ETV Bharat / state

ಸಿಇಟಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ: ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿದ ಕೆಇಎ - ಸಿಇಟಿ ಪರೀಕ್ಷಾ ದಿನಾಂಕ

ಸಿಇಟಿ ಪರೀಕ್ಷೆಯ ದಿನಾಂಕದಲ್ಲಿ ಬದಲಾವಣೆ ಆಗಿದ್ದು, ಏಪ್ರಿಲ್ 18 ಮತ್ತು 19 ರಂದು ಪರೀಕ್ಷೆಗಳು ನಡೆಯಲಿವೆ.

Etv Bharat
Etv Bharat
author img

By ETV Bharat Karnataka Team

Published : Jan 9, 2024, 9:02 PM IST

ಬೆಂಗಳೂರು: 2024 ರ ಏಪ್ರಿಲ್ 20 ಮತ್ತು 21ರಂದು ನಿಗದಿಯಾಗಿದ್ದ ಸಿಇಟಿ ಪರೀಕ್ಷಾ ದಿನಾಂಕದಲ್ಲಿ ಪರಿಷ್ಕರಣೆಯಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ-24) ನಡೆಸುವ ದಿನಾಂಕವನ್ನು ಎರಡು ದಿನಗಳ ಮಟ್ಟಿಗೆ ಹಿಂದೂಡಿದೆ. ಅದರ ಪ್ರಕಾರ ಏಪ್ರಿಲ್ 18 ಮತ್ತು 19ರಂದು ಪರೀಕ್ಷೆಗಳು ನಡೆಯಲಿವೆ.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಇಂದು ಪತ್ರಿಕಾ ಪ್ರಕಟಣೆ ನೀಡಿದ್ದು, ಏಪ್ರಿಲ್ 21ರಂದು ಎನ್​​ಡಿಎ ಪರೀಕ್ಷೆ ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅದರಂತೆ, ಕೆಸಿಇಟಿ ಕನ್ನಡ ಪರೀಕ್ಷೆ ಏಪ್ರಿಲ್ 20ರಂದು ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ಕೆಸಿಇಟಿ ಪರೀಕ್ಷೆ ತೆಗೆದುಕೊಳ್ಳುವುದಕ್ಕಾಗಿ ಜನವರಿ 10ರಿಂದ (ಬುಧವಾರ) ಫೆಬ್ರುವರಿ 10ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೆಡಿಕಲ್/ಡೆಂಟಲ್/ಆಯುಷ್/ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಸೇರಲು ಆಸಕ್ತಿ ಇರುವ ಅಭ್ಯರ್ಥಿಗಳೂ ಈಗಲೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಯುಜಿನೀಟ್-2024 ಫಲಿತಾಂಶಗಳ ಪ್ರಕಟಣೆಯ ನಂತರ ಕೆಇಎ ನಲ್ಲಿ ನೋಂದಾಯಿಸಲಾಗಿರುವ ಅಭ್ಯರ್ಥಿಗಳಿಗೆ NEET ಸ್ಕೋರ್ ಮತ್ತು ರೋಲ್ ನಂಬರ್ ದಾಖಲಿಸಲು ಇಂಟರ್‌ಫೇಸ್ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸಿಇಟಿ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಭಾಗವಾಗಿ ಈ ಬಾರಿ ಅರ್ಜಿಯನ್ನು "ಅರ್ಜಿ ಹಾಗೂ ಪರಿಶೀಲನೆ" ನಮೂನೆಯಲ್ಲಿ ಹೊರತರಲಾಗಿದೆ. ಇದರಿಂದಾಗಿ, ಅಭ್ಯರ್ಥಿಗಳ ದಾಖಲಾತಿಗಳನ್ನು ಭೌತಿಕವಾಗಿ ಪರಿಶೀಲಿಸಲು ಈ ಮುಂಚೆ ಹಿಡಿಯುತ್ತಿದ್ದ ಹೆಚ್ಚಿನ ಸಮಯ ಉಳಿತಾಯವಾಗುತ್ತದೆ ಎಂದು ವಿವರಿಸಲಾಗಿದೆ.

