ETV Bharat / state

CET Result 2023: ಇಂದು ಸಿಇಟಿ ಫಲಿತಾಂಶ ಪ್ರಕಟ.. ರಿಸಲ್ಟ್​ ನೋಡಲು ಹೀಗೆ ಮಾಡಿ - ಈಟಿವಿ ಭಾರತ್ ಕನ್ನಡ ಸುದ್ದಿ

ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಇಂದು ಬೆಳಗ್ಗೆ 9.30ಕ್ಕೆ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
author img

By

Published : Jun 14, 2023, 6:13 PM IST

Updated : Jun 15, 2023, 7:09 AM IST

ಬೆಂಗಳೂರು : ನೀಟ್ ಪರೀಕ್ಷಾ ಫಲಿತಾಂಶದ ಬೆನ್ನಲ್ಲೇ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಕ್ಕೆ ಸಮಯ ನಿಗದಿಯಾಗಿದೆ. ಇಂದು ಬೆಳಗ್ಗೆ 9.30ಕ್ಕೆ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ. ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ.

ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಇಂದು ಬೆಳಗ್ಗೆ 09.30ಕ್ಕೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾತಿ ಬಯಸಿ ಬರೆದಿರುವ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನೀಟ್ ವಿದ್ಯಾರ್ಥಿಗಳ ಮೇಲಿದ್ದ ಕಾಳಜಿ ಸಿಇಟಿ ವಿದ್ಯಾರ್ಥಿಗಳ ಮೇಲೆ ಏಕಿಲ್ಲ: ಕೈ ನಾಯಕರ ಕಾಲೆಳೆದ ಬಿಜೆಪಿ

ಎಸ್ಎಸ್ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳೇ ಬಿಡುಗಡೆ ಮಾಡಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಧ್ಯಮಗೋಷ್ಟಿ ನಡೆಸಿ ಫಲಿತಾಂಶ ಪ್ರಕಟಿಸಿದ್ದರು. ಆದರೆ ಈಗ ಹೊಸ ಸರ್ಕಾರ ರಚನೆಯಾಗಿದ್ದು, ನೀತಿ ಸಂಹಿತೆ ಮುಗಿದಿರುವ ಹಿನ್ನೆಲೆಯಲ್ಲಿ ಇಲಾಖೆಯ ಸಚಿವರಾಗಿರುವ ಡಾ ಎಂ ಸಿ ಸುಧಾಕರ್ ಮಾಧ್ಯಮಗೋಷ್ಟಿ ನಡೆಸಿ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ.

ಇದನ್ನೂ ಓದಿ: ಸಿಇಟಿ ಪರೀಕ್ಷೆ 2023: ಆರ್​ಡಿ ಸಂಖ್ಯೆ ತಿದ್ದುಪಡಿಗೆ ಮತ್ತೊಂದು ಅವಕಾಶ

ವೃತ್ತಿಪರ ಕೋರ್ಸ್​ಗಳಿಗೆ ಪ್ರವೇಶಾತಿ ಬಯಸಿ 2.6 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದು, ಇವರ ಭವಿಷ್ಯ ಗುರುವಾರ ಬಹಿರಂಗವಾಗಲಿದೆ. ಕೆಇಎ ಅಧಿಕೃತ ವೆಬ್‌ಸೈಟ್‌ http://kea.kar.nic.in/ ಅಥವಾ https://cetonline.karnataka.gov.in/kea/ಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಮ್ಮ ಸಿಇಟಿ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: CET Result 2023: ಆರ್.ಡಿ ಸಂಖ್ಯೆ ಸರಿಪಡಿಸಿಕೊಳ್ಳುವ ಗಡುವು ಮುಕ್ತಾಯ.. ಜೂನ್ 15 ರಂದು ಸಿಇಟಿ ಫಲಿತಾಂಶ..?

ವೃತ್ತಿಶಿಕ್ಷಣ ಕೋರ್ಸ್​ಗಳಾದ ಇಂಜಿನಿಯರಿಂಗ್/ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನಡೆಸಲಾಗಿದೆ. ರಾಜ್ಯ ಸರ್ಕಾರ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಸಿಇಟಿ 2023: ಮೊದಲ ದಿನ ಸುಸೂತ್ರ; ಇಂದು ಭೌತ, ರಸಾಯನ ಶಾಸ್ತ್ರ ಪರೀಕ್ಷೆ

ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ವೇಳಾಪಟ್ಟಿ ಪ್ರಕಾರ ಮೇ 20- ಜೀವಶಾಸ್ತ್ರ ಮತ್ತು ಗಣಿತ, ಮೇ 21- ರಸಾಯನಶಾಸ್ತ್ರ, ಭೌತಶಾಸ್ತ್ರ, ಮೇ 22- ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಸಲಾಗಿತ್ತು.

ಇದನ್ನೂ ಓದಿ: ಹೆದ್ದಾರಿಯಲ್ಲಿ ಟ್ರಾಫಿಕ್​ ಜಾಮ್​ : ನೀಟ್​ ಪರೀಕ್ಷಾ ಕೇಂದ್ರಕ್ಕೆ ಆಗಮಿಸಲು ಪರದಾಡಿದ ವಿದ್ಯಾರ್ಥಿನಿ

Last Updated : Jun 15, 2023, 7:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.