ETV Bharat / state

ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ: ಎದುರಿಸಿದ ಸವಾಲು ಸಂಕಷ್ಟ ನೂರೆಂಟು! - ಪುನೀತ್ ರಾಜ್‍ಕುಮಾರ್ ನಿಧನದ ಆಘಾತ

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು 2019 ಜುಲೈ 26ರಂದು ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬಂದಿತು. ಮೂರೂವರೆ ವರ್ಷದ ಅಧಿಕಾರವಧಿಯಲ್ಲಿ ಇಬ್ಬರು ಸಿಎಂ ಬಿಎಸ್​ವೈ, ಬೊಮ್ಮಾಯಿ ಆಡಳಿತ ನಡೆಸಿದರು. ಅತಿವೃಷ್ಟಿ, ಸರ್ಕಾರದ ಅಳಿವು ಉಳಿವಿನ ಉಪಚುನಾವಣೆ, ಹಿಜಾಬ್ ಗಲಾಟೆ, ಕೊರೊನಾ ಮಹಾಮಾರಿ, ಆರ್ಥಿಕ ಸಂಕಷ್ಟ, ಶೇ 40ರಷ್ಟು ಕಮಿಷನ್ ಹಗರಣದ ಆರೋಪ, ಮೀಸಲಾತಿ ಹೋರಾಟ,ಕುಕ್ಕರ್ ಬಾಂಬ್ ಬ್ಲಾಸ್ಟ್ ಹೀಗೆ ಹಲವಾರು ಸವಾಲುಗಳನ್ನು ಬಿಜೆಪಿ ಸರ್ಕಾರ ಎದುರಿಸಿದೆ.

Former CM BS Yeddyurappa, CM Basavaraj Bommai
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ
author img

By

Published : Apr 11, 2023, 6:03 PM IST

Updated : Apr 11, 2023, 6:20 PM IST

ಬೆಂಗಳೂರು: ಕ್ಷಿಪ್ರ ರಾಜಕೀಯದಲ್ಲಿ ಬಂಡಾಯದ ಸುಳಿಗೆ ಸಿಲುಕಿ ಪತನವಾದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಬಳಿಕ ರಾಜ್ಯದಲ್ಲಿ ಕಮಲ ಸರ್ಕಾರ ಅಸ್ತಿತ್ವಕ್ಕೆ ಬಂತು. ಇದೀಗ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿ ಮತ್ತೆ ರಾಜ್ಯದ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದೆ. ಆದರೆ, ಕಮಲ ಸರ್ಕಾರ ತನ್ನ ಮೂರೂವರೆ ವರ್ಷದ ಆಡಳಿತಾವಧಿಯಲ್ಲಿ ನೂರೆಂಟು ಸವಾಲು, ಸಂಕಷ್ಟಗಳನ್ನು ಎದುರಿಸಬೇಕಾಯಿತು.

ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಕ್ಷಿಪ್ರ ಬದಲಾವಣೆ ಹಿನ್ನೆಲೆ 2019 ಜುಲೈ 26ರಂದು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದರು. ಎರಡು ವರ್ಷಗಳ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಲು ಹಾದಿ ಸುಗಮ ಗೊಳಿಸಿದರು.

ಬಿಜೆಪಿ ಈ ಮೂರೂವರೆ ವರ್ಷದ ಅಧಿಕಾರವಧಿಯಲ್ಲಿ ಎರಡು ಸಿಎಂಗಳು ರಾಜ್ಯದಲ್ಲಿ ಆಡಳಿತ ನಡೆಸಿದರು. ಆದರೆ ಬಿಜೆಪಿ ತನ್ನ ಮೂರೂವರೆ ವರ್ಷಗಳ ಆಡಳಿತದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಬಿಜೆಪಿಗೆ ಆಡಳಿತದ ಹಾದಿ ಮುಳ್ಳು ಹಾಸಿನಿಂದಲೇ ಕೂಡಿತ್ತು. ಅನೇಕ ಅಗ್ನಿಪರೀಕ್ಷೆಗಳು ಬಿಜೆಪಿ ಸರ್ಕಾರದ ಮುಂದೆ ಎದುರಾಗಿತ್ತು. ಹಿಂದೆಂದೂ ಕಾಣದ ಅತಿವೃಷ್ಟಿ, ಸರ್ಕಾರದ ಅಳಿವು ಉಳಿವಿನ ಉಪಚುನಾವಣೆ, ಹಿಜಾಬ್ ಗಲಾಟೆ, ಕೊರೊನಾ ಮಹಾಮಾರಿ ಬಿಜೆಪಿ ಸರ್ಕಾರ ಎದುರಿಸಿದ ಅತಿ ದೊಡ್ಡ ಸವಾಲಾಗಿವೆ.