ಹೊಸ ಮಾದರಿಯಲ್ಲಿ, ಅಭ್ಯರ್ಥಿಗಳ ವಿವರಗಳನ್ನು, ಅಂದರೆ, ಶಾಲೆಗಳ ವ್ಯಾಸಂಗ, ಕನ್ನಡ ಮಾಧ್ಯಮ, ಜಾತಿ, ಆದಾಯ ಮುಂತಾದ ವಿವರಗಳನ್ನು SATS ಹಾಗೂ ಕಂದಾಯ ಇಲಾಖೆಯ ವೆಬ್‌ಸರ್ವೀಸ್ ಮೂಲಕ ಆನ್‌ಲೈನ್​ನಲ್ಲೇ ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ಪ್ರತ್ಯೇಕವಾಗಿ ದಾಖಲೆಗಳ ಪರಿಶೀಲನೆಗೆ ಭೌತಿಕವಾಗಿ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಪ್ರತಿ ವರ್ಷವೂ ಸುಮಾರು ಒಂದೂವರೆ ತಿಂಗಳ ಕಾಲ ನಡೆಯುತ್ತಿದ್ದ ಪರಿಶೀಲನೆಗಳ ಕಾರ್ಯಗಳು ಈಗ ಅರ್ಜಿ ಸಲ್ಲಿಸುವ ಸಮಯದಲ್ಲಿಯೇ ನಡೆಯಲಿವೆ ಎಂದು ತಿಳಿಸಲಾಗಿದೆ. ಹೀಗಾಗಿ, ಅಭ್ಯರ್ಥಿಗಳು ಎಲ್ಲ ವಿವರಗಳನ್ನು ಕಡ್ಡಾಯವಾಗಿ ಎಚ್ಚರಿಕೆಯಿಂದ ಭರ್ತಿ ಮಾಡಲು ಮತ್ತು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಅಪ್ ಲೋಡ್ ಮಾಡಲು ಸೂಚಿಸಲಾಗಿದೆ.

ಪ್ರಾಧಿಕಾರವು ಸುಮಾರು 250ಕ್ಕೂ ಹೆಚ್ಚು ನುರಿತ ಉಪನ್ಯಾಸಕರನ್ನು ಮಾಸ್ಟರ್ ಟ್ರೈನರ್ ಎಂದು ಗುರುತಿಸಿ ಅವರಿಗೆ ಅರ್ಜಿ ಸಲ್ಲಿಸುವ ಬಗ್ಗೆ ತರಬೇತಿಯನ್ನು ಈಗಾಗಲೇ ನೀಡಿದೆ. ಈ ಮಾಸ್ಟರ್ ಟ್ರೈನರ್​​ಗಳು, ಪ್ರತಿ ವಿಜ್ಞಾನ ಕಾಲೇಜಿನಲ್ಲಿ ಒಂದಿಬ್ಬರು ಉಪನ್ಯಾಸಕರನ್ನು ಗುರುತಿಸಿ ಅವರಿಗೆ "ಕಾಲೇಜು ಟ್ರೈನರ್" ತರಬೇತಿ ನೀಡಿ ಸಜ್ಜುಗೊಳಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಬಗ್ಗೆ ಸಂದೇಹಗಳಿದ್ದಲ್ಲಿ ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲಿನ ಕಾಲೇಜು ಟ್ರೈನರ್​​ಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬೇಕು ಎಂದೂ ಸೂಚಿಸಲಾಗಿದೆ.

ಮೊಬೈಲ್ ಆ್ಯಪ್ ಅಭಿವೃದ್ಧಿ: ಸುಧಾರಣೆಯ ಮತ್ತೊಂದು ಕ್ರಮವಾಗಿ ಕೆಇಎ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು, ಇದನ್ನು ಕೆಇಎ ವೆಬ್ಸೈಟ್​​ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಇದರಿಂದಾಗಿ, ಪರೀಕ್ಷಾ ವೇಳಾಪಟ್ಟಿ, ಸೂಚನೆ, ಅರ್ಜಿ ಪ್ರಕ್ರಿಯೆ ಯಾವ ಹಂತದಲ್ಲಿದೆ ಇತ್ಯಾದಿ ಮಾಹಿತಿಯನ್ನು ವಾಟ್ಸ್​ಆ್ಯಪ್​​ ಮೆಸೇಜ್ ಮೂಲಕವೇ ಪಡೆಯಬಹುದು. ಇದು, ಅಭ್ಯರ್ಥಿಗಳು ಪದೇಪದೇ ವೆಬ್ಸೈಟ್​ ಗೆ ಹೋಗಿ ಪರಿಶೀಲಿಸಬೇಕಾದ ಅಗತ್ಯವನ್ನು ತಪ್ಪಿಸುತ್ತದೆ. ಶುಲ್ಕ ಪಾವತಿ ಹಾಗೂ ಅರ್ಜಿಗೆ ಸಂಬಂಧಿಸಿದ ವಿವರಗಳು ಅಭ್ಯರ್ಥಿಗಳ ಪೋರ್ಟಲ್ (ಕ್ಯಾಂಡಿಡೇಟ್ ಪೋರ್ಟಲ್) ನಲ್ಲಿ ಲಭ್ಯವಿರುತ್ತವೆ.

ಇದನ್ನೂ ಓದಿ: ಪಿಎಸ್ಐ ಮರುಪರೀಕ್ಷೆಗೆ ದಿನಾಂಕ ನಿಗದಿ; ಅಭ್ಯರ್ಥಿಗಳು ಪಾಲಿಸಬೇಕಾದ ಕಡ್ಡಾಯ ನಿಯಮಗಳಿವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.