ಬೆಂಗಳೂರು : ಸ್ಯಾಂಡಲ್ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ನಡೆಸಲಿದ್ದಾರೆ. ಆರ್.ಆರ್. ನಗರ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತ ಯಾಚಿಸಲಿದ್ದಾರೆ.
ನಾಳೆ ಬೆಳಗ್ಗೆ 10 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಿಂದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮುನಿರತ್ನ ಪರವಾಗಿ ರೋಡ್ ಶೋ ಮೂಲಕ ಮತಯಾಚಿಸಲಿದ್ದಾರೆ.
![Challenging star darshan campaign from Yeshwanthpur tomorrow](https://etvbharatimages.akamaized.net/etvbharat/prod-images/kn-bng-02-darshan-maneyali-tharun-sudiru-birthday-celebrate-7204735_09102020161609_0910f_1602240369_926.jpg)
ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಆರಂಭಗೊಳ್ಳಲಿರುವ ರೋಡ್ ಶೋ ನಂತರ ಬೆಳಗ್ಗೆ 11 ಗಂಟೆಗೆ ವಾರ್ಡ್ ನಂ.17 ಜೆ.ಪಿ.ಪಾರ್ಕ್ ಚೌಡೇಶ್ವರಿ ಬಸ್ ನಿಲ್ದಾಣದಿಂದ ಹೊರಟು ಜೆ.ಪಿ.ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.
ಮಧ್ಯಾಹ್ನ 1:15 ಗಂಟೆಗೆ ವಾರ್ಡ್ ನಂ.16 ಜಾಲಹಳ್ಳಿ ವಿಲೇಜ್ ಮೂಲಕವಾಗಿ, ಮಧ್ಯಾಹ್ನ 2 ಗಂಟೆಗೆ ವಾರ್ಡ್ ನಂ.38 ಹೆಚ್.ಎಂ.ಟಿ ಪೀಣ್ಯದಿಂದ ಗೊರಗುಂಟೆಪಾಳ್ಯದಲ್ಲಿ ಪ್ರಚಾರ ನಡೆಸಲಿದ್ದು, ಸಂಜೆ 4 ಗಂಟೆಗೆ ವಾರ್ಡ್ ನಂ.42 ಲಕ್ಷ್ಮಿದೇವಿನಗರದ ಕೂಲಿನಗರ ಸೇತುವೆ ಮಾರ್ಗವಾಗಿ ಸಂಜೆ 5 ಗಂಟೆಗೆ ವಾರ್ಡ್ ನಂ.69 ಲಗ್ಗೆರೆ ಆಲದಮರ ಸರ್ಕಲ್ ಮೂಲಕ ಕೊಟ್ಟಿಗೆಪಾಳ್ಯ ಪೈಪ್ ಲೈನ್, ಸುಂಕದ ಕಟ್ಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ.
![Challenging star darshan campaign from Yeshwanthpur tomorrow](https://etvbharatimages.akamaized.net/etvbharat/prod-images/9360936_425_9360936_1603995818625.png)
ಸಂಜೆ 6 ಗಂಟೆಗೆ ವಾರ್ಡ್ ನಂ.73 ಕೊಟ್ಟಿಗೆಪಾಳ್ಯದ ಬಿಡಿಎ ಕಾಂಪ್ಲೆಕ್ಸ್, ರಾತ್ರಿ 8:15 ವಾರ್ಡ್ ನಂ.129 ಜ್ಞಾನಭಾರತಿಯ ಕೆಂಗುಂಟೆ, ಮಲ್ಲತ್ತಹಳ್ಳಿ, ರಾತ್ರಿ 9 ವರೆಗೆ ವಾರ್ಡ್ ನಂ.160 ರಾಜರಾಜೇಶ್ವರಿನಗರದ ಪ್ರವೇಶದ್ವಾರದ ಮೂಲಕ ರಾಜರಾಜೇಶ್ವರಿನಗರದ ಪ್ರಮುಖ ರಸ್ತೆಗಳಲ್ಲಿ ದರ್ಶನ್ ಮತಯಾಚಿಸಲಿದ್ದಾರೆ.