ಬಿಜೆಪಿ ಸರ್ಕಾರಕ್ಕೆ ಎದುರಾದ ಅತಿವೃಷ್ಟಿ‌ ಸವಾಲು:ಬಿಜೆಪಿ ಸರ್ಕಾರ ಅಧಿಕಾರ ಸ್ವೀಕರಿಸುತ್ತಿದ್ದ ಹಾಗೆ ರಾಜ್ಯ ಹಿಂದೆಂದೂ ಕಾಣದ ಅತಿವೃಷ್ಟಿಗೆ ಸಾಕ್ಷಿಯಾಯಿತು. ಆಗ ತಾನೇ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ಯಾವುದೇ ಸಂಪುಟ ಸಚಿವರಿಲ್ಲದೆ ಏಕಾಂಗಿಯಾಗಿ ಸಿಎಂ ಯಡಿಯೂರಪ್ಪ ಮಹಾಮಳೆಯ ಅತಿವೃಷ್ಟಿಯನ್ನು ನಿಭಾಯಿಸಬೇಕಾಯಿತು. 2019 ಆಗಸ್ಟ್ ನಲ್ಲಿ ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾದ ಹಿನ್ನೆಲೆ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಯಿತು. ಈ ವೇಳೆ, ಸಿಂಗಲ್ ಮ್ಯಾನ್ ಕ್ಯಾಬಿನೆಟ್ ಸಿಎಂ ಒಬ್ಬರೇ ಪ್ರವಾಹ ಪೀಡಿತ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳಬೇಕಾಯಿತು.

ಸುಮಾರು 7.19 ಲಕ್ಷ ಹೆಕ್ಟೇರ್ ಬೆಳೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರೆ, ಸುಮಾರು 4.5 ಲಕ್ಷ ರೈತರು ಬೆಳೆ ನಷ್ಟ ಅನುಭವಿಸಿದರು. 80 ಮಂದಿ ಸಾವನ್ನಪ್ಪಿದರೆ, ಸುಮಾರು 4 ಲಕ್ಷ ಮನೆಗಳು ನಾಶವಾಗಿದ್ದವು. ಈ‌ ಮಹಾಮಳೆಯಿಂದ ಉಂಟಾದ ಪ್ರವಾಹವನ್ನು ನಿಭಾಯಿಸುವ ಅಗ್ನಿಪರೀಕ್ಷೆ ಬಿಎಸ್​​ವೈ ಸರ್ಕಾರಕ್ಕೆ ಆರಂಭದಲ್ಲೇ ಎದುರಾಯಿತು. ಇತ್ತ ಬಸವರಾಜ್ ಬೊಮ್ಮಾಯಿ‌ ಸಿಎಂ ಆದ ಬಳಿಕವೂ ರಾಜ್ಯದಲ್ಲಿ ಅತಿವೃಷ್ಟಿ ಮುಂದುವರಿಯಿತು‌. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಬೆಂಗಳೂರು ಸೇರಿ ಹಲವೆಡೆ ವರುಣ ಬೊಬ್ಬೆರೆದು ಆರ್ಭಟಿಸಿದ್ದ. ಮಳೆ ಪರಿಹಾರ ಸಂಬಂಧ ಬಿಜೆಪಿ ಸರ್ಕಾರ ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತು. ಹಾನಿ ಪರಿಹಾರ ಕಾರ್ಯ ಬಿಜೆಪಿ ಸರ್ಕಾರಕ್ಕೆ ಆಡಳಿತಾವಧಿಯಲ್ಲಿ ಕಾಡಿದ ದೊಡ್ಡ ಸಂಕಷ್ಟವಾಗಿತ್ತು.

