ಬೆಂಗಳೂರು: ವ್ಯಕ್ತಿ ವೈಭವೀಕರಣ ವಿರೋಧಿಯಾದ ಕಾಂಗ್ರೆಸ್ ಹೈಕಮಾಂಡ್ ಇಂದು ಸಿದ್ದರಾಮಯ್ಯ ಮುಂದೆ ಮಂಡಿಯೂರಿದೆ. ಈ ಕಾರ್ಯಕ್ರಮಕ್ಕೆ ಪಕ್ಷದ ಹೈಕಮಾಂಡ್ ಕೂಡಾ ಆಗಮಿಸುತ್ತಿರುವುದನ್ನು ನೋಡಿದರೆ ಅವರ ಪರಿಸ್ಥಿತಿ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಅನ್ನುವಂತಾಗಿದೆ ಎಂದು ಬಿಜೆಪಿ ವಕ್ತಾರ ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈಗ ಸಿದ್ದರಾಮಯ್ಯಗೆ ಕಾಂಗ್ರೆಸ್ ಸಣ್ಣದಾಗಿ ಕಾಣಿಸುತ್ತಿದೆ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ದೊಡ್ಡದಾಗಿ ಕಾಣುತ್ತಿದ್ದಾರೆ. ಅವರನ್ನು ಬಳಸಿಕೊಂಡು ಪಕ್ಷವನ್ನು ಮೇಲೆ ತರಲು ಮುಂದಾಗಿದ್ದಾರೆ. ನಮ್ಮ ಕಡೆ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂಬ ಗಾದೆ ಮಾತಿದೆ. ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಹಳಸಿದ ಅನ್ನ ತಿನ್ನಲು ಕಾಂಗ್ರೆಸ್ ಮುಂದಾಗಿದೆ ಎಂದು ಅವರು ಲೇವಡಿ ಮಾಡಿದರು.
ಇದನ್ನೂ ಓದಿ:ತಂದೆಯ ಮರಣದ ಬಳಿಕ ಮಕ್ಕಳ ಸರ್ನೇಮ್ ನಿರ್ಧರಿಸುವ ಹಕ್ಕು ತಾಯಿಗಿದೆ: ಸುಪ್ರೀಂ ತೀರ್ಪು