ETV Bharat / state

ಮನೆ ಬೀಗ ಮುರಿದು ಕಳ್ಳತನ: ಐನಾತಿ ಕಳ್ಳಿ ಅಂದರ್​ - ಮನೆ ಬೀಗ ಮುರಿದು ಕಳ್ಳತನ ಪ್ರಕರಣ

ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪಶ್ಚಿಮ ವಿಭಾಗದ ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಐನಾತಿ ಕಳ್ಳಿ ಅಂದರ್​
house thieves arrest
author img

By

Published : Nov 27, 2020, 12:46 PM IST

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಸಹಚರರೊಂದಿಗೆ ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳಿ ಸೇರಿದಂತೆ ಆಕೆಯ ಸಹಚರರನ್ನು ಪಶ್ಚಿಮ ವಿಭಾಗದ ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ನಗ್ಮಾ (24) ಬಂಧಿತ ಆರೋಪಿ. ಈಕೆ ಗವಿಪುರಂನ ಮನೆಯೊಂದರಲ್ಲಿ ಪರಿಚಯಸ್ಥೆ ರೀತಿಯಲ್ಲಿ ನಟಿಸಿ 2 ಲಕ್ಷದ 80 ಸಾವಿರ ಬೆಲೆ ಬಾಳುವ ಚಿನ್ನದ ಆಭರಣಗಳು, ಬೆಳ್ಳಿ ವಸ್ತುಗಳು ಹಾಗೂ ನಗದು ಹಣ ಕಳವು ಮಾಡಿದ್ದಳು. ಈ ಕುರಿತಂತೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಆರೋಪಿ ನಗ್ಮಾ ಆಕೆಯ ಸಹಚರರಾದ ನಯಾಜ್, ಅಪ್ಸರ್ ಅಹಮದ್ ರನ್ನು ಬಂಧಿಸಿದ್ದಾರೆ. ಆರೋಪಿಗಳ ಮಾಹಿತಿ ಆಧಾರದ ಮೇಲೆ 60 ಗ್ರಾಂ ತೂಕದ ಚಿನ್ನದ ಗಟ್ಟಿ ವಶಪಡಿಸಿಕೊಂಡಿದ್ದಾರೆ.

ನಯಾಜ್ ಮತ್ತು ಅಪ್ಸರ್ ಕಳ್ಳತನ ಮಾಡಿದ ಒಡವೆಗಳನ್ನು ಚಿನ್ನದ ಅಂಗಡಿಗಳಿಗೆ ಮಾರಿ ಹಣ ಪಡೆಯುತ್ತಿದ್ದ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈಕೆಯಿಂದ 6 ಲಕ್ಷದ 46 ಸಾವಿರ ಬೆಲೆ ಬಾಳುವ 210 ಗ್ರಾಂ ತೂಕದ ಚಿನ್ನಾಭರಣ ಮತ್ತು 500 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.