ಕೇಂದ್ರದ ನೆರೆ ಪರಿಹಾರಕ್ಕಾಗಿ ಹರಸಾಹಸ: ರಾಜ್ಯ ಭೀಕರ ಅತಿವೃಷ್ಟಿಗೆ ಸುಮಾರು 40,000 ಕೋಟಿ ರೂ. ಬೃಹತ್ ಪ್ರಮಾಣದ ನಷ್ಟ ಅನುಭವಿಸಿತ್ತು. ಇಷ್ಟು ದೊಡ್ಡ ಪ್ರಮಾಣದ ನಷ್ಟ ಪರಿಹಾರ ಕೇಳುವುದು ಬಿಜೆಪಿ ಸರ್ಕಾರದ ಮುಂದಿದ್ದ ಅತ್ಯಂತ ಕಠಿಣ ಸವಾಲಾಗಿತ್ತು. ಇತ್ತ ಕೇಂದ್ರ ಸರ್ಕಾರ ಪರಿಹಾರ ಮೊತ್ತ ನೀಡುವಲ್ಲಿನ ವಿಳಂಬ ಧೋರಣೆ ಬಿಎಸ್ ವೈ ಹಾಗೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿತು.

ರಾಜ್ಯ ಸರ್ಕಾರದ ಹಲವು ಮನವಿ ಬಳಿಕ ಕೇಂದ್ರ ಸರ್ಕಾರ ಅಳೆದುತೂಗಿ ಪರಿಹಾರ ಮೊತ್ತ ಬಿಡುಗಡೆ ಮಾಡಿತ್ತು. ಪದೇ ಪದೆ ಸಿಎಂಗಳು ಕೇಂದ್ರದ ಮುಂದೆ ಪರಿಹಾರಕ್ಕಾಗಿ ದಂಬಾಲು ಬೀಳುವಂತಾಗಿದ್ದು. ಇದು ಪ್ರತಿಪಕ್ಷಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಪರಿಹಾರ ಹಣ ಕೇಳಿದ್ದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಗಿಟ್ಟಿಸಿಕೊಳ್ಳಲು ಹರಸಾಹಸಪಡಬೇಕಾಯಿತು. ಅಲ್ಪ ಪರಿಹಾರ ಪಡೆದ ಬಿಜೆಪಿ ಸರ್ಕಾರ ಆರ್ಥಿಕ ಸಂಕಷ್ಟದ ಮಧ್ಯೆ ತನ್ನದೇ ಬೊಕ್ಕಸದಿಂದ ಪರಿಹಾರ ಹಣ ಬಿಡುಗಡೆ ಮಾಡುವ ಅನಿವಾರ್ಯ ಎದುರಾಗಿತ್ತು.

