ಬೆಂಗಳೂರು: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ ಸಿಇಟಿ ಪರೀಕ್ಷೆ ಜೂನ್ 16, 17 ಹಾಗೂ 18ರಂದು ನಡೆಯಲಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮೊದಲನೇ ವರ್ಷ/ಮೊದಲ ಸೆಮಿಸ್ಟರ್ ಪ್ರವೇಶಕ್ಕೆ ಪರೀಕ್ಷೆ ನಡೆಸಲಿದೆ.
ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ ಕೋರ್ಸ್ಗಳ ಪ್ರವೇಶಕ್ಕಾಗಿ 2022ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.
- ಪರೀಕ್ಷೆ ಯಾವಾಗ?
- ಜೂನ್ 16 - ಜೀವಶಾಸ್ತ್ರ, ಗಣಿತ
- ಜೂನ್ 17 - ಭೌತಶಾಸ್ತ್ರ, ರಸಾಯನಶಾಸ್ತ್ರ
- ಜೂನ್ 18 - ಕನ್ನಡ ಭಾಷಾ ಪರೀಕ್ಷೆ
ಸಮಯ: ಪರೀಕ್ಷೆಯು ಬೆಳಗ್ಗೆ 10:30ರಿಂದ 11:50ರವರೆಗೆ ಹಾಗೂ ಮಧ್ಯಾಹ್ನ 2:30ರಿಂದ 3:50ರ ಗಂಟೆವರೆಗೆ ನಡೆಯಲಿದ್ದು, ಪ್ರತಿ ವಿಷಯಕ್ಕೂ 60 ಅಂಕ ನಿಗದಿ ಮಾಡಲಾಗಿದೆ.
ಕಟ್ಟುನಿಟ್ಟಿನ ನಿರ್ಬಂಧ: ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯಲ್ಲೂ ಹಲವು ನಿರ್ಬಂಧ ಹೇರಲಾಗುತ್ತದೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ. ಹೀಗಾಗಿ ಈ ನಿಟ್ಟಿನಲ್ಲಿ ಸಕಲ ತಯಾರಿ ನಡೆಸಿರುವ ಕೆಇಎ ಸರ್ಕಾರದೊಂದಿಗೆ ಚರ್ಚಿಸಿ ಹಲವು ವಿಚಾರಗಳಿಗೆ ನಿರ್ಬಂಧ ವಿಧಿಸಲು ಚಿಂತಿಸಿದೆ. ಮೇ 30ರಂದು ಅಭ್ಯರ್ಥಿಗಳು ಸಿಇಟಿ ಪರೀಕ್ಷೆ ಪ್ರವೇಶ ಪತ್ರಗಳನ್ನು ಬೆಳಗ್ಗೆ 11 ಗಂಟೆ ಬಳಿಕ ಡೌನ್ಲೋಡ್ ಮಾಡಿಕೊಳ್ಳಬಹುದು. ಅದೇ ದಿನ ಪರೀಕ್ಷೆಯ ಮಾರ್ಗಸೂಚಿ ಬಿಡುಗಡೆ ಆಗಲಿದೆ.
ಈ ಸಲದ ಸಿಇಟಿ ಪರೀಕ್ಷೆಗೆ ಒಟ್ಟು 2 ಲಕ್ಷದ 11 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿದ್ದು, ಈ ಪೈಕಿ 1 ಲಕ್ಷದ 4 ಸಾವಿರ ಪುರುಷ ವಿದ್ಯಾರ್ಥಿ, 1 ಲಕ್ಷದ 7 ಸಾವಿರ ಮಹಿಳಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಅಕ್ರಮ ತಡೆಗಟ್ಟಲು ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ.
ಪರೀಕ್ಷೆಗೆ ಯಾವುದೇ ರೀತಿಯ ಆಭರಣಗಳನ್ನ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ಡಿಜಿಟಲ್ ವಾಚ್, ಕ್ಯಾಲ್ಕುಲೇಟರ್ಗಳಿಗೂ ನಿಷೇಧ ಇರಲಿದೆ. ಅಲ್ಲದೇ ಪರೀಕ್ಷಾ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಜಾಮರ್, ಮೆಟಲ್ ಡಿಡೆಕ್ಟರ್ಗಳ ಅಳವಡಿಕೆಗೂ ಕೆಇಎ ಬೋರ್ಡ್ ಚಿಂತನೆ ನಡೆಸಿದೆ.
ಇದನ್ನೂ ಓದಿ: ಮಂಗಳೂರು: ಪೊಲೀಸರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1ಕೋಟಿ ರೂ. ನಿಧಿ ಸ್ಥಾಪನೆ