ವಿಕ್ರಮ್​ ಸಂಪರ್ಕ ಕಳೆದುಕೊಂಡು ಯೋಜನೆಗೆ ಹಿನ್ನಡೆಯಾಗಿತ್ತು.

ಇದೀಗ ಆರ್ಬಿಟರ್​​​​ನ ಎಲ್ಲ ಉಪಕರಣಗಳು ಸ್ಥಿಮಿತದಲ್ಲಿದೆ ಹಾಗೂ ಇನ್ನು 7 ವರ್ಷಕ್ಕೆ ಬೇಕಾಗುವ ಇಂಧನ ಇದೆ ಎಂದು ಇಸ್ರೋ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.