ಕೊರೊನಾ ಮಹಾಮಾರಿ ಹೊಡೆತ:ಬಿಜೆಪಿ ಸರ್ಕಾರವನ್ನು ಹೆಮ್ಮಾರಿಯಾಗಿ ಕಾಡಿದ್ದು ಕೊರೊನಾ ಮಹಾಮಾರಿ. ಕೊರೊನಾ ಹತ್ತಿಕ್ಕಲು ಬಿಜೆಪಿ ಸರ್ಕಾರ ನಾನಾ ಕಸರತ್ತು ನಡೆಸಿತು.‌ ಕೊರೊನಾ ಹೇರಿಸಿದ ಲಾಕ್‌ಡೌನ್ ನಿಂದ ರಾಜ್ಯದ ಬೊಕ್ಕಸ ಖಾಲಿಯಾಗಿತ್ತು. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ ತನ್ನ ಸೀಮಿತ ಸಂಪನ್ಮೂಲವನ್ನು ಕೊರೊನಾ ನಿಯಂತ್ರಣಕ್ಕೆ ವಿನಿಯೋಗಿಸುವ ಸ್ಥಿತಿಗೆ ತಲುಪಿತ್ತು. ಸಾವಿರಾರು ಸಂಖ್ಯೆಯ ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಆಸ್ಪತ್ರೆ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆಗಳನ್ನು ಒದಗಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಆರ್ಥಿಕ ಚಟುವಟಿಕೆ ಬಹುತೇಕ ಸ್ತಬ್ದವಾದ ಕಾರಣ ರಾಜ್ಯದ ಬೊಕ್ಕಸ ಖಾಲಿಯಾಗಿತ್ತು. ಇತ್ತ ಅಭಿವೃದ್ಧಿ ಯೋಜನೆ ಮತ್ತು ಜನರ ಆರೋಗ್ಯ ಕಾಪಾಡುವ ಕೆಲಸದಲ್ಲಿ ಸಮತೋಲನ ಮಾಡುವುದು ಬಿಜೆಪಿ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು. ರಾಜ್ಯದ 6.50 ಕೋಟಿ ಜನರಿಗೆ ಕೋವಿಡ್ ಲಸಿಕೆ ಹಾಕಿಸುವ ಅತಿ ದೊಡ್ಡ ಸವಾಲು ಎದುರಿಸಬೇಕಾಯಿತು. ಸೀಮಿತ ಲಸಿಕೆ ಪೂರೈಕೆ, ಲಸಿಕೆ ಕೊರತೆ, ಹೆಚ್ಚುತ್ತಿದ್ದ ಕೊರೊನಾ ಪ್ರಕರಣ, ಲಾಕ್ ಡೌನ್, ಆರ್ಥಿಕ ಸಂಕಷ್ಟಗಳಿಂದ ಬಿಜೆಪಿ ಸರ್ಕಾರ ಹೈರಾಣಾಗಿತ್ತು.

ಬೆಟ್ಟದಷ್ಟು ಬೆಳೆದ ಬಾಕಿ ಬಿಲ್ ಮೊತ್ತದ ತಲೆಬಿಸಿ:ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಾಗಿ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿಬಿಲ್ ಮೊತ್ತ ಬೆಟ್ಟದಷ್ಟು ಬೆಳೆದು ನಿಂತಿದ್ದು, ಬಿಜೆಪಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಜಲಸಂಪನ್ಮೂಲ ಇಲಾಖೆ, ಲೋಕೋಪಯೋಗಿ, ಆರೋಗ್ಯ, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಾವಿರಾರು ಕೋಟಿ ರೂ‌‌. ಬಾಕಿ ಬಿಲ್ ಉಳಿದು ಕೊಂಡಿತ್ತು. ಆರ್ಥಿಕ ಸಂಕಷ್ಟದ ಮಧ್ಯೆ ಬಾಕಿ ಬಿಲ್ ಪಾವತಿಸುವುದು ಬಿಜೆಪಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದು ಕೂಡಾ ಗಮನಾರ್ಹ.

ಶೇ 40ರಷ್ಟು ಕಮಿಷನ್ ಹಗರಣದ ಆರೋಪ:ಆರ್ಥಿಕವಾಗಿ ಸೊರಗಿರುವ ಸರ್ಕಾರ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಪರದಾಡುವಂತಾಯಿತು. ಅದರ ಮಧ್ಯೆ ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ ಸಿಡಿಸಿದ 40% ಕಮಿಷನ್ ಆರೋಪ ದೊಡ್ಡದಾಗಿ ಸದ್ದು ಮಾಡಿತು. 40% ಕಮಿಷನ್ ನೀಡದೇ ಬಿಲ್ ಪಾವತಿಯಾಗುತ್ತಿಲ್ಲ ಎಂಬ ಗಂಭೀರ ಆರೋಪ ಮಾಡುವ ಮೂಲಕ ಬಿಜೆಪಿ ಸರ್ಕಾರದ ಮೇಲೆ ದೊಡ್ಡ ಕಪ್ಪುಚುಕ್ಕೆ ಬಿತ್ತು. ಈ ಆರೋಪದಿಂದ ಹೊರಬರಲು ಬಿಜೆಪಿ ಸರ್ಕಾರ ನಾನಾ ಕಸರತ್ತು ಮಾಡಿದರೂ ಅದು ನಿರೀಕ್ಷಿತ ಫಲ ನೀಡಿಲ್ಲ.

ಅದರಲ್ಲೂ ಕಮಿಷನ್ ಆರೋಪಿಸಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿದ್ದು ಬೊಮ್ಮಾಯಿ ಸರ್ಕಾರ ದೊಡ್ಡ ಬಿಕ್ಕಟ್ಟು ಎದುರಿಸಬೇಕಾಯಿತು.‌ ಗುತ್ತಿಗೆದಾರ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಮೇಲೆ ಬೊಟ್ಟು ಮಾಡುವ ಮೂಲಕ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಇತ್ತ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡಿತು. ಬಳಿಕ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಆರ್ಥಿಕ ಸಂಕಷ್ಟದ ಬರೆ: ಬಿಜೆಪಿ ಸರ್ಕಾರವನ್ನು ಅತಿಯಾಗಿ ಕಾಡಿರುವುದು ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟದ ಬರೆ. ಸತತ ಲಾಕ್ ಡೌನ್ ನಿಂದ ಬೊಕ್ಕಸ ಸೊರಗಿದ ಕಾರಣ ಸರ್ಕಾರವನ್ನು ಮತ್ತಷ್ಟು ಮಂಡಿಯೂರವಂತೆ ಮಾಡಿತು. ಇದರಿಂದ ಬಿಜೆಪಿ ಸರ್ಕಾರಕ್ಕೆ ಹಣಕಾಸು ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿತು. ಅಭಿವೃದ್ಧಿಗೆ ಅನುದಾನ ಕೊರತೆ, ಇಲಾಖೆಗಳ ಪ್ರಗತಿ ಕುಂಠಿತವಾಗುವ ಮೂಲಕ ಸರ್ಕಾರ ಸಾಕಷ್ಟು ಸಂಕಟ ಪಡಬೇಕಾಯಿತು. ಬಿಜೆಪಿ ಸರ್ಕಾರಕ್ಕೆ ಹಣಕಾಸು ನಿರ್ವಹಣೆ ಕಬ್ಬಿಣದ ಕಡಲೆಯಾಗಿಯೇ ಪರಿಣಮಿಸಿತು‌.

ಮೀಸಲಾತಿ ಹೋರಾಟದ ಕಿಚ್ಚು:ಬಿಜೆಪಿ ಸರ್ಕಾರವನ್ನು ಬಹುವಾಗಿ ಕಾಡಿದ ಮತ್ತೊಂದು ಸಂಕಷ್ಟ ವಿವಿಧ ಸಮುದಾಯಗಳ ಮೀಸಲಾತಿ ಹೋರಾಟ. ಅದರಲ್ಲೂ ಪಂಚಮಸಾಲಿ ಮೀಸಲಾತಿ ಹೋರಾಟದ ಕಿಚ್ಚು ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ಸವಾಲಿನ ವಿಚಾರವಾಗಿತ್ತು. ಅತಿ ಸೂಕ್ಷ್ಮ ವಿಚಾರವಾದ ಮೀಸಲಾತಿ ಕೂಗನ್ನು ಜಾಗರೂಕವಾಗಿ ನಿಭಾಯಿಸುವ ಸಂದಿಗ್ಧ ಪರಿಸ್ಥಿತಿ ಬೊಮ್ಮಾಯಿ ಸರ್ಕಾರದ್ದಾಗಿತ್ತು. ಒಂದೆಡೆ ಕುರುಬ ಸಮುದಾಯ, ಮತ್ತೊಂದೆಡೆ ಪಂಚಮಸಾಲಿಗಳು,ಇನ್ನೊಂದೆಡೆ ಒಕ್ಕಲಿಗರು, ಅತ್ತ ವಾಲ್ಮಿಕಿ ಸಮುದಾಯದವರು ಮೀಸಲಾತಿ ಬೇಡಿಕೆ ಇಟ್ಟು ಬಿಜೆಪಿ ಸರ್ಕಾರಕ್ಕೆ ದೊಡ್ಡ ಸವಾಲು ಒಡ್ಡಿದರು. ಮೀಸಲಾತಿ ಹೋರಾಟವನ್ನು ಜಾಗರೂಕವಾಗಿ ನಿಭಾಯಿಸುವುದರಲ್ಲಿ ಬಿಜೆಪಿ ಸರ್ಕಾರ ಹೈರಾಣಾಗಿತ್ತು.

ಪುನೀತ್ ರಾಜ್‍ಕುಮಾರ್ ನಿಧನದ ಆಘಾತ: ಬಿಜೆಪಿ ಸರ್ಕಾರಕ್ಕೆ ಎದುರಾದ ಮತ್ತೊಂದು ಅತಿದೊಡ್ಡ ಸವಾಲು ನಟ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ. ಅಪ್ಪು ಹೃದಯಾಘಾತದಿಂದ ನಿಧನದ ಸುದ್ದಿ ಕುಟುಂಬ, ಅಭಿಮಾನಿಗಳಿಗೆ ಮಾತ್ರವಲ್ಲ ಸರ್ಕಾರಕ್ಕೂ ಬರಸಿಡಿಲಿನಂತೆ ಎದುರಾಯಿತು. ಡಾ.ರಾಜಕುಮಾರ್ ನಿಧನದ ವೇಳೆ ಸಂಭವಿಸಿದ ಹಿಂಸಾಚಾರ ಸರ್ಕಾರದ ಕಣ್ಣ ಮುಂದೆ ಬಂದಿತ್ತು. ಪುನೀತ್ ರಾಜ್‍ಕುಮಾರ್ ನಿಧನದಿಂದಲೂ ಅದೇ ಹಿಂಸಾಚಾರ ಮರುಕಳಿಸುವ ಆತಂಕ ಎದುರಾಗಿತ್ತು. ಆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿ ಸೈ ಎನಿಸಿಕೊಂಡಿತು.

ಹಿಜಾಬ್ ವಿವಾದದ ಕಿಚ್ಚು: ಬೊಮ್ಮಾಯಿ ಸರ್ಕಾರಕ್ಕೆ ಎದುರಾದ ಮತ್ತೊಂದು ದೊಡ್ಡ ಸವಾಲು ಹಿಜಾಬ್ ವಿವಾದ. ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಹುಟ್ಟಿದ ಹಿಜಾಬ್ ವಿವಾದ ಬಿಜೆಪಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಶಾಲೆಗಳಲ್ಲಿ ಹಿಜಾಬ್ ಧರಿಸಲು ಪಟ್ಟು ಹಿಡಿದ ಮುಸ್ಲಿಂ ವಿದ್ಯಾರ್ಥಿನಿಯರು, ಮತ್ತೊಂದೆಡೆ ಹಿಂದೂ ಸಂಘಟನೆ, ವಿದ್ಯಾರ್ಥಿಗಳಿಂದ ಹಿಜಾಬ್ ವಿರುದ್ಧ ಕೇಸರಿ ಶಾಲಿನ ಹೋರಾಟ. ಈ ಹಿಜಾಬ್-ಕೇಸರಿ ವಿವಾದ ಬಿಜೆಪಿ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು. ಉಡುಪಿಯಲ್ಲಿ ಹತ್ತಿದ ಹಿಜಾಬ್ ಗಲಾಟೆ ರಾಜ್ಯಾದ್ಯಂತ ಹಬ್ಬಲು ಶುರುವಾಗಿತ್ತು. ವಿದ್ಯಾರ್ಥಿಗಳಿಂದ ಹಿಜಾಬ್ ಪರ-ವಿರೋಧ ಪ್ರತಿಭಟನೆ ಜೊತೆಗೆ ಕೆಲ ಸಂಘಟನೆಗಳು ಉರಿಯುವ ವಿವಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ್ದವು. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಬಿಜೆಪಿ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು.

ಹಲಾಲ್-ಜಟ್ಕಾ ಕಟ್ ವಿವಾದ: ಹಿಜಾಬ್ ವಿವಾದದ ಬಳಿಕ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು ಹಲಾಲ್-ಜಟ್ಕಾ ಕಟ್ ವಿವಾದ. ಹಲಾಲ್ ಮಾಂಸ ಖರೀದಿಸದಂತೆ ಹಿಂದೂ ಸಂಘಟನೆಗಳು ಅಭಿಯಾನ ನಡೆಸಿದವು. ಹಲಾಲ್ ಕಟ್ ಬದಲು ಜಟ್ಕಾ ಕಟ್ ಮಾಂಸ ಖರೀದಿಸುವಂತೆ ಅಭಿಯಾನ ನಡೆಸಿದವು.

ಬಳಿಕ ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ನಿಷೇಧ ಹೇರುವ ಅಭಿಯಾನ ಪ್ರಾರಂಭವಾಯಿತು. ಹಿಂದೂ ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳನ್ನು ಜಾತ್ರೆ, ದೇವಸ್ಥಾನಗಳ ಸುತ್ತಮುತ್ತ ನಿಷೇಧಿಸುವಂತೆ ಒತ್ತಡ ಹೇರಿದ್ದವು. ಬಳಿಕ ಆಜಾನ್ ವಿವಾದ ಬೊಮ್ಮಾಯಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತು. ಧ್ವನಿವರ್ಧಕಗಳ ಮೂಲಕ ಆಜಾನ್ ಹಾಕುವುದರ ವಿರುದ್ಧ ಹಿಂದೂ ಸಂಘಟನೆಗಳು ಬೀದಿ ಗಿಳಿಯಲು ಮುಂದಾಗಿದ್ದವು. ಆಜಾನ್ ಬದಲಿಗೆ ಹನುಮಾನ್ ಚಾಲೀಸಾ ಪಠಿಸುವ ಅಭಿಯಾನಕ್ಕೆ ಮುಂದಾಗಿದ್ದವು. ಈ ಆಜಾನ್-ಭಜನೆ ಸಂಘರ್ಷವನ್ನು ಸೂಕ್ಷ್ಮವಾಗಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರಕ್ಕೆ ಸಾಕು ಬೇಕಾಯಿತು.

ಬಿಜೆಪಿ ಕಾರ್ಯಕರ್ತರ ಹತ್ಯೆಯ ಕಿಚ್ಚು: ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಬಿಜೆಪಿ ಕಾರ್ಯಕರ್ತರ ಹತ್ಯೆಗಳು. ಒಂದೆಡೆ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕತ್ತನ ಹತ್ಯೆ, ಬಳಿಕ ಉಂಟಾದ ಉದ್ವಿಘ್ನ ವಾತಾವರಣ ಬಿಜೆಪಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿತ್ತು.‌ ಬಳಿಕ ದ.ಕನ್ನಡದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಿಜೆಪಿ ಸರ್ಕಾರಕ್ಕೆ ದೊಡ್ಡ ಆಘಾತವನ್ನು ನೀಡಿತು.

ಬಿಜೆಪಿ ಕಾರ್ಯಕರ್ತರ ಹತ್ಯೆಗಳಿಂದ ಪಕ್ಷದ ಕಾರ್ಯಕರ್ತರು ತಮ್ಮ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕರಾವಳಿ ಸಚಿವರ ವಿರುದ್ಧ ಬಿಜೆಪಿ ಕಾರ್ಯಕರ್ತರು ದೊಡ್ಡ ಪ್ರತಿಭಟನೆ ನಡೆಸಿದರು. ತಮ್ಮ ಕಾರ್ಯಕರ್ತರೇ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ಸವಾಲಾಯಿತು. ಬಿಜೆಪಿ ಸರ್ಕಾರದಲ್ಲೇ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂಬ ಆಕ್ರೋಶ ಬಿಜೆಪಿ ಕಾರ್ಯಕರ್ತರದ್ದಾಗಿತ್ತು. ಹಂತಕರನ್ನು ಹಿಡಿದು ಬಿಜೆಪಿ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ದೊಡ್ಡ ಸವಾಲು ಸರ್ಕಾರದ್ದಾಗಿತ್ತು.

ಪಠ್ಯ ಪರಿಷ್ಕರಣೆ ವಿವಾದದ ಕಿಡಿ:ಇತ್ತ ಬಿಜೆಪಿ ಸರ್ಕಾರಕ್ಕೆ ಇನ್ನಷ್ಟು ಕಾಡಿದ್ದು ಪಠ್ಯ ಪರಿಷ್ಕರಣೆಯ ಕಿಡಿ. ಪಠ್ಯ ಪರಿಷ್ಕರಣೆ‌ ವಿವಾದ ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿತು. ಪ್ರಗತಿಪರ ಚಿಂತಕರು, ರಾಜ್ಯ ಕಾಂಗ್ರೆಸ್ ನಾಯಕರು ಪಠ್ಯ ಪರಿಷ್ಕರಣೆ ವಿರುದ್ಧ ರಾಜ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದರು. ಅದರಲ್ಲೂ ಕೆಲ ಸ್ವಾಮಿಗಳು ಪಠ್ಯ ಪರಿಷ್ಕರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅದರಲ್ಲೂ ಬಸವಣ್ಣನ ವಿಚಾರ, ಅಂಬೇಡ್ಕರ್ ವಿಚಾರ, ನಾರಾಯಣಗುರು ಅಂಶ, ನಾಡಗೀತೆಗೆ ಅಪಪ್ರಚಾರದ ಆರೋಪ, ಕುವೆಂಪು ವಿಚಾರಕ್ಕೆ ಪಠ್ಯ ಪರಿಷ್ಕರಣೆ ವೇಳೆ ಕತ್ತರಿ ಹಾಕಿರುವ ಬಗ್ಗೆ ಪ್ರತಿಪಕ್ಷ, ಸ್ವಾಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿತು.

ಕುಕ್ಕರ್ ಬಾಂಬ್ ಬ್ಲಾಸ್ಟ್ :ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಬಿಜೆಪಿ ಸರ್ಕಾರಕ್ಕೆ ಎದುರಾದ ದೊಡ್ಡ ತಲೆನೋವು. ಪ್ರತಿಪಕ್ಷಗಳು ಕೂಡಲೇ ಬಿಜೆಪಿ ಸರ್ಕಾರದ ವಿರುದ್ಧ ವೈಫಲ್ಯದ ಆರೋಪದೊಂದಿಗೆ ಮುಗಿಬಿದ್ದರು. ಇತ್ತ ಸ್ಫೋಟದ ಆರೋಪಿಗಳನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳುವ ಸವಾಲು ಬಿಜೆಪಿಯದ್ದಾಗಿತ್ತು.

ಇದನ್ನೂಓದಿ:ಕಾರ್ಯಕರ್ತರನ್ನು ಕೇಳಿದ್ದರೆ ಅವರು ಒಪ್ಪುತ್ತಿರಲಿಲ್ಲ, ಅದಕ್ಕೆ ದಿಢೀರ್​ ನಿರ್ಧಾರ ಕೈಗೊಂಡಿದ್ದೇನೆ: ಈಶ್ವರಪ್ಪ

Last Updated : Apr 11, 2023, 6:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.